ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು

| Updated By: ಸಾಧು ಶ್ರೀನಾಥ್​

Updated on: Jan 02, 2021 | 12:01 PM

ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್​ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್​ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ಅಲೆಗಳು ಮೂಡುವಂತೆ ಮಾಡುತ್ತದೆ...

ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು
ಪ್ಯಾಂಗೋಂಗ್​ ಸರೋವರ
Follow us on

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಕಳೆದ ಎಂಟು ತಿಂಗಳಿಂದಲೂ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದೆ.. ಒಂದೆಡೆ ಉನ್ನತ ಮಟ್ಟದ ಸಭೆ ಮಾತುಕತೆ ನಡೆಯುತ್ತಿದ್ದರೆ, ಇತ್ತ ಗಡಿಯಲ್ಲಿ ಎರಡೂ ಸೇನೆಗಳು ಪದೇಪದೆ ತಮ್ಮ ಬಲ ಪ್ರದರ್ಶನ ಮಾಡುತ್ತಿವೆ. ಈ ಮಧ್ಯೆ ಭಾರತೀಯ ಸೇನೆ 12 ಅತಿವೇಗದ ಪೆಟ್ರೋಲಿಂಗ್​ (ಗಸ್ತು) ಬೋಟ್​ಗಳಿಗೆ ಆದೇಶ ನೀಡಿದೆ.

ಪೂರ್ವ ಲಡಾಖ್​ನ ಪ್ಯಾಂಗೋಂಗ್ ತ್ಸೋ ಸರೋವರ ಸೇರಿ, ಪರ್ವತ ಪ್ರದೇಶದಲ್ಲಿರುವ ಇತರ ಜಲಮೂಲಗಳಲ್ಲಿ ಗಸ್ತು ತಿರುಗಲು, ಕಣ್ಗಾವಲು ಇಡುವ ಸಲುವಾಗಿ, ಮುಂದುವರಿದ-ಆಧುನಿಕ ಸೌಕರ್ಯವುಳ್ಳ 12 ಬೋಟ್​ಗಳನ್ನು ಗೋವಾದ ಪಿಎಸ್​​ಯು ಹಡಗು ನಿರ್ಮಾಣ ಕೈಗಾರಿಕಾ ಸಂಸ್ಥೆಯಿಂದ ಖರೀದಿಸಲು ಮುಂದಾಗಿದೆ. ಗಸ್ತು ಹಡಗುಗಳ ಖರೀದಿ, ನಾಲ್ಕು ವರ್ಷಗಳ ಕಾಲ ಅದರ ಬಿಡಿಭಾಗಗಳ ನಿರ್ವಹಣೆಗಾಗಿ ಕಂಪನಿಯೊಂದಿಗೆ ಗುರುವಾರ 65 ಕೋಟಿ ರೂ.ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಭಾರತೀಯ ಸೇನೆ ಟ್ವೀಟ್ ಮಾಡಿಕೊಂಡಿದೆ.

ಒಪ್ಪಂದದ ಅನ್ವಯ ಗಸ್ತು ಹಡಗುಗಳು ಗೋವಾದಿಂದ ಮೇ ತಿಂಗಳಿಂದ ಸೇನೆಯನ್ನು ತಲುಪಲು ಪ್ರಾರಂಭವಾಗಲಿದೆ. ಇವೆಲ್ಲವುಗಳನ್ನೂ ಪ್ಯಾಂಗೋಂಗ್​ಸರೋವರದಲ್ಲಿ ನಿಯೋಜಿಸಲಾಗುವುದು ಎಂದು ಸೇನಾ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್​ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್​ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ಅಲೆಗಳು ಮೂಡುವಂತೆ ಮಾಡುತ್ತದೆ. ಇದರಿಂದ ಭಾರತ ಸೇನೆಯ ಹಗುರವಾದ ಬೋಟ್​​ಗಳು ತಳ್ಳಲ್ಪಡುತ್ತವೆ. ಹಾಗಾಗಿ ನಮ್ಮ ಸೇನೆಗೂ ಕೂಡ ಅತ್ಯುತ್ತಮ ಸೌಕರ್ಯಗಳುಳ್ಳ, ವೇಗದ ಬೋಟ್​ಗಳ ಅವಶ್ಯಕತೆ ಇದೆ ಎಂದು ಮಾಜಿ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ಬಿ.ಎಸ್​. ಜಸ್ವಾಲ್​ ಹೇಳಿದ್ದಾರೆ.

ಚೀನಾಕ್ಕೆ ತಕ್ಕ ತಿರುಗೇಟು ನೀಡಲು ಸರೋವರದಲ್ಲಿ ಸ್ಟೀಲ್​ ಹಲ್​ ಬೋಟ್​ ಬಿಡಲಿದೆ ಭಾರತೀಯ ಸೇನೆ!