ಸಿಹಿ ಸುದ್ದಿ: ಭಾರತದಲ್ಲಿ ಕೊವಿಶೀಲ್ಡ್ ವ್ಯಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದ DCGI ..!
ನಿನ್ನೆ ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ತುಂಬಾ ದೊಡ್ಡದಾದ ಹಾಗೂ ಭರವಸೆ ಮೂಡಿಸುವಂಥ ಗುಡ್ ನ್ಯೂಸ್ ಸಿಕ್ಕಿದೆ. ಅದೇನಂದ್ರೆ, ಕೊವಿಶೀಲ್ಡ್ ಲಸಿಕೆ ಬಳಕೆಗೆ ತಜ್ಞರ ಸಿಡಿಎಸ್ಸಿಒ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.
ದೆಹಲಿ: ಬ್ರಿಟನ್ನ ಆ ಮಹಾಮಾರಿ ವೈರಸ್ ನಮ್ಮ ದೇಶದ, ನಮ್ಮ ರಾಜ್ಯದ ಜನರ ಬೆನ್ನಿಗೆ ಬಿದ್ದವರಂತೆ ಬಿಟ್ಟು ಬಿಡದಂತೆ ಕಾಡ್ತಿದೆ. ಹೀಗೆ ಬ್ರಹ್ಮ ರಾಕ್ಷಸಿಯಾಗಿ ಕಾಡ್ತಿರೋ ಈ ಭೂತವನ್ನ ಓಡಿಸೋ ಬ್ರಹ್ಮಾಸ್ತ್ರ ಬಂದಿದೆ. ಹೌದು ಕ್ರೂರಿ ಕೊರೊನಾ ಲಸಿಕೆ ವಿಚಾರದಲ್ಲಿ ಭರವಸೆ ಮೂಡಿಸುವಂತಹ ದೊಡ್ಡ ಸುದ್ದಿ ಬಂದಿದೆ. ಇನ್ನೊಂದು ವಾರದಲ್ಲಿ ದೇಶದಲ್ಲಿ ಲಸಿಕೆ ಸಿಗೋ ಸಾಧ್ಯತೆ ಇದೆ.
ಕೊವಿಶೀಲ್ಡ್ ವ್ಯಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್..! ಮೊದಲೇ ಕೊರೊನಾದಿಂದ ಕಂಗೆಟ್ಟಿದ್ದ ಜನರು, ಈ ಬ್ರಿಟನ್ ಭೂತದ ಅಟ್ಟಹಾಸ ಕಂಡು ದಿಗಿಲಿಗೆ ಬಿದ್ದಿದ್ರು. ಈ ಹೆಮ್ಮಾರಿಯನ್ನ ಕಟ್ಟಿ ಹಾಕೋದ್ಯಾವಾಗ, ವ್ಯಾಕ್ಸಿನ್ ಸಿಗೋದ್ಯಾವಾಗ ಅಂತಾ ಎದುರು ನೋಡ್ತಾ ಇದ್ರು. ಕೊರೊನಾ ಒದ್ದೋಡಿಸೋ ವ್ಯಾಕ್ಸಿನ್ ಈಗಾಗಲೇ ಸಿದ್ಧವಾಗಿದ್ದರೂ, ಅದರ ಬಳಕೆಗೆ ಅನುಮತಿ ಸಿಕ್ಕಿರಲಿಲ್ಲ. ನಿನ್ನೆ ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ತುಂಬಾ ದೊಡ್ಡದಾದ ಹಾಗೂ ಭರವಸೆ ಮೂಡಿಸುವಂಥ ಗುಡ್ ನ್ಯೂಸ್ ಸಿಕ್ಕಿದೆ. ಅದೇನಂದ್ರೆ, ಕೊವಿಶೀಲ್ಡ್ ಲಸಿಕೆ ಬಳಕೆಗೆ ತಜ್ಞರ ಸಿಡಿಎಸ್ಸಿಒ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.
CDSCO ಅಂದ್ರೆ ಏನು..? ಅಷ್ಟಕ್ಕೂ ಸಿಡಿಎಸ್ಸಿಓ ಕೆಲಸ ಏನು ಅಂದ್ರೆ, ಕೊವಿಶೀಲ್ಡ್ ವ್ಯಾಕ್ಸಿನ್ ಸುರಕ್ಷಿತ ಇದ್ಯಾ ಇಲ್ವಾ.. ಎಷ್ಟು ಪರಿಣಾಮಕಾರಿಯಾಗಿದೆ, ರೋಗ ನಿರೋಧ ಶಕ್ತಿ ವೃದ್ಧಿಸುತ್ತಾ ಇಲ್ವಾ ಅನ್ನೋದನ್ನ ಪರಿಶೀಲನೆ ನಡೆಸಲು ಇರೋ ಸಮಿತಿ. ಸದ್ಯ ಈ ಸಮಿತಿ, ಕೊವಿಶೀಲ್ಡ್ ಲಸಿಕೆಯನ್ನ ತುರ್ತಾಗಿ ಬಳಕೆ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಅಷ್ಟೆ ಅಲ್ಲ ಡಿಸಿಜಿಐ, ಅಂದ್ರೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಲಸಿಕೆ ಬಳಸಲು ತೊಂದರೆ ಇಲ್ಲ. ಹೀಗಾಗಿ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಶಿಫಾರಸ್ಸು ಮಾಡಿದೆ. ಸಾಮಾನ್ಯವಾಗಿ ಇಂಥ ವಿಚಾರಗಳಲ್ಲಿ ಸಿಡಿಎಸ್ಸಿಓ ಶಿಫಾರಸ್ಸುಗಳನ್ನೇ ಡಿಸಿಜಿಐ ಒಪ್ಪಿಕೊಳ್ಳುತ್ತೆ.
ಅಂದುಕೊಂಡಂತೆ ಆದ್ರೆ, ಕೆಲವೇ ದಿನಗಳಲ್ಲಿ ಲಸಿಕೆ ಲಭ್ಯವಾಗಲಿದೆ. ಅಷ್ಟಕ್ಕೂ ಈ ಲಸಿಕೆಯನ್ನೇ ಯಾಕೆ ದೇಶ ನೆಚ್ಚಿಕೊಂಡಿದೆ. ಲಸಿಕೆ ಬಂದ್ರೆ ಮೊದಲು ಸಿಗೋದ್ಯಾರಿಗೆ ಅದನ್ನೇ ಹೇಳ್ತೀವಿ ನೋಡಿ.
ವ್ಯಾಕ್ಸಿನ್ ಮೊದಲು ಸಿಗೋದ್ಯಾರಿಗೆ..? ಅಂದಹಾಗೆ ಆಕ್ಸ್‌ಫರ್ಡ್ ವಿವಿ-ಆಸ್ಟ್ರಾಜೆನಿಕಾ ಕಂಪನಿಯ ಲಸಿಕೆ ಇದಾಗಿದ್ದು, ಈ ವ್ಯಾಕ್ಸಿನ್ನ್ನನ್ನು ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್ ಉತ್ಪಾದಿಸುತ್ತಿದೆ. ಈ ಲಸಿಕೆಯನ್ನ 2ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಲಸಿಕೆ ಸಂಗ್ರಹಿಸಿಡಬಹುದಾಗಿದೆ. ಅಲ್ದೆ ಕೊವಿಶೀಲ್ಡ್ ಲಸಿಕೆಯ 2 ಡೋಸ್‌ಗೆ 500 ರೂಪಾಯಿ ಆಗಲಿದ್ದು, ಒಟ್ಟು ₹70 ಸಾವಿರ ಕೋಟಿ ವೆಚ್ಚದಲ್ಲಿ ಭಾರತದ 138 ಕೋಟಿ ಜನರಿಗೆ ಲಸಿಕೆ ನೀಡಬಹುದು.
ಸೆರಮ್ ಇನ್ಸ್‌ಟಿಟ್ಯೂಟ್ ಈಗಾಗಲೇ 4 ರಿಂದ 5 ಕೋಟಿ ಲಸಿಕೆಯನ್ನ ಉತ್ಪಾದಿಸಿದೆ. ದೇಶದಲ್ಲಿ ಮೊದಲು ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವಾರಿಯರ್ಸ್ಗೆ ಕೊವಿಡ್ ಲಸಿಕೆ ನೀಡಲು ಕೇಂದ್ರ ನಿರ್ಧರಿಸಿದ್ದು, ನಂತರ 60 ವರ್ಷ ಮೇಲ್ಪಟ್ಟವರಿಗೆ ತದನಂತರ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡೋಕೆ ಯೋಜನೆ ಹಾಕಿಕೊಂಡಿದೆ. ಅಲ್ದೆ, ಮುಂದಿನ 4 ರಿಂದ 5 ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಲಭ್ಯವಾಗಲಿದೆ.
ಒಂದ್ಕಡೆ ಬ್ರಿಟನ್ ವೈರಸ್ ಭೀತಿ ಹುಟ್ಟಿಸುತ್ತಿರೋ ಬೆನ್ನಲ್ಲೇ, ವ್ಯಾಕ್ಸಿನ್ ವಿಚಾರವಾಗಿ ದೊಡ್ಡ ಭರವಸೆ ಮೂಡಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಕೊರೊನಾ ಓಡಿಸಲು ಬ್ರಹ್ಮಾಸ್ತ್ರವೇ ಸಿಕ್ಕಂತಾಗಲಿದೆ.
ರಾಜ್ಯದ 5 ಜಿಲ್ಲೆಗಳಲ್ಲಿಂದು ಕೊವಿಡ್ ವ್ಯಾಕ್ಸಿನ್ ಡ್ರೈ ರನ್; ಹೇಗಿರಲಿದೆ ಲಸಿಕೆ ನೀಡುವ ಡ್ರೈ ರನ್ ಪ್ರಕ್ರಿಯೆ?