ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಮ್-1 ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಬಹುನಿರೀಕ್ಷಿತ ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಮ್-1 ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ನಿನ್ನೆ ಈ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಭಾರತೀಯ ವಾಯಪಡೆಗೆ ಆನೆ ಬಲ ಬಂದಂತಾಗಿದೆ. ರುದ್ರಮ್-1 ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದೆ. ಒಡಿಶಾ ಕರಾವಳಿ ತೀರದಲ್ಲಿ ಡಿಆರ್ಡಿಒ ರುದ್ರಮ್-1 ಕ್ಷಿಪಣಿ ಪರೀಕ್ಷೆಯನ್ನ ನಡೆಸಿತು. ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಮ್-1 ಆ್ಯಂಟಿ ರೇಡಿಯೇಷನ್ ಮಿಸೈಲ್ ಅನ್ನು ಅಳವಡಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿ ನಿಖರವಾದ ಸಮಯಕ್ಕೆ ಕರಾರುವಕ್ಕಾಗಿ ಗುರಿಯನ್ನ ಭೇದಿಸಿದೆ. ಅಷ್ಟಕ್ಕೂ ಡಿಫೆನ್ಸ್ ರಿಸರ್ಚ್ ಌಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ […]
ಬಹುನಿರೀಕ್ಷಿತ ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಮ್-1 ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ನಿನ್ನೆ ಈ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಭಾರತೀಯ ವಾಯಪಡೆಗೆ ಆನೆ ಬಲ ಬಂದಂತಾಗಿದೆ.
ರುದ್ರಮ್-1 ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದೆ. ಒಡಿಶಾ ಕರಾವಳಿ ತೀರದಲ್ಲಿ ಡಿಆರ್ಡಿಒ ರುದ್ರಮ್-1 ಕ್ಷಿಪಣಿ ಪರೀಕ್ಷೆಯನ್ನ ನಡೆಸಿತು. ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಮ್-1 ಆ್ಯಂಟಿ ರೇಡಿಯೇಷನ್ ಮಿಸೈಲ್ ಅನ್ನು ಅಳವಡಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿ ನಿಖರವಾದ ಸಮಯಕ್ಕೆ ಕರಾರುವಕ್ಕಾಗಿ ಗುರಿಯನ್ನ ಭೇದಿಸಿದೆ. ಅಷ್ಟಕ್ಕೂ ಡಿಫೆನ್ಸ್ ರಿಸರ್ಚ್ ಌಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ಅಭಿವೃದ್ಧಿಪಡಿಸಿದ ರುದ್ರಮ್ ಕ್ಷಿಪಣಿ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ. ಪ್ರಾಯೋಗಿಕ ಹಂತದಲ್ಲಿ ಯುದ್ಧವಿಮಾನವಾದ ಸುಖೋಯ್-30MKI ಮೂಲಕ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಯಶಸ್ವಿಯಾಗಿರುವ ಕಾರಣ ಇದೀಗ ಮಿರಾಜ್ 2000, ಜಾಗ್ವಾರ್, HAL ತೇಜಸ್ ಹಾಗೂ HAL ಮಾರ್ಕ್ ಯುದ್ಧ ವಿಮಾನದಲ್ಲೂ ಅಳವಡಿಸಲಾಗುತ್ತದೆ.
#WATCH: 'Rudram’ Anti-Radiation Missile fired from a Sukhoi-30 fighter aircraft off the east coast.
The missile, developed by Defence Research and Development Organisation, was test-fired successfully today and is the country’s first indigenous Anti Radiation missile for IAF. pic.twitter.com/qVDT3gdqEN
— ANI (@ANI) October 9, 2020