ಜೈಪುರ: ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಹೊಸ ಪ್ರಯತ್ನ ನಡೆಯುವ ಸಾಧ್ಯತೆಯಿದೆ ಎಂದು ನಿನ್ನೆ ಎಚ್ಚರಿಸಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್. ಕಾಂಗ್ರೆಸ್ ಶಾಸಕರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ರಹಸ್ಯ ಸಭೆ ನಡೆಸಿದರು ಎಂದು ಸಹ ಆರೋಪಿಸಿದರು.
ಸಿರೋಹಿ ಜಿಲ್ಲೆಯಲ್ಲಿ ಪಕ್ಷದ ಕಚೇರಿಯ ಉದ್ಘಾಟನೆಯ ವೇಳೆ ಮಾತನಾಡಿದ ಗೆಹ್ಲೋಟ್, ಬಿಜೆಪಿ ಮುಖಂಡರು ರಾಜಸ್ಥಾನ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಾರೆ. ಆದರೆ ರಾಜಸ್ಥಾನದ ಜನತೆ ಕಾಂಗ್ರೆಸ್ ಸರ್ಕಾರ ಬೀಳುವುದನ್ನು ಬಯಸುವುದಿಲ್ಲ. ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ರನ್ನ ಭೇಟಿಯಾದ ಬಳಿಕ ನಮ್ಮ ಶಾಸಕರು ಶಾ ಅವರನ್ನ ಈ ದೇಶದ ಗೃಹ ಸಚಿವರಾಗಿ ನೋಡಲು ಬಯಸುವುದಿಲ್ಲ ಎಂದು ಗೆಹ್ಲೋಟ್ ಹೇಳಿದರು.
ಐದು ರಾಜ್ಯ ಸರ್ಕಾರಗಳನ್ನು ಈಗಾಗಲೇ ಉರುಳಿಸಲಾಗಿದೆ. ಇದೀಗ ನಮ್ಮ ಸರ್ಕಾರ ಆರನೇಯದ್ದು ಆಗಲಿದೆ ಒಂದು ಅಮಿತ್ ಶಾ ಕಾಂಗ್ರೆಸ್ ಮುಖಂಡರಿಗೆ ಹೇಳಿದರು ಎಂದು ಗೆಹ್ಲೋಟ್ ತಿಳಿಸಿದರು. ಇದಲ್ಲದೆ, ಬಂಡಾಯ ಕಾಂಗ್ರೆಸ್ ಶಾಸಕರ ವಿಶ್ವಾಸವನ್ನು ಬಲಪಡಿಸಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನ್ಯಾಯಾಧೀಶರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಗೆಹ್ಲೋಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಕಾಂಗ್ರೆಸ್ ಒಳಜಗಳವೇ ರಾಜ್ಯ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಸಿಎಂ ಅಶೋಕ್ ಗೆಹ್ಲೋಟ್ ಯಾವುದೇ ಆಧಾರವಿಲ್ಲದೆ ಅಮಿತ್ ಶಾ ವಿರುದ್ಧ ಆರೋಪಿಸುತ್ತಿದ್ದಾರೆ ಎಂದು ಕಟಾರಿಯಾ ಹೇಳಿದರು.