ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ಹೊರಗಿಟ್ಟ ಎಎಸ್​ಐ

|

Updated on: Mar 26, 2024 | 8:43 AM

ಭಾರತೀಯ ಪುರಾತತ್ವ ಇಲಾಖೆ(ಎಎಸ್​ಐ) ಕೇಂದ್ರ ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ತೆಗೆದುಹಾಕಿದೆ. ಹರ್ಯಾಣದ ಮುಜೆಸರ್ ಗ್ರಾಮದ ಕೋಸ್ ಮಿನಾರ್ ನಂ.13 ಸೇರಿದಂತೆ ಹಲವು ಸ್ಮಾರಕಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ಹೊರಗಿಟ್ಟ ಎಎಸ್​ಐ
ಎಎಸ್​ಐ
Follow us on

ಭಾರತೀಯ ಪುರಾತತ್ವ ಇಲಾಖೆ(ಎಎಸ್​ಐ) ಕೇಂದ್ರ ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ತೆಗೆದುಹಾಕಿದೆ. ಹರ್ಯಾಣದ ಮುಜೆಸರ್ ಗ್ರಾಮದ ಕೋಸ್ ಮಿನಾರ್ ನಂ.13 ಸೇರಿದಂತೆ ಹಲವು ಸ್ಮಾರಕಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ದೆಹಲಿಯ ಬಾರಾ ಖಂಬ ಸ್ಮಶಾನ, ರಂಗೂನ್​ನಲ್ಲಿರುವ ಗುನ್ನಾರ್​ ಬರ್ಕೆಲ್ ಸಮಾಧಿ, ಝಾನ್ಸಿ, ಲಕ್ನೋದ ಗೌಘಾಟ್ ಸ್ಮಶಾನ ಮತ್ತು ಉತ್ತರ ಪ್ರದೇಶದ ವಾರಾಣಸಿಯ ನಿರ್ಜನ ಗ್ರಾಮದ ಭಾಗವಾಗಿರುವ ತೆಲಿಯಾ ನಾಲಾ ಬೌದ್ಧ ಅವಶೇಷಗಳೂ ಪಟ್ಟಿಯಿಂದ ಹೊರಗುಳಿದಿವೆ.

ಪ್ರಸ್ತುತ ಎಎಸ್​ಐ ವ್ಯಾಪ್ತಿಯಲ್ಲಿ 3,693 ಸ್ಮಾರಕಗಳಿವೆ, ಪಟ್ಟಿಯಿಂದ ತೆಗೆದುಹಾಕುವಿಕೆ ಪೂರ್ಣಗೊಂಡ ನಂತರ, ಸ್ಮಾರಕಗಳ ಸಂಖ್ಯೆ 3,675ಕ್ಕೆ ಇಳಿಯುತ್ತದೆ. ಡಿಸೆಂಬರ್ 8 ರಂದು ಕೇಂದ್ರ ಸಂರಕ್ಷಿತ ಪಟ್ಟಿಯಲ್ಲಿ ಸೇರಿಸಲಾದ 3,693 ಸ್ಮಾರಕಗಳ ಪೈಕಿ 50 ನಾಪತ್ತೆಯಾಗಿವೆ ಎಂದು ಸಚಿವೆ ಸ್ಮೃತಿ ಇರಾನಿ ಸಂಸತ್ತಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 11 ಹಾಗೂ ದೆಹಲಿ, ಹರ್ಯಾಣದಲ್ಲಿ ತಲಾ ಎರಡು ಸ್ಮಾರಕಗಳು ಕಾಣೆಯಾಗಿವೆ. ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಸ್ಮಾರಕಗಳೂ ಕಾಣೆಯಾದ ಪಟ್ಟಿಯಲ್ಲಿದೆ.

ಮತ್ತಷ್ಟು ಓದಿ: ನಿಜಾಮರು ಗಿಫ್ಟ್​​ ಕೊಟ್ಟಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು, ಅದನ್ನೀಗ ಪುರಾತತ್ವ ಇಲಾಖೆ ತನ್ನದು ಅನ್ನುತ್ತಿದೆ! ರೈತರ ಗತಿಯೇನು?

ಈ ಸ್ಮಾರಕಗಳನ್ನು ಪಟ್ಟಿಯಿಂದ ಕೈಬಿಟ್ಟ ಬಳಿಕ , ಕೇಂದ್ರೀಯ ಏಜೆನ್ಸಿ ಈ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ಹೊಂದಿರುವುದಿಲ್ಲ. ಜತೆಗೆ ಇದಕ್ಕೆ ಸಂಬಂಧಿಸಿದ ನಿರ್ಮಾಣ ಚಟುವಟಿಕೆಗಳನ್ನು ಅಥವಾ ಈ ಪ್ರದೇಶಗಳ ನಗರೀಕರಣಕ್ಕೆ ಎಎಸ್​ಐ ಅಡ್ಡಬರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ