ಭಾರತದಲ್ಲಿ ಜ್ವರ ಅಥವಾ ಕೋವಿಡ್​-19 ಪತ್ತೆಗೆ ಇನ್ಮುಂದೆ ಪ್ರತ್ಯೇಕ ಪರೀಕ್ಷೆ ಬೇಕಿಲ್ಲ, ಒಂದೇ ಮಾದರಿಯಲ್ಲೇ ತಿಳಿಯಬಹುದು

|

Updated on: May 23, 2023 | 10:26 AM

ಜ್ವರ ಅಥವಾ ಕೊರೊನಾ ಸೋಂಕು ಏನೇ ಆಗಿರಲಿ ಇನ್ನುಮುಂದೆ ಪ್ರತ್ಯೇಕ ಮಾದರಿಗಳನ್ನು ಸಂಗ್ರಹಿಸಿ, ಪ್ರತ್ಯೇಕ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಒಂದೇ ಮಾದರಿಯಲ್ಲೇ ತಿಳಿಯಬಹುದು.

ಭಾರತದಲ್ಲಿ ಜ್ವರ ಅಥವಾ ಕೋವಿಡ್​-19 ಪತ್ತೆಗೆ ಇನ್ಮುಂದೆ ಪ್ರತ್ಯೇಕ ಪರೀಕ್ಷೆ ಬೇಕಿಲ್ಲ, ಒಂದೇ ಮಾದರಿಯಲ್ಲೇ ತಿಳಿಯಬಹುದು
ಕೊರೊನಾ ಪರೀಕ್ಷೆ
Follow us on

ಜ್ವರ ಅಥವಾ ಕೊರೊನಾ ಸೋಂಕು ಏನೇ ಆಗಿರಲಿ ಇನ್ನುಮುಂದೆ ಪ್ರತ್ಯೇಕ ಮಾದರಿಗಳನ್ನು ಸಂಗ್ರಹಿಸಿ, ಪ್ರತ್ಯೇಕ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಒಂದೇ ಮಾದರಿಯಲ್ಲೇ ತಿಳಿಯಬಹುದು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮೂರು ಸೋಂಕುಗಳನ್ನು ಪತ್ತೆಹಚ್ಚಲು ಮೊದಲ ಸ್ಥಳೀಯ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಇನ್ಫ್ಲುಯೆನ್ಜಾ A, B ಮತ್ತು SARS-CoV-2 ಒಂದೇ ಕಿಟ್ ಮೂಲಕ ಪತ್ತೆ ಹೆಚ್ಚಬಹುದು. ಇನ್‌ಫ್ಲುಯೆಂಜಾ ಎ, ಬಿ ಮತ್ತು ಕೋವಿಡ್-19 ಪತ್ತೆಗಾಗಿ ಕಿಟ್ ಅನ್ನು ಮಲ್ಟಿಪ್ಲೆಕ್ಸ್ ಸಿಂಗಲ್ ಟ್ಯೂಬ್ ರಿಯಲ್‌ಟೈಮ್ ಆರ್‌ಟಿ-ಪಿಸಿಆರ್ ಪರೀಕ್ಷೆ ಎಂದು ಕರೆಯಲಾಗುತ್ತದೆ ಎಂದು ಎನ್‌ಐವಿ ಪುಣೆಯ ಇನ್‌ಫ್ಲುಯೆನ್ಜಾ ವಿಭಾಗದ ಮುಖ್ಯಸ್ಥರಾದ ಡಾ ವರ್ಷಾ ಪೋತದಾರ್ ಹೇಳಿದ್ದಾರೆ.

ಒಂದು ಪರೀಕ್ಷೆಯ ಮೂಲಕ ಮೂರು ಸೋಂಕುಗಳನ್ನು ಪತ್ತೆಹಚ್ಚುವುದು ಇನ್ನು ಮುಂದೆ ಸುಲಭವಾಗಲಿದೆ. ಸಮಯ ಉಳಿತಾಯ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅವರು ಹೇಳಿದರು. ಓರ್ವ ವ್ಯಕ್ತಿಯಿಂದ ಒಂದೇ ಮಾದರಿಯನ್ನು ಬಳಸುವ ಮೂಲಕ, ನಾವು ಅನೇಕ ಸೋಂಕುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ತಂತ್ರಜ್ಞರು ಮಾದರಿಯನ್ನು ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗಿಲ್ಲ.

ಮತ್ತಷ್ಟು ಓದಿ: ದೀರ್ಘ ಕೋವಿಡ್ ಲಕ್ಷಣ ಎಂದುಕೊಂಡಿದ್ದು ಬುದ್ಧಿಮಾಂದ್ಯತೆ ಆಗಿದ್ದು ಹೇಗೆ? ವೈದ್ಯರ ಅಭಿಪ್ರಾಯವೇನು ? ಇಲ್ಲಿದೆ ಮಾಹಿತಿ

ಕೋವಿಡ್​ 19 ಪರೀಕ್ಷೆಗಳಂತೆಯೇ ಈ ಪರೀಕ್ಷಾ ಕಿಟ್ ರೋಗಿಯ ಮೂಗು ಹಾಗೂ ಗಂಟಲಿನ ಸ್ವ್ಯಾಬ್​ಗಳನ್ನು ಬಳಸಲಾಗುತ್ತದೆ. ಇಂತಹ ತಂತ್ರಜ್ಞಾನವು ವಿವಿಧ ದೇಶಗಳಲ್ಲಿ ಅಭಿವೃದ್ಧಿಯ ವಿವಿಧ ಹಂತಗಳಲ್ಲಿದೆ, ಇದು ಭಾರತದಲ್ಲಿ ಅಭಿವೃದ್ಧಿಪಡಿಸಿರುವ ಮೊದಲ ಸ್ಥಳೀಯ ಕಿಟ್ ಆಗಿದೆ.

ಪರೀಕ್ಷೆಯು ಹೆಚ್ಚು ನಿಖರವಾಗಿರಲಿದ್ದು, ನ್ಯೂಕ್ಲಿಯಿಕ್ ಆಮ್ಲ ಆಧಾರಿತ ರೋಗ ನಿರ್ಣಯ ಮಾಡಲಾಗುತ್ತದೆ. ಸೋಂಕಿನ ತೀವ್ರತೆ ಹೆಚ್ಚಿರುವ ರೋಗಿಗಳ ಮಾದರಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ