ರಾಜ್​ದೀಪ್​ ಸರ್​ದೇಸಾಯಿ.. ಸುಳ್ಳು ಸುದ್ದಿಯ ಸರದಾರ?: ಟ್ವಿಟರ್​ನಲ್ಲಿ ಬಂಧನಕ್ಕೆ ಆಗ್ರಹ

|

Updated on: Jan 27, 2021 | 8:14 PM

ದೆಹಲಿ: ಈ ಮೊದಲು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಪತ್ರಕರ್ತ ರಾಜ್​ದೀಪ್​ ಸರ್​ದೇಸಾಯಿ ಈಗ ರೈತರ ಪ್ರತಿಭಟನೆ ವಿಚಾರದಲ್ಲೂ ನಕಲಿ ಸುದ್ದಿ ಪೋಸ್ಟ್​ ಮಾಡಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅವರನ್ನು ಬಂಧಿಸಲು ಟ್ವಿಟರ್​ನಲ್ಲಿ ಆಗ್ರಹ ಕೇಳಿ ಬಂದಿದೆ. ಮಂಗಳವಾರ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಓರ್ವ ರೈತ ಮೃತಪಟ್ಟಿದ್ದ. ಈ ಬಗ್ಗೆ ಟ್ವೀಟ್​ ಮಾಡಿದ್ದ ರಾಜ್​ದೀಪ್​ ಸರ್​ದೇಸಾಯಿ, ಪೊಲೀಸ್​ ಫೈರಿಂಗ್​ನಿಂದ ರೈತ ಮೃತಪಟ್ಟಿದ್ದಾನೆ ಎಂದಿದ್ದರು. ಆದರೆ, ಟ್ರ್ಯಾಕ್ಟರ್ ಮಗುಚಿ ಬಿದ್ದಿದ್ದು […]

ರಾಜ್​ದೀಪ್​ ಸರ್​ದೇಸಾಯಿ.. ಸುಳ್ಳು ಸುದ್ದಿಯ ಸರದಾರ?: ಟ್ವಿಟರ್​ನಲ್ಲಿ ಬಂಧನಕ್ಕೆ ಆಗ್ರಹ
ರಾಜ್​ದೀಪ್​ ಸರ್​ದೇಸಾಯಿ
Follow us on

ದೆಹಲಿ: ಈ ಮೊದಲು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಪತ್ರಕರ್ತ ರಾಜ್​ದೀಪ್​ ಸರ್​ದೇಸಾಯಿ ಈಗ ರೈತರ ಪ್ರತಿಭಟನೆ ವಿಚಾರದಲ್ಲೂ ನಕಲಿ ಸುದ್ದಿ ಪೋಸ್ಟ್​ ಮಾಡಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅವರನ್ನು ಬಂಧಿಸಲು ಟ್ವಿಟರ್​ನಲ್ಲಿ ಆಗ್ರಹ ಕೇಳಿ ಬಂದಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಓರ್ವ ರೈತ ಮೃತಪಟ್ಟಿದ್ದ. ಈ ಬಗ್ಗೆ ಟ್ವೀಟ್​ ಮಾಡಿದ್ದ ರಾಜ್​ದೀಪ್​ ಸರ್​ದೇಸಾಯಿ, ಪೊಲೀಸ್​ ಫೈರಿಂಗ್​ನಿಂದ ರೈತ ಮೃತಪಟ್ಟಿದ್ದಾನೆ ಎಂದಿದ್ದರು. ಆದರೆ, ಟ್ರ್ಯಾಕ್ಟರ್ ಮಗುಚಿ ಬಿದ್ದಿದ್ದು ರೈತನ ಸಾವಿಗೆ ಕಾರಣವಾಗಿತ್ತು.

ಟ್ರ್ಯಾಕ್ಟರ್​ ಮಗುಚಿ ಬಿದ್ದು, ರೈತ ಮೃತಪಟ್ಟಿರುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರಾಜ್​ದೀಪ್​ ಸರ್​ದೇಸಾಯಿ ಟ್ವೀಟ್​ ಡಿಲೀಡ್​ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಇಂದು ArrestRajdeep ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ. ಅನೇಕರು ರಾಜ್​ದೀಪ್​ ಸರ್​ದೇಸಾಯಿ ಸುಳ್ಳು ಸುದ್ದಿಯ ಸರದಾರ ಎಂದು ಆರೋಪಿಸಿದ್ದಾರೆ.

https://twitter.com/Arunav7/status/1354314779595321344/photo/1

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಣಬ್ ಬದುಕಿದ್ದಾಗಲೇ, ಅವರು ನಿಧನ ಹೊಂದಿದ್ದಾರೆ ಎಂದು ರಾಜ್​ದೀಪ್​ ಸರ್​ದೇಸಾಯಿ ಟ್ವೀಟ್​ ಮಾಡಿದ್ದರು. ನಂತರ ಈ ಬಗ್ಗೆ ಕ್ಷಮೆ ಯಾಚಿಸಿದ್ದರು.

ಟ್ರ್ಯಾಕ್ಟರ್ ಪರೇಡ್: ದೆಹಲಿ ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ರೈತ ಸಾವು