ಪತ್ತೆಯಾಗುತ್ತಲೇ ಇವೆ ಪಾಕ್ ಕಳ್ಳಕಿಂಡಿಗಳು! ಪಾಕ್​ ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ

ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್​ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಪತ್ತೆ ಆಗಿದೆ. 10 ದಿನಗಳ ಹಿಂದೆ ಪತ್ತೆ ಆದ ಎರಡನೇ ಸುರಂಗ ಇದಾಗಿದೆ.

ಪತ್ತೆಯಾಗುತ್ತಲೇ ಇವೆ ಪಾಕ್ ಕಳ್ಳಕಿಂಡಿಗಳು! ಪಾಕ್​ ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ
ಪಾಕಿಸ್ತಾನ ತೋಡಿದ ಸುರಂಗ
Edited By: ಸಾಧು ಶ್ರೀನಾಥ್​

Updated on: Jan 23, 2021 | 3:19 PM

ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಪತ್ತೆ ಹಚ್ಚಿದೆ. ಭಾರತದ ಗಡಿ ಒಳಗೆ ನುಸುಳಲು ಉಗ್ರರು ಈ ಸುರಂಗ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್​ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಕಾಣಿಸಿದೆ. 10 ದಿನಗಳ ಹಿಂದೆ ಪತ್ತೆ ಆದ ಎರಡನೇ ಸುರಂಗ ಇದಾಗಿದೆ. ಆರು ತಿಂಗಳಿಂದ ಇಲ್ಲಿವರೆಗೆ 4 ರಹಸ್ಯ ಮಾರ್ಗಗಳನ್ನು ಸೇನೆ ಮುಚ್ಚಿದೆ.

ಜನವರಿ 13ರಂದು ಹಿರಾನಗರ ಸೆಕ್ಟರ್​ನ ಬೋಬಿಯಾನ ಗ್ರಾಮದಲ್ಲಿ 150 ಮೀಟರ್​ ಉದ್ದದ ಟನೆಲ್​ ಪತ್ತೆ ಆಗಿತ್ತು. ಮೂರು ಮೀಟರ್​ ಅಗಲ ಇದ್ದ ಈ ಸುರಂಗ ನೇರವಾಗಿ ಪಾಕಿಸ್ತಾನವನ್ನು ಸಂಪರ್ಕ​ ಮಾಡುತ್ತಿತ್ತು. ಸದ್ಯ, ಈ ಭಾಗದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಯಾರಾದರೂ ನುಸುಳಿ ಒಳ ಬಂದಿದ್ದಾರೆಯೇ ಎನ್ನುವುದನ್ನು ಸೇನೆ ಪತ್ತೆ ಹಚ್ಚುತ್ತಿದೆ.

ಅಟಲ್​ ಸುರಂಗಮಾರ್ಗದಲ್ಲಿ ಪೊಲೀಸರ ಗೂಂಡಾಗಿರಿ: ವೈರಲ್​ ಆಯ್ತು ವಿಡಿಯೋ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us