ಗುವಾಹಾಟಿ: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಮಾರ್ಚ್ 19) ಅಸ್ಸಾಂನಲ್ಲಿ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಚಾರದಲ್ಲಿ ತೊಡಗಿರುವ ಕೈ ನಾಯಕ ಹೀಗೆ ಭರವಸೆ ನೀಡಿದರು.
ಯಾವ ಧರ್ಮವೂ ವೈರತ್ವವನ್ನು ಕಲಿಸುವುದಿಲ್ಲ. ಆದರೆ, ಬಿಜೆಪಿ ಜನರ ನಡುವೆ ಬಿರುಕು ಮೂಡಿಸಲು ದ್ವೇಷ ಮಾರಾಟ ಮಾಡುತ್ತಿದೆ ಎಂದು ದಿಬ್ರುಘರ್ನ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿದರು. ಬಿಜೆಪಿಯವರು ಎಲ್ಲಿಗೆ ಹೋಗುತ್ತಾರೋ ಅಲ್ಲೆಲ್ಲಾ ದ್ವೇಷ ಹಬ್ಬಿಸುತ್ತಾರೆ. ಸಮಾಜ ಒಡೆಯಲು ದ್ವೇಷವನ್ನೇ ಅಸ್ತ್ರವಾಗಿ ಬಳಸುತ್ತಾರೆ. ಆದರೆ, ಪ್ರೀತಿ ಮತ್ತು ಸಹಬಾಳ್ವೆ ಹರಡುವ ಬಗ್ಗೆ ಕಾಂಗ್ರೆಸ್ ಪಕ್ಷ ಭರವಸೆ ನೀಡುತ್ತದೆ ಎಂದು ತಿಳಿಸಿದರು.
ಆರ್ಎಸ್ಎಸ್ ಮೇಲೆ ಸೂಚ್ಯ ದಾಳಿ ನಡೆಸಿದ ರಾಹುಲ್ ಗಾಂಧಿ, ನಾಗ್ಪುರ್ನ ಒಂದು ಶಕ್ತಿ ಇಡೀ ದೇಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ದೇಶದ ಭವಿಷ್ಯವಾಗಿರುವ ಯುವಜನರು ಪ್ರೀತಿ ಹಾಗೂ ಸ್ಥೈರ್ಯದಿಂದ ಇದಕ್ಕೆ ತಡೆಯೊಡ್ಡಬೇಕು ಎಂದು ಕರೆ ನೀಡಿದರು. ಬಳಿಕ, ಚಬ್ರುಘರ್ನ ಚಬುವಾ ಪ್ರದೇಶದಲ್ಲಿ ಚಹಾ ಕೆಲಸಗಾರರೊಂದಿಗೆ ಸಂವಾದ ನಡೆಸಿದರು.
#WATCH Assam: Congress leader Rahul Gandhi interacted with tea workers in Chabua of Dibrugarh district earlier today. pic.twitter.com/Ax2rSQezZy
— ANI (@ANI) March 19, 2021
ಅಸ್ಸಾಂನಲ್ಲಿ ಎರಡು ದಿನ ಭೇಟಿಯಲ್ಲಿರುವ ರಾಹುಲ್ ಗಾಂಧಿ, ಶನಿವಾರ (ಮಾರ್ಚ್ 20) ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಲಿದ್ದಾರೆ.
Published On - 7:21 pm, Fri, 19 March 21