ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ LOC ಗಡಿಯಲ್ಲಿ ಪಾಕಿಸ್ತಾನದ ಅಟ್ಟಹಾಸ ಹೆಚ್ಚಾಗಿದೆ. ಗಡಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದ್ದು ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ರಾಜಸ್ಥಾನದ ಜೋಧ್ಪುರ ನಿವಾಸಿ ಸಿಪಾಯಿ ಲಕ್ಷ್ಮಣ್, ಈ ವರ್ಷ ಪಾಕಿಸ್ತಾನದ ಸೈನಿಕರ ಕದನ ವಿರಾಮ ಉಲ್ಲಂಘನೆಯಲ್ಲಿ ಹುತಾತ್ಮರಾಗಿರುವ ನಾಲ್ಕನೇ ಸೈನಿಕ.
“ಪಾಕಿಸ್ತಾನ ಸೇನೆಯು ರಜೌರಿಯ ಸುಂದರಬಾನಿ ಸೆಕ್ಟರ್‌ನಲ್ಲಿನ ನಿಯಂತ್ರಣದ ಮೇಲೆ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಆಶ್ರಯಿಸಿದೆ. ಶತ್ರುಗಳ ಗುಂಡಿನ ದಾಳಿಗೆ ನಮ್ಮ ಸೈನ್ಯವು ಬಲವಾಗಿ ಪ್ರತಿಕ್ರಿಯಿಸಿತು” ಎಂದು ವಕ್ತಾರರು ತಿಳಿಸಿದ್ದಾರೆ. ಇನ್ನು ಸೈನಿಕ ಲಕ್ಷ್ಮಣ್ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಗಾಯದ ತೀವ್ರತೆಗೆ ಹುತಾತ್ಮರಾಗಿದ್ದಾರೆ.
ಜಮ್ಮುವಿನಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಇಬ್ಬರು ಪೈಲಟ್ಗಳ ಸ್ಥಿತಿ ಗಂಭೀರ