ದಿಸ್ಪುರ್: ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆದುಬರುತ್ತಿದ್ದು 77ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮುನ್ನಡೆ ಸಾಧಿಸಿದೆ. ಮಾರ್ಚ್ 2, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಆರಂಭಿಕ ಸುತ್ತಿನ ಮತ ಎಣಿಕೆ ಮಾಹಿತಿ ಪ್ರಕಾರ ಎನ್ ಡಿಎ 77ಸೀಟುಗಳಲ್ಲಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ಕೂಟ 40 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.
ಅಸ್ಸಾಂನಲ್ಲಿ ಸರ್ಕಾರ ರಚಿಸಬೇಕಾದರೆ 64 ಸೀಟುಗಳ ಅಗತ್ಯವಿದೆ. ಈಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದ್ದು ಸತತ ಎರಡನೇ ಬಾರಿ ಅಧಿಕಾರಕ್ಕೇರುವುದು ಖಚಿತವಾಗಿದೆ. ಪಂಚರಾಜ್ಯಗಳ ಚುನಾವಣೆಗಳ ಪೈಕಿ ಅಸ್ಸಾಂ ಚುನಾವಣೆಯಲ್ಲಿ ಮಾತ್ರ ಎರಡನೇ ಬಾರಿ ಅಧಿಕಾರಕ್ಕೇರುವ ದೃಢ ವಿಶ್ವಾಸ ಬಿಜೆಪಿಗೆ ಇತ್ತು.
ಮುಖ್ಯವಾಗಿ ಬೋಡೋ ಮತ್ತು ಸರನಿಯಾ ಸಮುದಾಯಗಳನ್ನು ಪ್ರತಿನಿಧಿಸುವ ಅಸೋಮ್ ಗಣ ಪರಿಷತ್ (ಎಜಿಪಿ), ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮತ್ತು ಗಣ ಸುರಕ್ಷ ಪಕ್ಷ (GSP) ನೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಈ ವರ್ಷ ತೀವ್ರ ಸ್ಪರ್ಧೆಯನ್ನು ಎದುರಿಸಿದೆ.
ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟದಲ್ಲಿ ಅಲ್ಪಸಂಖ್ಯಾತ ಬೆಂಬಲಿತ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಸುಮಾರು ಎರಡು ದಶಕಗಳ ಕಾಲ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಮೇಲೆ ನಿಯಂತ್ರಣವನ್ನು ಹೊಂದಿದ್ದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್, ಮತ್ತು ಅಂಚಾಲಿಕ್ ಗಾನಾ ಮೋರ್ಚಾ, ಕಮ್ಯುನಿಸ್ಟ್ (ಮಾರ್ಕ್ಸ್ ವಾದಿ), ಸಿಪಿಐ ಮತ್ತು ಸಿಪಿಐ (ಮಾರ್ಕ್ಸ್ ವಾದಿ -ಲೆನಿನಿಸ್ಟ್) ಪಕ್ಷಗಳಿವೆ.
ಹೊಸದಾಗಿ ರೂಪುಗೊಂಡ ಎರಡು ಪ್ರಾದೇಶಿಕ ಪಕ್ಷಗಳಾದ ಅಸ್ಸಾಂ ಜತಿಯ ಪರಿಷತ್ (ಎಜೆಪಿ) ಮತ್ತು ರೈಜೋರ್ ದಳ. 2019 ರಲ್ಲಿ ಅಸ್ಸಾಂನ್ಲಿ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ಪಕ್ಷವಾಗಿದೆ ಇದು. ಈ ಪಕ್ಷಗಳ ವಿರುದ್ಧ ಎನ್ಡಿಎ ಮೈತ್ರಿಕೂಟ ಕಣಕ್ಕಿಳಿದಿತ್ತು.
ಅಸ್ಸಾಂನಲ್ಲಿ ಮೊದಲ, ಎರಡನೇ ಮತ್ತು ಮೂರನೇ ಹಂತಗಳಲ್ಲಿ ಮತದಾನ ಪ್ರಮಾಣ ಕ್ರಮವಾಗಿ ಶೇ. 79.93, ಶೇ 80.96 ಮತ್ತು ಶೇ 82.3 ಆಗಿದೆ. 26 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಅಸೋಮ್ ಗಣ ಪರಿಷತ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಆಡಳಿತರೂಢ ಪಕ್ಷ 92 ಸ್ಥಾನಗಳಿಗೆ ಸ್ಪರ್ಧಿಸಿದೆ. ಪ್ರತಿಪಕ್ಷ ಗ್ರ್ಯಾಂಡ್ ಅಲೈಯನ್ಸ್‌ನಲ್ಲಿ ಕಾಂಗ್ರೆಸ್ 94 ಸ್ಥಾನಗಳಿಗೆ ಸ್ಪರ್ಧಿಸಿದರೆ, ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ 14 ಸ್ಥಾನಗಳಿಗೆ ಸ್ಪರ್ಧಿಸಿದೆ.
ಜಲಕುಬರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿಮಾಂತ ಬಿಸ್ವಾ ಮುನ್ನಡೆ
Official trends | BJP’s Himanta Biswa Sarma leading from Jalukbari.
(File photo)#AssamAssemblyPolls pic.twitter.com/OlvB2bsqVN
— ANI (@ANI) May 2, 2021
ಜನರು ನಮ್ಮನ್ನು ಆಶೀರ್ವದಿಸಿದರು : ಸೋನೊವಾಲ್
ಅಸ್ಸಾಂ ವಿಧಾನಸಭಾ ಚುನಾವಣೆಯ ಆರಂಭಿಕ ಫಲಿತಾಂಶ ಬಗ್ಗೆ ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಬಿಜೆಪಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸಿದೆ. ಅಧಿಕಾರ ಮುಂದುವರಿಸಲು ಜನರು ಆಶೀರ್ವದಿಸಿದ್ದಾರೆ ಎಂದಿದ್ದಾರೆ.
BJP will form govt in Assam, says Sonowal ahead of poll results
Read @ANI Story | https://t.co/WV1S4it7vV pic.twitter.com/bck97HAtVL
— ANI Digital (@ani_digital) May 2, 2021