ಮುಂಬೈಯಲ್ಲಿ ₹15 ಕೋಟಿ ಮೌಲ್ಯದ ಹೆರಾಯಿನ್ ವಶ; ಇಬ್ಬರ ಬಂಧನ

ಮುಂಬೈ ಅಪರಾಧ ವಿಭಾಗದ  ನಾರ್ಕೋಟಿಕ್ಸ್ ವಿರೋಧಿ ಸೆಲ್  ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಮುಂಬೈನ ಡೋಂಗ್ರಿ ಪ್ರದೇಶದಿಂದ 15 ಕೋಟಿ ಮೌಲ್ಯದ 5 ಕೆಜಿ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸ್ ಕಮಿಷನರ್  ಹೇಮಂತ್ ನಗ್ರಾಲೆ  ಹೇಳಿದ್ದಾರೆ.

ಮುಂಬೈಯಲ್ಲಿ ₹15 ಕೋಟಿ ಮೌಲ್ಯದ  ಹೆರಾಯಿನ್ ವಶ; ಇಬ್ಬರ ಬಂಧನ
ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಲೆ
Edited By:

Updated on: Oct 06, 2021 | 6:13 PM

ಮುಂಬೈ: ಮುಂಬೈಯ ಡೋಂಗ್ರಿ ಪ್ರದೇಶದಲ್ಲಿ ಮುಂಬೈ ಪೋಲಿಸ್ ನ ನಾರ್ಕೋಟಿಕ್ ವಿರೋಧಿ   ಘಟಕ (Anti-Narcotics Cell) ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಮತ್ತು ಅವರ ಬಳಿಯಿಂದ ₹15 ಕೋಟಿ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ರಾಜಸ್ಥಾನದ ನಿವಾಸಿಗಳಾದ ಆರೋಪಿಗಳು ತಮ್ಮ ಗ್ರಾಹಕರಿಗೆ ಮಾರಾಟ ಮಾಡಲು ಮುಂಬೈಗೆ ಬಂದಿದ್ದರು ಎಂದು ಅಧಿಕಾರಿಯು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಒಂದು ಸುಳಿವು ಆಧರಿಸಿ, ಮುಂಬೈನ ಅಪರಾಧ ಶಾಖೆಯ ನಾರ್ಕೋಟಿಕ್ಸ್ ಸೆಲ್ ದಕ್ಷಿಣ ಮುಂಬೈನ ಡೋಂಗ್ರಿ ಪ್ರದೇಶದಿಂದ ಇಬ್ಬರನ್ನು ಬಂಧಿಸಿತು ಎಂದು ಅವರು ಹೇಳಿದರು. ಶೋಧದ ಸಮಯದಲ್ಲಿ, ಆಂಟಿ-ನಾರ್ಕೋಟಿಕ್ಸ್ ಸೆಲ್ ತಂಡವು ಆರೋಪಿಗಳಿಂದ ಸುಮಾರು ಏಳು ಕೆಜಿಯಷ್ಟು ನಿಷೇಧಿತ ವಸ್ತುವನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಮುಂಬೈ ಅಪರಾಧ ವಿಭಾಗದ  ನಾರ್ಕೋಟಿಕ್ಸ್ ವಿರೋಧಿ ಸೆಲ್  ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಮುಂಬೈನ ಡೋಂಗ್ರಿ ಪ್ರದೇಶದಿಂದ 15 ಕೋಟಿ ಮೌಲ್ಯದ 5 ಕೆಜಿ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ರಾಜಸ್ಥಾನಕ್ಕೆ ಸೇರಿದವರು ಎಂದು ಮುಂಬೈ ಪೊಲೀಸ್ ಕಮಿಷನರ್  ಹೇಮಂತ್ ನಗ್ರಾಲೆ  ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರೂಖ್ ಖಾನ್ ಮಗ ಸೇರಿ ಒಟ್ಟು 11 ಜನರ ಬಂಧನ, ಆರೋಪಿಗಳು ಅ.11ರವರೆಗೆ ಎನ್​ಸಿಬಿ ಕಸ್ಟಡಿಗೆ