ಕಾಂಗ್ರೆಸ್​ನ್ನು ಮೃದುವಾದ ನಕ್ಸಲ್ ಎಂದು ಕರೆದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

|

Updated on: Jan 25, 2024 | 2:33 PM

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್​ನ್ನು ಮೃದುವಾದ ನಕ್ಸಲ್ ಎಂದು ಕರೆದಿದ್ದಾರೆ. ಕಾಂಗ್ರೆಸ್​ ಪಕ್ಷವು ಈಗ ಮೃದುವಾದ ನಕ್ಸಲ್​ ಆಗಿ ಮಾರ್ಪಟ್ಟಿದೆ. ಗಾಂಧಿ ತತ್ವದಿಂದ ಹಿಂದೆ ಸರಿಯುತ್ತಿದೆ. ನಾನು 22 ವರ್ಷ ಕಾಂಗ್ರೆಸ್ ಜೊತೆ ಇದ್ದೆ. ಘೋಷಣೆಗಳು ಬದಲಾಗಿವೆ. ಕಾಂಗ್ರೆಸ್ ಘೋಷಣೆಗಳು ವಿಭಿನ್ನ, ಮೃದು. ಈಗ ಅವರು ಎಡಪಂಥೀಯ ಒಲವು ತೋರಿದ್ದಾರೆ ಎಂದರು.

ಕಾಂಗ್ರೆಸ್​ನ್ನು ಮೃದುವಾದ ನಕ್ಸಲ್ ಎಂದು ಕರೆದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ
Image Credit source: Hindustan Times
Follow us on

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಕಾಂಗ್ರೆಸ್​ನ್ನು ಮೃದುವಾದ ನಕ್ಸಲ್ ಎಂದು ಕರೆದಿದ್ದಾರೆ. ಕಾಂಗ್ರೆಸ್​ ಪಕ್ಷವು ಈಗ ಮೃದುವಾದ ನಕ್ಸಲ್​ ಆಗಿ ಮಾರ್ಪಟ್ಟಿದೆ. ಗಾಂಧಿ ತತ್ವದಿಂದ ಹಿಂದೆ ಸರಿಯುತ್ತಿದೆ. ನಾನು 22 ವರ್ಷ ಕಾಂಗ್ರೆಸ್ ಜೊತೆ ಇದ್ದೆ, ಘೋಷಣೆಗಳು ಬದಲಾಗಿವೆ. ಕಾಂಗ್ರೆಸ್ ಘೋಷಣೆಗಳು ವಿಭಿನ್ನ, ಮೃದು, ಈಗ  ಎಡಪಂಥೀಯ ಒಲವು ತೋರಿದ್ದಾರೆ ಎಂದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಬಿಟ್ಟು ಪಶ್ಚಿಮ ಬಂಗಾಳ ಪ್ರವೇಶಿಸುತ್ತಿದ್ದಂತೆ ಈ ಹೇಳಿಕೆಯನ್ನು ಸಿಎಂ ನೀಡಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಸ್ಸಾಂನಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿಯನ್ನು ಬಂಧಿಸಲಾಗುವುದು ಎಂದು ಹಿಮಂತ ಬುಧವಾರ ಹೇಳಿದ್ದಾರೆ. ಈ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಅಸ್ಸಾಂ ಸಿಐಡಿಗೆ ಈಗಾಗಲೇ ವರ್ಗಾಯಿಸಲಾಗಿದೆ.

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಎದುರಿಸಿರುವ ಭದ್ರತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದರು. ರಾಜ್ಯಸಭೆಯ ವಿರೋಧಪಕ್ಷ ನಾಯಕರೂ ಆಗಿರುವ ಖರ್ಗೆ ಮಂಗಳವಾರ ರಾತ್ರಿ ಬರೆದ ಪತ್ರವು ಕಾಂಗ್ರೆಸ್​ ನಾಯಕನ ಸುರಕ್ಷತೆಯ ಬಗ್ಗೆ ಮೂಡಿರುವ ಕಳವಳವನ್ನು ಎತ್ತಿ ಹೇಳಿದೆ.

ಜನವರಿ 22ರಂದು ನಾಗಾಂವ್​ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಬೆಂಗಾವಲು ಪಡೆಗೆ ಅಡ್ಡಿಪಡಿಸಿದರು ಎಂದು ಪತ್ರದಲ್ಲಿ ಬರೆದಿದ್ದಾರೆ.

ಮತ್ತಷ್ಟು ಓದಿ: ಅಸ್ಸಾಂನಲ್ಲಿ ರಾಹುಲ್ ಗಾಂಧಿ ಭದ್ರತೆ ಬಗ್ಗೆ ಕಳವಳ, ಅಮಿತ್​ ಶಾಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ಅಸ್ಸಾಂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಮತ್ತು ಕೆಲವೊಮ್ಮೆ ಕಾರ್ಯಕರ್ತರ ಬೆಂಗಾವಲು ವಾಹನವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಹೀಗಾಗಿ ರಾಹುಲ್ ಗಾಂಧಿ ಭದ್ರತೆಗೆ ಅಪಾಯವಿದೆ ಎಂದಿದ್ದಾರೆ.  ಮಂಗಳವಾರ ಗುವಾಹಟಿಯ ಹೊರವಲಯದಲ್ಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ ನಂತರ ಅಮಿತ್​ಶಾ ಗೆ ಪತ್ರ ಬರೆಯಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ