ಐವರು ಶಾಸಕರು ಇದ್ದರೂ ಕೋಲಾರದಲ್ಲಿ ಕಾಂಗ್ರೆಸ್ ಸೋತಿದ್ಯಾಕೆ? ​ಇಲ್ಲಿವೆ ಕಾರಣ

Kolar Lok Sabha Constituency: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಎಡವಿದ್ದು, ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು, ಮೂರು ಜನ ಮಂತ್ರಿಗಳು, ಮತ್ತೊಬ್ಬರು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲಲಾಗಿಲ್ಲ. ಬದಲಾಗಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಗೆಲ್ಲುವ ಮೂಲಕ ಕಾಂಗ್ರೆಸ್​​ಗೆ ಟಕ್ಕರ್ ನೀಡಿದ್ದಾರೆ.

ಐವರು ಶಾಸಕರು ಇದ್ದರೂ ಕೋಲಾರದಲ್ಲಿ ಕಾಂಗ್ರೆಸ್ ಸೋತಿದ್ಯಾಕೆ? ​ಇಲ್ಲಿವೆ ಕಾರಣ
ಐವರು ಶಾಸಕರು ಇದ್ದರೂ ಕೋಲಾರದಲ್ಲಿ ಕಾಂಗ್ರೆಸ್ ಸೋತಿದ್ಯಾಕೆ? ​ಇಲ್ಲಿವೆ ಕಾರಣ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2024 | 7:01 PM

ಕೋಲಾರ, ಜೂನ್​ 5: ಕಾಂಗ್ರೆಸ್​ ಭದ್ರಕೋಟೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ (Kolar Lok Sabha Constituency) ಕಾಂಗ್ರೆಸ್‌ಗೆ ಸತತ ಎರಡನೇ ಬಾರಿಗೆ ಸೋಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ಗೆ (Congress) ಒಳೇಟು ಬಿದ್ದಿದ್ದು, ರಾಜೀನಾಮೆ ಪ್ರಹಸನ ಮಾಡಿದ ರೆಬಲ್ ಶಾಸಕರು ಮತ್ತು ಸಚಿವರಿಗೆ ತೀವ್ರ ಹಿನ್ನಡೆಯಾಗಿದೆ. ಇದೀಗ ಕೋಲಾರ ಕಾಂಗ್ರೆಸ್​​ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಬೀಗಿದ್ದ ಕಾಂಗ್ರೆಸ್ ಒಂದು ವರ್ಷ ಕಳೆಯುವ ಮುನ್ನವೆ ಮತದಾರರು ಪಾಠ ಕಲಿಸಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಎಡವಿದ್ದು, ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು, ಮೂರು ಜನ ಮಂತ್ರಿಗಳು, ಮತ್ತೊಬ್ಬರು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲಲಾಗಿಲ್ಲ. ಬದಲಾಗಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಗೆಲ್ಲುವ ಮೂಲಕ ಕಾಂಗ್ರೆಸ್​​ಗೆ ಟಕ್ಕರ್ ನೀಡಿದ್ದಾರೆ.

ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಕೆ.ವಿ.ಗೌತಮ್ ಹರಕೆಯ ಕುರಿಯಂತಾಗಿದ್ದಾರೆ ಎನ್ನಲಾಗುತ್ತಿದೆ. ಕೋಲಾರ ಕ್ಷೇತ್ರದಲ್ಲಿ ರಮೇಶ್ ಕುಮಾರ್ ಬಣ ಹಾಗೂ ಕೆ.ಎಚ್.ಮುನಿಯಪ್ಪ ಬಣದ ಮಧ್ಯೆ ಇರುವ ಕಿತ್ತಾಟ, ಎಡ-ಬಲ ಸಮುದಾಯದ ಗೊಂದಲ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶಾಸಕರು ಹಾಗೂ ಸಚಿವರ ರಾಜೀನಾಮೆ ಪ್ರಹಸನ ಈಗ ಪಕ್ಷಕ್ಕೆ ಮುಳುವಾಗಿದೆ. ಗುಂಪುಗಾರಿಕೆ ಮಧ್ಯೆ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಅಸಮಾಧಾನಕ್ಕೆ ತೆರೆ ಬಿದ್ದಿರಲಿಲ್ಲ.

ಇದನ್ನೂ ಓದಿ: ಕೋಲಾರ ಲೋಕಸಭಾ ಚುನಾವಣೆ 2024 ಫಲಿತಾಂಶ: ಜೆಡಿಎಸ್​ ಅಭ್ಯರ್ಥಿ ಮಲ್ಲೇಶ್​​ಗೆ ಗೆಲುವು

ಇಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಸ್ಥಳೀಯ ಶಾಸಕರು ಕಡೆಗಣಿಸಲಾಗಿತ್ತು. ಅಲ್ಲದೆ ಕೆಲ ಕಾಂಗ್ರೆಸ್​ ನಾಯಕರು ನಾನು ಎಂದು ಮರೆಯುತ್ತಿದ್ರು ಅವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ ಅನ್ನೋದು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮಾತಾದ್ರೆ, ಅತ್ತ ಆಹಾರ ಸಚಿವ ಮುನಿಯಪ್ಪ ಕೂಡ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳದೆ ಒಂದು ರೀತಿ ಸೋಲಿಗೆ ಕಾರಣವಾಗಿದೆ. ಹಾಗಾಗಿ ಕೋಲಾರ ಸೋಲಿಗೆ ಟಿಕೆಟ್ ಕೊಡಿಸಿದವರನ್ನೇ ಕೇಳಿ ಸೋಲು ಗೆಲುವಿನ ಜವಾಬ್ದಾರಿ ಅವರದ್ದೇ ಅನ್ನೋದು ಮುನಿಯಪ್ಪ ಅವರು ಮಾತು ಕೇಳಿ ಎನ್ನುವ ಮೂಲಕ ಆಹಾರ ಕೆ.ಎಚ್.ಮುನಿಯಪ್ಪ ಕೂಡ ಜಾರಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್​ ಪದೇ ಪದೇ ಕಿತ್ತಾಟಕ್ಕಿಂತ ಮೈತ್ರಿಯೇ ಸರಿ ಅನ್ನೋ ಮತದಾರರ ಲೆಕ್ಕಾಚಾರ ಗೆಲುವು ಜೆಡಿಎಸ್ ಅಭ್ಯರ್ಥಿ ಪರ ವಾಲಿದೆ. ಕಾಂಗ್ರೆಸ್​ ಸೋಲಿಗೆ ರಮೇಶ್ ಕುಮಾರ್ ಆ್ಯಂಡ್​ ಟೀಂ, ಕಾಂಗ್ರೆಸ್​ ಸರ್ಕಾರದಲ್ಲಿ ಕೋಲಾರಕ್ಕೆ ಯಾವುದೇ ಪ್ರಮುಖ ಯೋಜನೆ ಬಂದಿಲ್ಲ. ಬಜೆಟ್‌ನಲ್ಲೂ ಜಿಲ್ಲೆಯನ್ನು ಕಡೆಗಣಿಸಲಾಗಿದೆ, ಸಚಿವ ಸ್ಥಾನವೂ ಸಿಕ್ಕಿಲ್ಲ ಅನ್ನೋ ಅಂಶಗಳು ಕಾಂಗ್ರೆಸ್ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಟಿಕೆಟ್ ವಿಚಾರದಲ್ಲಿ ಎರಡೂ ಬಣಗಳ ನಡುವೆ ವೈಮನಸ್ಯ ಇದರ ಜೊತೆಗೆ ಮೋದಿ ನಾಮ ಜಪದ ಪ್ರಭಾವ ಬಲವಾಗಿದ್ದ ಕಾರಣ ಮಲ್ಲೇಶ್ ಬಾಬು ಅವರಿಗೆ ಗೆಲುವು ಒಲಿದಿದೆ. ಬಿಜೆಪಿ ಮುಖಂಡರಲ್ಲಿನ ಮನಸ್ತಾಪ ಸ್ವಲ್ಪಮಟ್ಟಿಗೆ ಒಳೇಟು ನೀಡಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ.

ಇದನ್ನೂ ಓದಿ: ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಂ ಮಲ್ಲೇಶ್​ ಬಾಬು

ಕಾಂಗ್ರೆಸ್ ಸೋಲಿಗೆ ಕಾರಣಗಳನ್ನ ನೋಡೋದಾದ್ರೆ ಗ್ಯಾರಂಟಿ ಯೋಜನೆಗಳು ಅಷ್ಟಾಗಿ ಮತವಾಗಿ ಪರಿವರ್ತನೆಯಾಗಿಲ್ಲ. ಟಿಕೆಟ್ ವಿಚಾರದಲ್ಲಿ ಶಾಸಕರ ರಾಜೀನಾಮೆ ಪ್ರಹಸನ, ಕಾಂಗ್ರೆಸ್ ಶಾಸಕರಲ್ಲೇ ಹೊಂದಾಣಿಕೆ ಕೊರತೆ, ಕೆ.ಎಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಕೈಕೊಟ್ಟಿದ್ದು, ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳದ ಮುಖಂಡರು, ಕೊನೆ ಗಳಿಗೆಯಲ್ಲಿ ಗೌತಮ್‌ಗೆ ಟಿಕೆಟ್ ಸಿಕ್ಕಿದ್ದು, ಜಾತಿವಾರು ಲೆಕ್ಕಾಚಾರದಲ್ಲಿ ತಪ್ಪಿದ್ದು, ಎಡಗೈ, ಬಲಗೈ ಸಮುದಾಯದ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಉಂಟಾದ ಗೊಂದಲ, ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು ಅನ್ನೋದು ಸಹ ಸೋಲಿಗೆ ಪ್ರಮುಖ ಕಾರಣಗಳಾಗಿವೆ. ಆದ್ರೆ ಕಾಂಗ್ರೆಸ್​ ಒಳೇಟು, ಗುಂಪುಗಾರಿಕೆ ಅನ್ನೋದಕ್ಕಿಂತ ಹೊಸದಾಗಿ ಬಂದು ಕ್ಷೇತ್ರ ಸುತ್ತಾಡಲು ಆಗಿಲ್ಲ, ಸಮಯ ಸಿಕ್ಕಿಲ್ಲ ಅನ್ನೋದು ಪರಾಜಿತ ಅಭ್ಯರ್ಥಿ ಗೌತಮ್ ಅಭಿಪ್ರಾಯ.

ಕಾಂಗ್ರೆಸ್​ನ ಗುಂಪುಗಾರಿಕೆ, ಸಖತ್ ಸದ್ದು ಮಾಡಿದ ಶಾಸಕರು ಹಾಗೂ ಸಚಿವರ ರಾಜೀನಾಮೆ ಪ್ರಹಸನ ಪಕ್ಷಕ್ಕೆ ಮುಳುವಾಗಿದೆ. ಜಿಲ್ಲಾ ಕಾಂಗ್ರೆಸ್​ ಒಳೇಟು, ಕಾಂಗ್ರೆಸ್‌ನ ಎರಡೂ ಬಣಗಳ ಮುಖಂಡರನ್ನು ಒಟ್ಟುಗೂಡಿಸುವಲ್ಲಿ ಕಾಂಗ್ರೆಸ್​ ಹೈ ಕಮಾಂಡ್ ವಿಫಲವಾಗಿದ್ದು ಹಿನ್ನೆಡೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.