ನಿತೀಶ್ ಕುಮಾರ್, ನಾಯ್ಡು ಎಲ್ಲರ ಸ್ನೇಹಿತರು; ಮೋದಿಗೆ ಸಮ್ಮಿಶ್ರ ಸರ್ಕಾರ ನಡೆಸಲು ಸಾಧ್ಯವಿಲ್ಲ: ಸಂಜಯ್ ರಾವತ್
"ಬಿಜೆಪಿಗೆ ಎಲ್ಲಿ ಬಹುಮತವಿದೆ? ಅವರು ಈಗ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಅವರು ಪ್ರಯತ್ನಿಸಲಿ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎಲ್ಲರ ಸ್ನೇಹಿತರು, ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬೆದರಿಕೆ ಹಾಕುವವರನ್ನು ಬೆಂಬಲಿಸಬೇಕು ಎಂದು ನಾನು ಭಾವಿಸುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈ ಜೂನ್ 05: 2024 ರ ಲೋಕಸಭಾ ಚುನಾವಣೆಯ (Lok Sabha Elections 2024) ಫಲಿತಾಂಶದ ಒಂದು ದಿನದ ನಂತರ ಎನ್‌ಡಿಎ (NDA) ಮತ್ತು ಇಂಡಿಯಾ (INDIA) ಎರಡರಲ್ಲೂ ತೀವ್ರವಾದ ಮಾತುಕತೆಗಳು ನಡೆಯುತ್ತಿದ್ದು, ಈ ನಡುವೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಸೇನಾ ನಾಯಕ ಸಂಜಯ್ ರಾವತ್ (Sanjay Raut) ಬುಧವಾರ ಸಮ್ಮಿಶ್ರ ಸರ್ಕಾರವನ್ನು ನಡೆಸಲು ನರೇಂದ್ರ ಮೋದಿಯವರು ಸಮರ್ಥರಲ್ಲ ಎಂದಿದ್ದಾರೆ. ಬಿಜೆಪಿ ಈಗ ಸಮ್ಮಿಶ್ರ ರಚನೆಗೆ ಪ್ರಯತ್ನಿಸುತ್ತಿದೆ. ಆದರೆ ಅವರು ತಮ್ಮದೇ ಆದ ಧೋರಣೆಯಲ್ಲಿ ‘ಮೋದಿ ಕಿ ಸರ್ಕಾರ್’, ‘ಮೋದಿ ಕಿ ಗ್ಯಾರಂಟಿ’ ಎಂದು ಮಾತನಾಡುತ್ತಿದ್ದರು ಎಂದಿದ್ದಾರೆ ರಾವತ್. ಎನ್‌ಡಿಎ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿತೀಶ್ ಕುಮಾರ್ ಮತ್ತು ಎನ್ ಚಂದ್ರಬಾಬು ನಾಯ್ಡು ಅವರು ಸಮ್ಮಿಶ್ರದಲ್ಲಿ ಇರುವ ಸಾಧ್ಯತೆಯಿದೆ. ಆದರೆ ಹೊಸ ಎನ್‌ಡಿಎ ಸರ್ಕಾರದಿಂದ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಇಂಡಿಯಾ ಮೈತ್ರಿಕೂಟವು ಬುಧವಾರ ನವದೆಹಲಿಯಲ್ಲಿ ತಮ್ಮ ಮಿತ್ರ ಪಕ್ಷಗಳ ಸಭೆ ಕರೆ ನೀಡಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುಬಿಟಿ ಸೇನಾಯಿಂದ ಸಂಜಯ್ ರಾವತ್ ಮತ್ತು ಉದ್ಧವ್ ಠಾಕ್ರೆ ಇಬ್ಬರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ. “ಬಿಜೆಪಿಗೆ ಎಲ್ಲಿ ಬಹುಮತವಿದೆ? ಅವರು ಈಗ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಅವರು ಪ್ರಯತ್ನಿಸಲಿ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎಲ್ಲರ ಸ್ನೇಹಿತರು, ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬೆದರಿಕೆ ಹಾಕುವವರನ್ನು ಬೆಂಬಲಿಸಬೇಕು ಎಂದು ನಾನು ಭಾವಿಸುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್
#WATCH | On chances of INDIA alliance forming govt, Shiv Sena (UBT) leader Sanjay Raut says, “…Ab Nitish Kumar aur Chandrababu sabhi ke dost hain…Mujhe nahi lagta hai ki Chandrababu and Nitish Kumar jaise log desh ke loktantra aur samvindhan ko jin logon se khatra hai unke… pic.twitter.com/5SMMNiYx6A
— ANI (@ANI) June 5, 2024
ನಿತೀಶ್ ಕುಮಾರ್ ಪ್ರಯಾಣಿಸಿದ ಅದೇ ವಿಮಾನದಲ್ಲಿ ನವದೆಹಲಿಗೆ ಹಾರಿದ ನಂತರ ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ‘ವೇಯ್ಟ್ ಅಂಡ್ ವಾಚ್’ ಎಂದು ಹೇಳಿದ್ದರಿಂದ ಇಂಡಿಯಾ ಬಣದ ನಾಯಕರು ತಮ್ಮ ಮುಂದಿನ ನಡೆಯ ಬಗ್ಗೆ ಸಸ್ಪೆನ್ಸ್ ಅನ್ನು ಉಳಿಸಿಕೊಂಡರು. ತೇಜಸ್ವಿ, ಸಂಜಯ್ ರಾವತ್, ಉದ್ಧವ್ ಠಾಕ್ರೆ, ಶರದ್ ಪವಾರ್, ಎಂಕೆ ಸ್ಟಾಲಿನ್, ಚಂಪೈ ಸೊರೆನ್, ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿ, ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಅವರಂತಹ ವಿರೋಧ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Suresh Gopi: ಕೇರಳದಲ್ಲಿ ಅರಳಿದ ಕಮಲ; ಸುರೇಶ್ ಗೋಪಿ ಎಂಬ ನಾಯಕ-ನಟನ ಪರಿಶ್ರಮಕ್ಕೆ ಸಂದ ಗೆಲುವು ಇದು
ನರೇಂದ್ರ ಮೋದಿ ಅವರು ಬುಧವಾರ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮುಂದಿನ ಸರ್ಕಾರ ರಚನೆಗೆ ಮುನ್ನ ತಮ್ಮ ಸಚಿವ ಸಂಪುಟದೊಂದಿಗೆ ರಾಜೀನಾಮೆ ಸಲ್ಲಿಸಿದರು. ರಾಷ್ಟ್ರಪತಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದು ಹೊಸ ಸರ್ಕಾರವು ಅಧಿಕಾರ ವಹಿಸಿಕೊಳ್ಳುವವರೆಗೆ ಮುಂದುವರಿಯುವಂತೆ ಮೋದಿ ಮತ್ತು ಮಂತ್ರಿಮಂಡಲಕ್ಕೆ ಹೇಳಿದ್ದಾರೆ.. ವರದಿಗಳ ಪ್ರಕಾರ, ಮೂಲಗಳ ಪ್ರಕಾರ, ಮೋದಿ ಅವರ ಮೂರನೇ ಅವಧಿಗೆ ಪ್ರಮಾಣವಚನ ಸಮಾರಂಭ ಜೂನ್ 8 ರಂದು ನಡೆಯಲಿದೆ.
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ