ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ಪಡೆ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನ

|

Updated on: Sep 06, 2023 | 12:19 PM

ಪ್ರಧಾನಿ ಮೋದಿಗೆ ಭದ್ರತೆ ಕಲ್ಪಿಸುವ ಎಸ್​ಪಿಜಿ ಪಡೆಯ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನರಾಗಿದ್ದಾರೆ. ಕೇರಳದ ಉನ್ನತ ಐಪಿಎಸ್ ಅಧಿಕಾರಿ ಹಾಗೂ ಎಸ್​ಪಿಜಿ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ಬುಧವಾರ ಗುರುಗ್ರಾಮದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅರುಣ್ ಕುಮಾರ್ ಬಹಳ ದಿನಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು, ನಾಲ್ಕು ವರ್ಷಗಳ ಹಿಂದೆ ಅವರು ಕೇಂದ್ರ ನಿಯೋಜನೆಯ ಮೇಲೆ ಕೇರಳವನ್ನು ಬಿಟ್ಟಿದ್ದರು, ಎಸ್​ಪಿಜಿಗೆ ಸೇರ್ಪಡೆಯಾಗಿದ್ದರು.

ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ಪಡೆ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನ
ಅರುಣ್ ಕುಮಾರ್ ಸಿನ್ಹಾ
Image Credit source: India Today
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi)ಗೆ ಭದ್ರತೆ ಕಲ್ಪಿಸುವ ಎಸ್​ಪಿಜಿ ಪಡೆಯ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನರಾಗಿದ್ದಾರೆ. ಕೇರಳದ ಉನ್ನತ ಐಪಿಎಸ್ ಅಧಿಕಾರಿ ಹಾಗೂ ಎಸ್​ಪಿಜಿ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ಬುಧವಾರ ಗುರುಗ್ರಾಮದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅರುಣ್ ಕುಮಾರ್ ಬಹಳ ದಿನಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು, ನಾಲ್ಕು ವರ್ಷಗಳ ಹಿಂದೆ ಅವರು ಕೇಂದ್ರ ನಿಯೋಜನೆಯ ಮೇಲೆ ಕೇರಳವನ್ನು ಬಿಟ್ಟಿದ್ದರು, ಎಸ್​ಪಿಜಿಗೆ ಸೇರ್ಪಡೆಯಾಗಿದ್ದರು.

ಈ ವರ್ಷ ಮೇನಲ್ಲಿ ಅವರು ನಿವೃತ್ತರಾದರೂ ಕೂಡ ಅಧಿಕಾರ ಅವಧಿಯನ್ನು ವಿಸ್ತರಣೆ ನೀಡಲಾಯಿತು. ಅರುಣ್ ಕುಮಾರ್ ಸಿನ್ಹಾ ಅವರು 1987 ರಲ್ಲಿ ಕೇರಳ ಪೊಲೀಸ್ ಕೇಡರ್‌ಗೆ ಸೇರಿದರು ಮತ್ತು ಅಂದಿನಿಂದ ರಾಜ್ಯದಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

1987 ರ ಬ್ಯಾಚ್‌ನ ಪ್ರತಿಷ್ಠಿತ IPS ಅಧಿಕಾರಿ ಅರುಣ್ ಕುಮಾರ್ ಸಿನ್ಹಾ ಅವರ ಉನ್ನತ ಜವಾಬ್ದಾರಿಯು ಮಾಜಿ ಪ್ರಧಾನ ಮಂತ್ರಿಗಳು ಮತ್ತು ಭಾರತದ ಗೌರವಾನ್ವಿತ ಪ್ರಧಾನಿಯ ಭದ್ರತೆಯನ್ನು ನೋಡಿಕೊಳ್ಳುವುದು. ನಿವೃತ್ತಿಯ ನಂತರ, ಇತ್ತೀಚೆಗೆ ಮೇ 31 ರಂದು, ಅವರನ್ನು ಒಂದು ವರ್ಷಕ್ಕೆ ಎಸ್‌ಪಿಜಿ ನಿರ್ದೇಶಕರನ್ನಾಗಿ ಮಾಡಲಾಯಿತು.

ಮತ್ತಷ್ಟು ಓದಿ: ಪ್ರೆಸಿಡೆಂಡ್ ಆಫ್ ಭಾರತ್ ಬಳಿಕ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಪ್ರವಾಸದ ಕುರಿತು ಸಂಬಿತ್ ಪಾತ್ರಾ ಪೋಸ್ಟ್​

ಅರುಣ್ ಕುಮಾರ್ ಸಿನ್ಹಾ ಅವರು ಕೇಂದ್ರಕ್ಕೆ ಡೆಪ್ಯುಟೇಶನ್ ಪಡೆದಾಗ ಕೇರಳದಲ್ಲಿ ಪೊಲೀಸ್ ವಿಶೇಷ ಸೇವೆಗಳು ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು. ಗಡಿ ಭದ್ರತಾ ಪಡೆಯಲ್ಲೂ ಒಂದು ವರ್ಷ ಇದ್ದರು. ಕೇರಳದಲ್ಲಿದ್ದಾಗ ಅರುಣ್ ಕುಮಾರ್ ಸಿನ್ಹಾ ಅವರು ಮಹಿಳೆಯರ ಸುರಕ್ಷತೆ ಮತ್ತು ಅನಿವಾಸಿ ಭಾರತೀಯ ವ್ಯವಹಾರಗಳ ಉಸ್ತುವಾರಿ ವಹಿಸಿದ್ದರು. ಅರುಣ್ ಸಿನ್ಹಾ ಅವರು ದೇಶಾದ್ಯಂತ ಪೊಲೀಸ್ ಪಡೆಗಳಿಂದ ಆಯ್ಕೆಯಾದ ಸುಮಾರು 3000 ಕ್ರ್ಯಾಕ್ ಕಮಾಂಡೋಗಳ ತಂಡದ ನಾಯಕರಾಗಿದ್ದರು.

ಸಿನ್ಹಾ ನಿಧನಕ್ಕೆ ಐಪಿಎಸ್ ಅಸೋಸಿಯೇಷನ್ ​​ಕೂಡ ಸಂತಾಪ ವ್ಯಕ್ತಪಡಿಸಿದೆ. ಎಸ್‌ಪಿಜಿ ಮುಖ್ಯಸ್ಥರ ನಿಧನದಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಮರೆಯುವ ಶಕ್ತಿ ಸಿಗಲಿ ಎಂದು ಬರೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ