ಪ್ರೆಸಿಡೆಂಟ್ ಆಫ್ ಭಾರತ್ ಬಳಿಕ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಪ್ರವಾಸದ ಕುರಿತು ಸಂಬಿತ್ ಪಾತ್ರಾ ಪೋಸ್ಟ್
ಜಿ20 ಶೃಂಗಸಭೆಯ ಅತಿಥಿಗಳಿಗೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಆಮಂತ್ರಣ ಪತ್ರಿಕೆಯಲ್ಲಿದ್ದ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಬರಹ ಬಹುದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು, ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ ಪ್ರವಾಸದ ದಾಖಲೆಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಬರೆಯಲಾದ ಪೋಸ್ಟ್ವೊಂದನ್ನು ಸಂಬಿತ್ ಪಾತ್ರ ಹಂಚಿಕೊಂಡಿದ್ದಾರೆ.
ಜಿ20 ಶೃಂಗಸಭೆಯ ಅತಿಥಿಗಳಿಗೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಆಮಂತ್ರಣ ಪತ್ರಿಕೆಯಲ್ಲಿದ್ದ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಬರಹ ಬಹುದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು, ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ ಪ್ರವಾಸದ ದಾಖಲೆಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಬರೆಯಲಾದ ಪೋಸ್ಟ್ವೊಂದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹಂಚಿಕೊಂಡಿದ್ದಾರೆ.
ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್ನಲ್ಲಿ ಬರೆದುಕೊಂಡಿರುವ ಅವರು, ಮೋದಿ ಇಂಡೋನೇಷ್ಯಾ ಭೇಟಿ ಕುರಿತ ಅಧಿಕೃತ ಮಾಹಿತಿಯ ಆಮಂತ್ರಣ ಪತ್ರಿಕೆಯೊಂದನ್ನು ಹಂಚಿಕೊಂಡಿದ್ದಾರೆ.
ಸರ್ಕಾರದ ಎಲ್ಲಾ ವೆಬ್‌ಸೈಟ್‌ಗಳು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ನಲ್ಲಿ ಈ ಬಗ್ಗೆ ಯಾವುದೇ ಸುದ್ದಿ ಇಲ್ಲ ಅಥವಾ ಅಧಿಕೃತ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಂಗಳವಾರ ಸಂಜೆ ಈ ಸಂಬಂಧ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬುಧವಾರ ರಾತ್ರಿ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ.
ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರಂದು ಕಳುಹಿಸಲಾದ ಜಿ20 ಔತಣಕೂಟದ ಆಹ್ವಾನದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿತ್ತು.
ಮತ್ತಷ್ಟು ಓದಿ: G20 ಶೃಂಗಸಭೆಯ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಭಾರತದ ರಾಷ್ಟ್ರಪತಿ; ಏನಿದು ಹೊಸ ಚರ್ಚೆ?
ಬಿಜೆಪಿ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಕೂಡ ಈ ವಿಚಾರ ಕುರಿತು ಮಾತನಾಡಿ ಇಂಡಿಯಾ ಬದಲಿಗೆ ಭಾರತ ಪದವನ್ನು ಬಳಸಬೇಕೆಂದು ಇಡೀ ದೇಶ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.
‘The Prime Minister Of Bharat’ pic.twitter.com/lHozUHSoC4
— Sambit Patra (@sambitswaraj) September 5, 2023
ಇಂಡಿಯಾ ಎಂಬ ಪದವು ಬ್ರಿಟಿಷರು ನಮಗೆ ನೀಡಿದ ನಿಂದನೆಯಾಗಿದೆ ಆದರೆ ಭಾರತ್ ಎಂಬ ಪದವು ನಮ್ಮ ಸಂಸ್ಕೃತಿಯ ಸಂಕೇತವಾಗಿದೆ. ನಮ್ಮ ಸಂವಿಧಾನದಲ್ಲಿ ಬದಲಾವಣೆಯಾಗಬೇಕು. ಅದಕ್ಕೆ ‘ಭಾರತ್’ ಎಂಬ ಪದವನ್ನು ಸೇರಿಸಬೇಕು ಎಂದು ನಾನು ಬಯಸುತ್ತೇನೆ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಇಂಡಿಯಾ ಎಂದು ಹೇಳುವುದ ಬಿಡಿ, ಬದಲು ಭಾರತ್ ಎಂದು ಹೇಳಿ ಎಂದು ಮನವಿ ಮಾಡಿಕೊಂಡ ನಂತರ ಈ ವಿಷಯ ತುಂಬಾ ಚರ್ಚೆಯಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:07 am, Wed, 6 September 23