ಭಾರತದ ಕನಸಸಿನ ಯೋಜನೆ ಬುಲೆಟ್ ರೈಲು ಯೋಜನೆ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಭಾರತದ ಮೊದಲ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ್ಟಮ್‌ನ ವೀಡಿಯೊವನ್ನು ವೈಷ್ಣವ್ ಗುರುವಾರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 320 ಕಿಮೀ ವೇಗದ ತಡೆಗೋಡೆ ಹೊಂದಿರುವ ಬುಲೆಟ್ ರೈಲಿಗೆ ಗಮನಾರ್ಹ ಕೆಲಸದ ಬಗ್ಗೆ ಸಚಿವರು ಬಹಿರಂಗಪಡಿಸಿದ್ದಾರೆ. ವೈಷ್ಣವ್ ಅವರ ಪ್ರಕಾರ, 295.5 ಕಿಮೀ ಪಿಯರ್‌ಗಳು ಮತ್ತು 153 ಕಿಮೀ ವಯಡಕ್ಟ್‌ಗಳು ಈಗಾಗಲೇ ಪೂರ್ಣಗೊಂಡಿವೆ ಎಂದರು.
ಈ ಬಗ್ಗೆ ಎಕ್ಸ್ನಲ್ಲಿ ಒಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಬುಲೆಟ್ ಟ್ರೈನ್‌ಗಾಗಿ ಭಾರತದ ಮೊದಲ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿದ್ಧಗೊಂಡಿದೆ. 320 ಕಿಮೀ ವೇಗದ ಮಿತಿ, 153 ಕಿಮೀ ವಯಡಕ್ಟ್ ಪೂರ್ಣಗೊಂಡಿದೆ, 295.5 ಕಿಮೀ ಪಿಯರ್ ಕೆಲಸ ಪೂರ್ಣಗೊಂಡಿದೆ. ಪ್ರಧಾನಿ ಮೋದಿ ಅವರ ಮುಂದಿನ ಅವಧಿಯಲ್ಲಿ ಇದು ಇನ್ನಷ್ಟು ಪೂರ್ಣಗೊಳಲಿದೆ ಎಂದು ಹೇಳಿದ್ದಾರೆ.
ಇನ್ನು ಬುಲೆಟ್ ರೈಲುಗಳ ಸ್ಲ್ಯಾಬ್ ಟ್ರ್ಯಾಕ್ ಕೆಲವು ದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿದೆ. ಮೊದಲ ಬಾರಿಗೆ, ಭಾರತದಲ್ಲಿ ಜೆ-ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ್ಟಮ್ನ್ನು ಬಳಸಲಾಗುತ್ತಿದೆ. ಈ ಸ್ಲ್ಯಾಬ್ ಸುಮಾರು 300mm ದಪ್ಪವಾಗಿರುವ RC ಟ್ರ್ಯಾಕ್ ಹೊದಿಕೆ ಮೇಲೆ ನಿಂತಿದೆ. ವೈಡಕ್ಟ್ ಮೇಲ್ಭಾಗದಲ್ಲಿ ಪ್ರತ್ಯೇಕ ಡೌನ್ ಟ್ರ್ಯಾಕ್ ಲೈನ್ಗಳನ್ನು ನಿರ್ಮಿಸಲಾಗಿದೆ.
Bharat’s first ballastless track for #BulletTrain !
✅320 kmph speed threshold
✅153 km of viaduct completed
✅295.5 km of pier work completedMore to come in Modi 3.0 pic.twitter.com/YV6vP4tbXS
— Ashwini Vaishnaw (मोदी का परिवार) (@AshwiniVaishnaw) March 28, 2024
ಆರ್‌ಸಿ ಟ್ರ್ಯಾಕ್ ಬೆಡ್ 2420 ಎಂಎಂ ಅಗಲವನ್ನು ಹೊಂದಿದೆ. ಇದು ಇದರ ಸ್ಥಿರತೆಯ ಬಗ್ಗೆ ತಿಳಿಸುತ್ತದೆ ಎಂದು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಹೇಳಿದೆ. ಇದನ್ನು ಕೂಡ ದೇಶದ ಸಮಗ್ರ ಆರ್ಥಿಕತೆಯ ದೃಷ್ಟಿಕೋನದಿಂದ ನೋಡಬಹುದು ಎಂದು ಹೇಳಿದೆ. ಹಾಗೂ ಭಾರತೀಯ ರೈಲ್ವೆ ಬುಲೆಟ್ ಟ್ರೈನ್ ಕಾರಿಡಾರ್ಗಳನ್ನು ಮುಂಬೈ, ಥಾಣೆ, ವಾಪಿ, ಬರೋಡಾ, ಸೂರತ್, ಆನಂದ್ ಮತ್ತು ಅಹಮದಾಬಾದ್ನಲ್ಲಿ ಮಾಡುತ್ತಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ನಮ್ಮ ನಾಯಕರನ್ನು ನಂಬುವುದಿಲ್ಲ, ಈ ಚುನಾವಣೆಗೆ ಅರ್ಥವಿಲ್ಲ: ಸಂತ್ರಸ್ತರು
ಇನ್ನು ಇದರ ನಿರ್ಮಾಣಕ್ಕೆ ಅಂದಾಜು ₹ 1.08 ಲಕ್ಷ ಕೋಟಿ ವೆಚ್ಚವಾಗಿದ್ದು, ಇದರಲ್ಲಿ ₹ 10,000 ಕೋಟಿ ಕೇಂದ್ರ ನೀಡುತ್ತದೆ. ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರ ತಲಾ ₹ 5,000 ಕೋಟಿ ನೀಡಲಿವೆ. ಉಳಿದ ಹಣವನ್ನು ಜಪಾನ್‌ನಿಂದ ಸಾಲದ ಮೂಲಕ 0.1 ಶೇಕಡಾ ಬಡ್ಡಿ ದರದಲ್ಲಿ ಪಡೆಯಲಿದೆ.
ರಾಷ್ಟ್ರೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:18 pm, Fri, 29 March 24