Assam Floods: ಅಸ್ಸಾಂ ಪ್ರವಾಹದ ಸಾವಿನ ಸಂಖ್ಯೆ 25ಕ್ಕೆ ಏರಿಕೆ; 10 ಜಿಲ್ಲೆಗಳ 4 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

|

Updated on: Jun 05, 2024 | 7:04 PM

ಅಸ್ಸಾಂನಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಇದರಿಂದ 10ಕ್ಕೂ ಹೆಚ್ಚು ಜಿಲ್ಲೆಗಳ ಜನಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಪ್ರವಾಹವು ಕಳೆದ 24 ಗಂಟೆಗಳಲ್ಲಿ 6 ಜನರನ್ನು ಬಲಿ ತೆಗೆದುಕೊಂಡಿದೆ. ಈ ಮೂಲಕ ಸಾವಿನ ಸಂಖ್ಯೆ 25ಕ್ಕೆ ಏರಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಭೀಕರವಾಗಿದೆ.

Assam Floods: ಅಸ್ಸಾಂ ಪ್ರವಾಹದ ಸಾವಿನ ಸಂಖ್ಯೆ 25ಕ್ಕೆ ಏರಿಕೆ; 10 ಜಿಲ್ಲೆಗಳ 4 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ
ಅಸ್ಸಾಂ ಪ್ರವಾಹ
Follow us on

ಅಸ್ಸಾಂ: ರೆಮಲ್ ಚಂಡಮಾರುತದಿಂದಾಗಿ (Cyclone Remal) ಅಸ್ಸಾಂನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಅಸ್ಸಾಂನಲ್ಲಿ ಪ್ರವಾಹ (Assam Floods) ಪರಿಸ್ಥಿತಿ ಉಂಟಾಗಿದ್ದು, ಮಂಗಳವಾರ ಮತ್ತೆ 7 ಜನರು ಸಾವನ್ನಪ್ಪುವ ಮೂಲಕ ಪ್ರವಾಹದಿಂದ ಉಂಟಾಗಿರುವ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಕ್ಯಾಚಾರ್, ನಾಗಾನ್ ಮತ್ತು ಕಮ್ರೂಪ್ (ಮೆಟ್ರೋ) ಜಿಲ್ಲೆಗಳಲ್ಲಿ ಹಲವು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ರೆಮಲ್ ಚಂಡಮಾರುತದಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದೆ. ಇದು ತೀವ್ರ ಮಳೆಯನ್ನು ಉಂಟುಮಾಡುತ್ತಿದೆ, ಇದು ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಸಾವಿನ ಸಂಖ್ಯೆ ಈಗ 25ಕ್ಕೆ ತಲುಪಿದೆ. ಮಂಗಳವಾರ ಇನ್ನೂ 7 ಸಾವುಗಳು ವರದಿಯಾಗಿವೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಕಾಚಾರ್ ಜಿಲ್ಲೆಯಲ್ಲಿ 5 ಜನರು ಮುಳುಗಿ ಸಾವನ್ನಪ್ಪಿದ್ದಾರೆ. ನಾಗಾಂವ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕಮ್ರೂಪ್ (ಮೆಟ್ರೊ) ಜಿಲ್ಲೆಯಲ್ಲಿ ಪ್ರವಾಹಕ್ಕೆ ಒಂದು ಮಗು ಬಲಿಯಾಗಿದೆ. ಪ್ರವಾಹವು 10 ಜಿಲ್ಲೆಗಳಲ್ಲಿ 4.23 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. 459 ಹಳ್ಳಿಗಳು ಇನ್ನೂ ನೀರಿನಿಂದ ಆವೃತವಾಗಿವೆ. ಪ್ರಭಾವಿತ ಜಿಲ್ಲೆಗಳಲ್ಲಿ ಕ್ಯಾಚಾರ್, ನಾಗಾಂವ್, ಕರೀಮ್‌ಗಂಜ್, ಧೇಮಾಜಿ, ಮೊರಿಗಾಂವ್, ಹೊಜೈ, ದಿಬ್ರುಗರ್, ದಿಮಾ ಹಸಾವೊ, ಹೈಲಕಂಡಿ ಮತ್ತು ಕರ್ಬಿ ಆಂಗ್ಲಾಂಗ್ ಪಶ್ಚಿಮ ಸೇರಿವೆ.

ಇದನ್ನೂ ಓದಿ: ಅಸ್ಸಾಂ ಪೊಲೀಸ್ ಕಸ್ಟಡಿಯಲ್ಲಿ ಆರೋಪಿಯ ಸಾವು; ಲಖಿಂಪುರದಲ್ಲಿ ಹೆಚ್ಚಿದ ಉದ್ವಿಗ್ನತೆ

ಅಸ್ಸಾಂನಲ್ಲಿ ನಿರಂತರ ಮಳೆಯಿಂದಾಗಿ ಬ್ರಹ್ಮಪುತ್ರ, ಕೊಪಿಲಿ, ಕುಶಿಯಾರ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಏರಿದೆ. ನಾಗಾಂವ್ ಜಿಲ್ಲೆಯಲ್ಲಿ 213,482, ಕ್ಯಾಚಾರ್ ಜಿಲ್ಲೆಯಲ್ಲಿ 119,090, ಹೊಜೈ ಜಿಲ್ಲೆಯಲ್ಲಿ 60,451 ಮತ್ತು ಕರೀಮ್‌ಗಂಜ್ ಜಿಲ್ಲೆಯಲ್ಲಿ 19,524 ಜನರನ್ನು ಪ್ರವಾಹವು ತೀವ್ರವಾಗಿ ಬಾಧಿಸಿದೆ. ಸರ್ಕಾರ ತೆರೆದಿರುವ 240 ಪರಿಹಾರ ಶಿಬಿರಗಳಲ್ಲಿ ಪ್ರಸ್ತುತ 1.08 ಲಕ್ಷ ಜನರು ವಾಸಿಸುತ್ತಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಸ್ಥಳೀಯ ಆಡಳಿತದಿಂದ 42 ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ