ಸಾಮಾನ್ಯವಾಗಿ ದೇವಸ್ಥಾನದ ವಾರ್ಷಿಕ ಕಾರ್ಯಕ್ರಮಗಳು, ಜಾತ್ರೆಯ ಸಂದರ್ಭದಲ್ಲಿ ಪೂಜಾ ಕುಣಿತ, ಹಾಡು ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯುವುದು ವಾಡಿಕೆ. ಹಾಗೆಯೇ ಮಂಡಸೌರ್ನಲ್ಲಿ ಅಷ್ಟಧಾತುಗಳಿಂದ ಮಾಡಿದ ಪಶುಪತಿನಾಥ ಪ್ರತಿಮೆಯ ರಾಜ ಪಲ್ಲಕ್ಕಿಯ ಮೆರವಣಿಗೆಯ ಸಮಯದಲ್ಲಿ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮುಖಕ್ಕೆ ಬೆಂಕಿ ಹೊತ್ತಿಕೊಂಡು ಭಾರಿ ಅನಾಹುತ ಸೃಷ್ಟಿಸಿತ್ತು.
ಉಜ್ಜಯಿನಿಯ ಕಲಾವಿದರು ಧಾರ್ಮಿಕ ಹಾಡುಗಳು, ನೃತ್ಯ ಪ್ರದರ್ಶನ ನಡೆಸುತ್ತಿದ್ದರು, ಕಲಾವಿದ ಬಾಯಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಾಗ ಮುಖಕ್ಕೆ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ತಾಯಿ ಕಲ್ಕಾಳ ವೇಷ ಧರಿಸಿದ್ದ ವ್ಯಕ್ತಿ ಬಾಯಿಗೆ ಪೆಟ್ರೋಲ್ ತುಂಬಿಸಿಕೊಂಡು ಬೆಂಕಿ ಹಚ್ಚಲು ಯತ್ನಿಸಿದಾಗ ಕಲಾವಿದ ಮುಖವಾಡ ಧರಿಸಿದ್ದರೂ ಮುಖಕ್ಕೆ ಬೆಂಕಿ ಆವರಿಸಿಕೊಂಡಿತ್ತು. ತಕ್ಷಣವೇ ದೇವರ ಮುಖವಾಡವನ್ನು ತೆಗೆದು ಕೆಳಗೆ ಹಾಕಿದ್ದಾರೆ.
ಹೆಚ್ಚಿನ ಗಾಯಗಳೇನು ಆಗಿಲ್ಲ, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಕಲಾವಿದರು ಇಂತಹ ಅಪಾಯಕಾರಿ ಸಾಹಸ ಪ್ರದರ್ಶನ ಮಾಡುವುದನ್ನು ನಾವು ನಿಷೇಧಿಸಿದ್ದೆವು, ಆದರೆ ಅವರು ಮತ್ತದೇ ಸಾಹಸವನ್ನು ಪ್ರದರ್ಶಿಸಿರುವುದು ಈ ಘಟನೆಗೆ ಕಾರಣವಾಯಿತು.
कलाकारों को कला दिखाते समय , थोड़ा ध्यान रखना चाइए , #मंदसौर में भगवान पशुपतिनाथ की शाही पालकी के दौरान बड़ा हादसा होते होते बचा । @Ritvip1987 @Sandeep_1Singh_ @KashifKakvi @vishnukant_7 @brajeshabpnews pic.twitter.com/1z9K8kLdVp
— Salman Qureshi (@Salman_Qureshi_) August 21, 2023
ಸ್ಥಳದಲ್ಲಿದ್ದ ಸಹ ಕಲಾವಿದರು ತಕ್ಷಣ ರಕ್ಷಣೆಗೆ ಬಂದರು, ಸಂಭಾವ್ಯ ಅನಾಹುತವನ್ನು ತಪ್ಪಿಸಿದರು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದಲ್ಲೂ ಇಂಥದ್ದೇ ಘಟನೆ ನಡೆದಿತ್ತು
ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಯುವಕನೊಬ್ಬ ಬೆಂಕಿ ಉಗುಳುವ ಸಾಹಸಕ್ಕೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದ.
ಬಿಜೆಪಿ ನಾಯಕರೊಬ್ಬರು ಕಲಾವಿದರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸಾಹಸ ಪ್ರದರ್ಶಿಸಲು ಒತ್ತಾಯಿಸುತ್ತಿದ್ದಾರೆ ಎಂದು ಸಹ ಕಲಾವಿದರು ಆರೋಪಿಸಿದ್ದರು, ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:04 am, Tue, 22 August 23