ರಸ್ತೆ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುವ ವ್ಯಕ್ತಿಗೆ ₹5,000  ನಗದು ಬಹುಮಾನ: ಕೇಂದ್ರ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2021 | 1:13 PM

Union ministry of road transport and highways ಅಪಘಾತಕ್ಕೀಡಾದ ಜನರಿಗೆ ತಕ್ಷಣದ ನೆರವು ನೀಡುವ ಮೂಲಕ ಮತ್ತು ಅಪಘಾತವಾದ ಕೆಲವೇ ಹೊತ್ತಿನಲ್ಲಿ ಅವರನ್ನು ಆಸ್ಪತ್ರೆ/ಟ್ರಾಮಾ ಕೇರ್ ಸೆಂಟರ್‌ಗೆ ಕರೆದೊಯ್ದು ಜೀವವನ್ನು ಉಳಿಸಿದ ಗುಡ್ ಸಮರಿಟನ್‌ಗೆ ಪ್ರಶಸ್ತಿ ನೀಡುವ ಯೋಜನೆ ಇದಾಗಿದೆ

ರಸ್ತೆ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುವ ವ್ಯಕ್ತಿಗೆ ₹5,000  ನಗದು ಬಹುಮಾನ: ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಪ್ರಾಣ ರಕ್ಷಣೆ ಮಾಡಿದ ವ್ಯಕ್ತಿಗಳಿಗೆ ಪ್ರತಿಫಲ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Union ministry of road transport and highways) ಈ ಯೋಜನೆಗೆ ಮಾರ್ಗಸೂಚಿಗಳನ್ನು ನೀಡಿದೆ. ಇದು ಅಕ್ಟೋಬರ್ 15, 2021 ರಿಂದ ಮಾರ್ಚ್ 31, 2026 ರವರೆಗೆ ಜಾರಿಯಲ್ಲಿರುತ್ತದೆ. ” ಅಪಘಾತಕ್ಕೀಡಾದ ಜನರಿಗೆ ತಕ್ಷಣದ ನೆರವು ನೀಡುವ ಮೂಲಕ ಮತ್ತು ಅಪಘಾತವಾದ ಕೆಲವೇ ಹೊತ್ತಿನಲ್ಲಿ ಅವರನ್ನು ಆಸ್ಪತ್ರೆ/ಟ್ರಾಮಾ ಕೇರ್ ಸೆಂಟರ್‌ಗೆ ಕರೆದೊಯ್ದು ಜೀವವನ್ನು ಉಳಿಸಿದ ಗುಡ್ ಸಮರಿಟನ್‌ಗೆ ಪ್ರಶಸ್ತಿ ನೀಡುವ ಯೋಜನೆ ಇದಾಗಿದೆ ಎಂದು ರಸ್ತೆ ಸಚಿವಾಲಯವು ಸೋಮವಾರ ಹೇಳಿದೆ. ಪ್ರತಿ ಪರೋಪಕಾರಿ ವ್ಯಕ್ತಿಗೆ ಪ್ರಶಸ್ತಿಯ ಮೊತ್ತ ರೂ 5,000 ಆಗಿದ್ದು, ಪ್ರಮಾಣಪತ್ರವೂ ಇರುತ್ತದೆ ಎಂದು ಅದು ಹೇಳಿದೆ. ಅಪಘಾತದ ನಂತರ ಒಂದು ಗಂಟೆಯ ಅವಧಿಯು ಗೋಲ್ಡನ್ ಅವರ್ ಆಗಿದೆ ಮತ್ತು ಸಂತ್ರಸ್ತರಿಗೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಒದಗಿಸುವ ಮೂಲಕ ಸಾವನ್ನು ತಡೆಯುವ ಹೆಚ್ಚಿನ ಸಂಭವನೀಯತೆ ಇದೆ.

ಮೋಟಾರು ವಾಹನ ತಿದ್ದುಪಡಿ ಕಾಯ್ದೆ, 2019 ರ ಸೆಕ್ಷನ್ 134 ಎ ಅಡಿಯಲ್ಲಿನಶ್ರ(Section 134A of the Motor Vehicle Amendment Act, 2019)  ನಿಯಮಗಳ ಪ್ರಕಾರ, ಸೆಪ್ಟೆಂಬರ್ 29, 2020 ರಂದು ಉತ್ತಮ ಸಮರಿಟಿಯನ್​​ ನಿಯಮಗಳನ್ನು ಸಚಿವಾಲಯವು ಸೂಚಿಸಿತು. “ಈಗ ನಗದು ಮೂಲಕ ಸಾಮಾನ್ಯ ಜನರನ್ನು ಪ್ರೇರೇಪಿಸುವ ಅವಶ್ಯಕತೆ ಇದೆ ಎಂದು ಭಾವಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸಲು, ರಸ್ತೆ ಅಪಘಾತ ಸಂತ್ರಸ್ತರ ಜೀವಗಳನ್ನು ಉಳಿಸಲು ಇತರರನ್ನು ಪ್ರೇರೇಪಿಸಲು ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳ ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.

ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಒಬ್ಬ ವ್ಯಕ್ತಿಗೆ ವರ್ಷಕ್ಕೆ ಗರಿಷ್ಠ ಐದು ಬಾರಿ ಈ ಪ್ರಶಸ್ತಿ ನೀಡಬಹುದು. ಸಚಿವಾಲಯವು ಅತ್ಯಂತ ಯೋಗ್ಯ ಗುಡ್ ಸಮರಿಟಿನ್​​ಗೆ​​ 10 ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ನೀಡಲಿದ್ದು, ಇಡೀ ವರ್ಷದಲ್ಲಿ ಪ್ರಶಸ್ತಿ ಪಡೆದ ಎಲ್ಲರಿಂದ ಅವರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅವರಿಗೆ ತಲಾ ₹ 100,000 ಬಹುಮಾನ ನೀಡಲಾಗುವುದು ಎಂದು ಹೇಳಿದೆ. ಮಾರ್ಗಸೂಚಿಗಳ ಪ್ರಕಾರ ಒಂದಕ್ಕಿಂತ ಹೆಚ್ಚು ಒಳ್ಳೆಯ ಸಮರಿಟನ್ ಒಬ್ಬರಿಗಿಂತ ಹೆಚ್ಚು ಸಂತ್ರಸ್ತರ ಜೀವವನ್ನು ಉಳಿಸಿದರೆ, ಉಳಿಸಿದ ಪ್ರತಿಯೊಬ್ಬ ವ್ಯಕ್ತಿಗೆ ಪ್ರಶಸ್ತಿಯ ಮೊತ್ತವು 5,000 ಆಗಿರುತ್ತದೆ, ಪ್ರತಿ ಉತ್ತಮ ಸಮರಿಟನ್‌ಗೆ ಗರಿಷ್ಠ ₹ 5,000 ಇರುತ್ತದೆ. ಉತ್ತಮ ಸಮರಿಟನ್ನರಿಗೆ ಬಹುಮಾನ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗೆ ಆರಂಭಿಕ ಅನುದಾನವಾಗಿ ₹ 5 ಲಕ್ಷವನ್ನು ನೀಡುವುದಾಗಿ ಸಚಿವಾಲಯ ಹೇಳಿದೆ.

ಅಪಘಾತದ ಬಗ್ಗೆ ಗುಡ್ ಸಮರಿಟನ್ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಅಧಿಕೃತ ಲೆಟರ್ ಪ್ಯಾಡ್‌ನಲ್ಲಿ ವೈದ್ಯರಿಂದ ವಿವರಗಳನ್ನು ಪರಿಶೀಲಿಸಿದ ನಂತರ ಪೊಲೀಸರು ವ್ಯಕ್ತಿಗೆ ಸ್ವೀಕೃತಿ ನೀಡುತ್ತಾರೆ ಎಂದು ಮಾರ್ಗಸೂಚಿಗಳು ಹೇಳುತ್ತವೆ. ಸ್ವೀಕೃತಿಯ ಪ್ರತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಮೌಲ್ಯಮಾಪನ ಸಮಿತಿಗೆ ಕಳುಹಿಸಲಾಗುತ್ತದೆ., ಒಂದು ಪ್ರತಿಯನ್ನು ಗುಡ್ ಸಮರಿಟನ್ ಗೆ ನೀಡಲಾಗುತ್ತದೆ. ಗುಡ್ ಸಮರಿಟನ್ ರಸ್ತೆ ಅಪಘಾತದ ಸಂತ್ರಸ್ತರನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ, ಆಸ್ಪತ್ರೆಯು ಎಲ್ಲಾ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡುತ್ತದೆ. ಅಂತಹ ಉತ್ತಮ ಸಮರಿಟನ್​​ಗೆ ಪೋಲಿಸ್ ಸ್ವೀಕೃತಿ ನೀಡಲಿದೆ ಎಂದು ಅದು ಹೇಳಿದೆ.

ಕಳೆದ ತಿಂಗಳು ರಾಜಸ್ಥಾನ ಸರ್ಕಾರವು ರಸ್ತೆ ಅಪಘಾತದ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಮೂಲಕ ಜೀವ ಉಳಿಸುವ ಉತ್ತಮ ಸಮರಿಟನ್​​ಗೆ ಇದೇ ರೀತಿಯ ಬಹುಮಾನವನ್ನು ಘೋಷಿಸಿತು. ಮುಖ್ಯಮಂತ್ರಿ ಚಿರಂಜೀವಿ ಜೀವನ್ ರಕ್ಷಕ್ ಯೋಜನೆ ಅಡಿಯಲ್ಲಿ ₹ 5,000 ನಗದು ಬಹುಮಾನ ಮತ್ತು  ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಹೇಳಿದ್ದರು.

2020 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದಲ್ಲಿ 366,138 ರಸ್ತೆ ಅಪಘಾತಗಳು ಸಂಭವಿಸಿದ್ದು, 131,714 ಸಾವುಗಳಿಗೆ ಕಾರಣವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ