ಕೇರಳದಲ್ಲಿ ದೇಶದ ಅತಿ ಕಿರಿಯ ಮೇಯರ್?; ಹೊಸ ದಾಖಲೆ ಬರೆಯೋಕೆ ಸಜ್ಜಾದ ಯುವತಿ
ಆರ್ಯ ರಾಜೇಂದ್ರನ್ ಎಂಬ 21 ವರ್ಷದ ಕಾಲೇಜು ಯುವತಿಗೆ ಮೇಯರ್ ಸ್ಥಾನ ನೀಡಲು ತಿರುವನಂತಪುರಂ ಜಿಲ್ಲೆಯ ಸಿಪಿಎಂ ಕಾರ್ಯದರ್ಶಿ ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ನಿರ್ಧಾರವನ್ನು ಪಕ್ಷದ ರಾಜ್ಯ ಸಮಿತಿ ಅಂಗೀಕರಿಸುವ ಸಾಧ್ಯತೆಯೂ ದಟ್ಟವಾಗಿದೆ.
ಕೊಚ್ಚಿ: ಕೇರಳದ ಸ್ಥಳೀಯ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಂದಿಗೆ ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿ 21 ವರ್ಷದ ಯುವತಿ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ಒಂದುವೇಳೆ ಇದು ನೆರವೇರಿದರೆ ದೇಶದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಲಿದ್ದಾರೆ.
ಆರ್ಯಾ ರಾಜೇಂದ್ರನ್ಗೆ ಮೇಯರ್ ಸ್ಥಾನ ನೀಡಲು ತಿರುವನಂತಪುರಂ ಜಿಲ್ಲೆಯ ಸಿಪಿಎಂ ಕಾರ್ಯದರ್ಶಿ ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ನಿರ್ಧಾರವನ್ನು ಪಕ್ಷದ ರಾಜ್ಯ ಸಮಿತಿ ಅಂಗೀಕರಿಸುವ ಸಾಧ್ಯತೆಯೂ ದಟ್ಟವಾಗಿದೆ. ಅಂತಿಮ ಪ್ರಕಟಣೆ ಶನಿವಾರ ಹೊರಬೀಳಲಿದ್ದು ಆರ್ಯಾ ರಾಜೇಂದ್ರನ್ ಮೇಯರ್ ಆಗುವುದು ನಿಶ್ಚಿತವಾದರೆ ಇದು ದೇಶದಲ್ಲಿ ಹೊಸ ದಾಖಲೆಯಾಗಲಿದೆ.
ಆರ್ಯಾ ರಾಜೇಂದ್ರನ್ ತಿರುವನಂತಪುರಂನ ಆಲ್ ಸೈಂಟ್ಸ್ ಕಾಲೇಜಿನ ಕಾನೂನು ವಿದ್ಯಾರ್ಥಿನಿಯಾಗಿದ್ದಾರೆ. ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಎಂಬ ಹಿರಿಮೆಯೂ ಇವರಿಗಿದೆ. ಇವರು ಮುಡವನ್ಮುಗಳ್ ವಾರ್ಡ್ನಿಂದ ಗೆಲುವು ಸಾಧಿಸಿಸಿದ್ದರು.
ಕ್ರೈಸ್ತ ಸನ್ಯಾಸಿನಿ ಅಭಯಾ ಹತ್ಯೆ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಲಯ
Published On - 7:29 pm, Fri, 25 December 20