AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರಗೆ ಶಾಲು ಹೊದಿಸಿ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸಿದ ಸಂಸದ ತೇಜಸ್ವೀ ಸೂರ್ಯ

ವಿಜಯೇಂದ್ರಗೆ ಶಾಲು ಹೊದಿಸಿ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸಿದ ಸಂಸದ ತೇಜಸ್ವೀ ಸೂರ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2024 | 6:21 PM

Share

ನಂತರ ತೇಜಸ್ವೀ ಸೂರ್ಯ ನಾಳೆ ದೆಹಲಿಗೆ ಹೋಗುತ್ತಿರುವ ವಿಷಯ ವಿಜಯೇಂದ್ರಗೆ ಹೇಳಿದರು. ಪ್ರೀತಂ ಗೌಡ ಎರಡು-ಮೂರು ದಿನಗಳಿಂದ ಬೆಂಗಳೂರಲ್ಲಿದ್ದಾರೆ ಮತ್ತು ಬಹಳ ಸಂತಸದಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ 17 ಸ್ಥಾನ ಸಿಕ್ಕಿದ್ದು ಅವರನ್ನು ಹೆಚ್ಚು ಸಂತೋಷವಾಗಿಸಿದೆಯೋ ಆಥವಾ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋತಿದ್ದೋ ಅಂತ ಅವರೇ ಹೇಳಬೇಕು!

ರಾಮನಗರ: ರಾಜ್ಯ ಬಿಜೆಪಿ ನಾಯಕರು ಖುಷಿಯಿಂದ ಬೀಗುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿರಿಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ ಮತ್ತು ಅವರೊಂದಿಗೆ ಬಹಳ ಆತ್ಮೀಯವಾಗಿ ವ್ಯವಹರಿಸುತ್ತಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸತತ ಎರಡನೇ ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ತೇಜಸ್ವೀ ಸೂರ್ಯ (Tejasvi Surya) ಇಂದು ರಾಮನಗರದಲ್ಲಿ ವಿಜಯೇಂದ್ರರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಪಕ್ಷದ ಯುವ ಸಂಸದರಲ್ಲಿ ಒಬ್ಬರಾಗಿರುವ ತೇಜಸ್ವಿ ತೆರೆದ ಸ್ಥಳದಲ್ಲಿ ರಾಜ್ಯಾಧ್ಯಕ್ಷನಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದರು. ತಮ್ಮೊಂದಿಗೆ ಸಿಹಿತಿಂಡಿಯ ಪೊಟ್ಟಣ ಹಿಡಿದುಕೊಂಡಿದ್ದ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ (Preetah Gowda), ಅಣ್ಣಾ, ತೇಜಸ್ವೀಯವರ ಬಾಯಿ ಸಿಹಿ ಮಾಡಿ ಅಂತ ತೆರೆದ ಪೊಟ್ಟಣವನ್ನು ವಿಜಯೇಂದ್ರಗೆ ನೀಡಿದಾಗ ಅವರು ಲಡ್ಡುವನ್ನು ಸ್ವಲ್ಪಮಾತ್ರ ತುಂಡರಿಸಿ ಸಂಸದನ ಬಾಯಿಗೆ ಹಾಕಿದರು. ನಂತರ ತೇಜಸ್ವೀ ಸೂರ್ಯ ನಾಳೆ ದೆಹಲಿಗೆ ಹೋಗುತ್ತಿರುವ ವಿಷಯ ವಿಜಯೇಂದ್ರಗೆ ಹೇಳಿದರು. ಪ್ರೀತಂ ಗೌಡ ಎರಡು-ಮೂರು ದಿನಗಳಿಂದ ಬೆಂಗಳೂರಲ್ಲಿದ್ದಾರೆ ಮತ್ತು ಬಹಳ ಸಂತಸದಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ 17 ಸ್ಥಾನ ಸಿಕ್ಕಿದ್ದು ಅವರನ್ನು ಹೆಚ್ಚು ಸಂತೋಷವಾಗಿಸಿದೆಯೋ ಆಥವಾ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋತಿದ್ದೋ ಅಂತ ಅವರೇ ಹೇಳಬೇಕು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯ ಯಾವುದೇ ಹೆಸರಿನಿಂದ ಸಂಬೋಧಿಸಿದರೂ ಅದನ್ನು ಆಶೀರ್ವಾದವಾಗಿ ಸ್ವೀಕರಿಸುವೆ: ತೇಜಸ್ವೀ ಸೂರ್ಯ, ಸಂಸದ