Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ವೇಗಕ್ಕೆ ಬ್ರೇಕ್ ಹಾಕಿದ ‘ಇಂಡಿಯಾ’ ಮೈತ್ರಿಕೂಟ ಮುನ್ನಡೆಗೆ ಕಾರಣಗಳಿವು

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ, ಬಿಜೆಪಿ ಪ್ರಾಬಲ್ಯ ಇರುವ ರಾಜ್ಯಗಳಲ್ಲೇ ಇಂಡಿಯಾ ಮೈತ್ರಿಕೂಟಕ್ಕೆ ಅಭೂತಪೂರ್ವ ಮುನ್ನಡೆ ಸಿಕ್ಕಿದೆ. ಹಾಗಾದರೆ ಇಂಡಿಯಾ ಕೂಟದ ಈ ಮುನ್ನಡೆಗೆ ಕಾರಣಗಳೇನು? ಬಿಜೆಪಿಯ ನಾಗಾಲೋಟಕ್ಕೆ ‘ಇಂಡಿಯಾ’ ಬ್ರೇಕ್ ಹಾಕಿದ್ದೇಗೆ? ಇಲ್ಲಿದೆ ವಿವರ.

ಬಿಜೆಪಿ ವೇಗಕ್ಕೆ ಬ್ರೇಕ್ ಹಾಕಿದ ‘ಇಂಡಿಯಾ’ ಮೈತ್ರಿಕೂಟ ಮುನ್ನಡೆಗೆ ಕಾರಣಗಳಿವು
‘ಇಂಡಿಯಾ’ ಮೈತ್ರಿಕೂಟ ನಾಯಕರು
Follow us
Ganapathi Sharma
|

Updated on:Jun 05, 2024 | 9:13 AM

ಬೆಂಗಳೂರು, ಜೂನ್ 5: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ 18ನೇ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ (Lok Sabha Election Result) ಅಂತಿಮವಾಗಿ ಬಿಜೆಪಿ (BJP) ‘ಚಾರ್ ಸೋ ಪಾರ್’ ಓಟಕ್ಕೆ ಬ್ರೇಕ್ ಹಾಕುವಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ (INDI Alliance) ಯಶಸ್ವಿಯಾಗಿದೆ. ‘ಇಂಡಿಯಾ’ ಕೂಟ 233 ಸ್ಥಾನಗಳಲ್ಲಿ ವಿಜಯಪತಾಕೆ ಹಾರಿಸಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷವೂ 100 ಸ್ಥಾನಗಳಲ್ಲಿ ಗೆದ್ದಿದ್ದು, ಕೈ ನಾಯಕರು ಉತ್ಸಾಹದಿಂದ ಬೀಗುವಂತೆ ಮಾಡಿದೆ.

‘ಇಂಡಿಯಾ’ ಮೈತ್ರಿಕೂಟ ಮುನ್ನಡೆಗೆ ಕಾರಣವೇನು?

ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಪ್ರಾಬಲ್ಯ ಇರುವ ರಾಜ್ಯಗಳಲ್ಲೇ ಅಭೂತಪೂರ್ವ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಗಳ ಯಶಸ್ಸು ಇಂಡಿಯಾ ಕೂಟದ ಮುನ್ನಡೆಗೆ ಪ್ರಮುಖ ಅಂಶವಾಗಿದೆ. ಜೊತೆಗೆ ಉತ್ತರಪ್ರದೇಶದಲ್ಲಿ ಯಾದವ, ಮುಸ್ಲಿಮರ ಮತಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಎಸ್​​ಪಿ ಮುಖಂಡ ಅಖಿಲೇಶ್, 4 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಿದ್ದರು. ಜೊತೆಗೆ ಬಿಎಸ್​​ಪಿ ಪಾಲಾಗುತ್ತಿದ್ದ ಮತಗಳು ಈ ಬಾರಿ ಎಸ್​​ಪಿ, ಕಾಂಗ್ರೆಸ್​​​ಗೆ ದೊರೆತಿವೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರ ಸಂವಿಧಾನ ಬದಲಾವಣೆ ಹೇಳಿಕೆಗಳು ಇಂಡಿಯಾ ಮಿತ್ರಕೂಟಕ್ಕೆ ಪ್ಲಸ್ ಆಗಿದೆ. ಪಂಜಾಬ್, ಉತ್ತರ ಪ್ರದೇಶದಲ್ಲಿ ರೈತರ ಹೋರಾಟಗಳು ಕೂಡ ಇಂಡಿಯಾ ಮುನ್ನಡೆಗೆ ಕಾರಣವಾಗಿವೆ. ಇದರ ಜೊತೆಗೆ ದೇಶಾದ್ಯಂತ ‘ಗ್ಯಾರಂಟಿ’ ಘೋಷಣೆಗಳು ಕೂಡ ಇಂಡಿಯಾ ಬಣಕ್ಕೆ ಅಲ್ಪ ಮಟ್ಟಿನ ನೆರವಾಗಿದೆ.

ಅಖಿಲೇಶ್ ಯಾದವ್, ರಾಹುಲ್, ಪ್ರಿಯಾಂಕಾ ಜೋಡಿ ಪ್ರಚಾರವೂ ಕೂಡ ಇಂಡಿಯಾ ಕೂಟಕ್ಕೆ ಮುನ್ನಡೆ ತಂದಿದೆ. ಶಿವಸೇನೆ, ಎನ್​ಸಿಪಿ ಇಬ್ಭಾಗದಿಂದ ಉದ್ಧವ್ ಠಾಕ್ರೆ, ಶರದ್ ಪವಾರ್ ಜನರ ಅನುಕಂಪ ಗಿಟ್ಟಿಸಿದ್ದರು. ಜೊತೆಗೆ ತಮಿಳುನಾಡಲ್ಲಿ ಕಾಂಗ್ರೆಸ್, ಡಿಎಂಕೆ ಜಂಟಿಯಾಗಿ ಹೋರಾಡಿದ್ದು ಕೂಡ ಇಂಡಿಯಾ ಕೂಟಕ್ಕೆ ಶಕ್ತಿ ನೀಡಿದೆ.

ಆಡಳಿತ ವಿರೋಧಿ ಅಲೆ ಜೊತೆಗೆ ಮೈತ್ರಿಕೂಟದ ಪಕ್ಷಗಳು ಗೊಂದಲವಿಲ್ಲದೆ ಸಾಥ್ ನೀಡಿದ್ರಿಂದ ‘ಇಂಡಿಯಾ’ ಮುನ್ನಡೆ ಸಾಧಿಸಿದೆ. ಜೊತೆಗೆ ಚುನಾವಣಾ ಱಲಿಯಲ್ಲಿ ಮೋದಿ ವಿಫಲತೆ ಬಗ್ಗೆ ಮನವರಿಕೆ ಮಾಡಿದ್ದು, ನಿರುದ್ಯೋಗ, ಆರ್ಥಿಕ ಆತಂಕ, ರೈತರ ಸಂಕಷ್ಟ ಬಗ್ಗೆ ಪ್ರಸ್ತಾಪಿಸಿದ್ದು, ರಾಯ್​​​ಬರೇಲಿಯಲಿ ರಾಹುಲ್ ಸ್ಪರ್ಧೆ ಚಿತ್ರಣವನ್ನೆ ಬದಲಿಸಿತು. ಇದು ಕೂಡ ಇಂಡಿಯಾ ಮೈತ್ರಿಕೂಟಕ್ಕೆ ಮುನ್ನಡೆ ತಂದುಕೊಟ್ಟಿದೆ.

ಲೋಕಸಭೆ ಚುನಾವಣಾ ಫಲಿತಾಂಶ ಹೊರರಬರ್ತಿದ್ದಂತೆ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದು, ದೇಶದ ಜನ ಮೋದಿ ಜೀ ಅವರನ್ನ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದಿಂದ ಸರ್ಕಾರ ರಚನೆಗೆ ಪ್ಲ್ಯಾನ್‌

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಒಕ್ಕೂಟ ಹೀನಾಯವಾಗಿ ಸೋಲುಂಡಿತ್ತು. ಈ ಬಾರಿ ಕೆಲವು ಮಾರ್ಪಾಡಿನೊಂದಿಗೆ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡು ಅಖಾಡಕ್ಕಿಳಿದ್ದಿತ್ತು. ಮತಗಟ್ಟೆ ಸಮೀಕ್ಷೆಗಳು ‘ಇಂಡಿಯಾ’ ಮತ್ತೆ ಕಡಿಮೆ ಸ್ಥಾನಗಳಿಗೆ ಸೀಮಿತಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ನಿನ್ನೆಯ ಫಲಿತಾಂಶ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಇಂಡಿಯಾ ಒಕ್ಕೂಟವೂ 234 ಸ್ಥಾನಗಳನ್ನು ಗೆಲ್ಲುವ ಮೂಲಕ ತಾನೂ ಸರ್ಕಾರ ರಚಿಸುವ ರೇಸ್​​​ನಲ್ಲಿರುವ ಸಂದೇಶ ರವಾನಿಸಿದೆ. ಆದರೆ, ‘ಇಂಡಿಯಾ’ ಕೂಟಕ್ಕೆ ಸರ್ಕಾರ ರಚನೆ ಅಷ್ಟು ಸುಲಭವಂತೂ ಅಲ್ಲ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪಕ್ಷಾಂತರಿ ನಾಯಕರಿಂದ ಬಿಜೆಪಿಗೆ ನಷ್ಟವೇ ಹೆಚ್ಚು! ಎಡವಿದ್ದು ಎಲ್ಲೆಲ್ಲಿ? ಇಲ್ಲಿದೆ ನೋಡಿ

ಒಟ್ಟು 543 ಲೋಕಸಭೆ ಸ್ಥಾನಗಳಿದ್ದು, ಸರಳ ಬಹುಮತಕ್ಕೆ 272 ಸ್ಥಾನ ಅಗತ್ಯವಿದೆ. ಸದ್ಯ ಇಂಡಿಯಾ ಮೈತ್ರಿಕೂಟದ ಬಳಿ 234 ಸ್ಥಾನಗಳಿವೆ. ಸರ್ಕಾರ ರಚಿಸಲು ಇನ್ನೂ 38 ಸ್ಥಾನಗಳ ಅವಶ್ಯಕತೆ ಇದೆ. ಇದಕ್ಕಾಗಿ ಸದ್ಯ ಎನ್​ಡಿಎ ಮೈತ್ರಿಕೂಟದಲ್ಲಿರುವ ಜೆಡಿಯು ಹಾಗೂ ಟಿಡಿಪಿ ಸಂಪರ್ಕಿಸಲು ಮುಂದಾಗಿದೆ. ಆದರೆ, ತಮ್ಮ ಬೆಂಬಲ ಎನ್​ಡಿಎಗೆ ಎಂದು ಜೆಡಿಎಯು ಈಗಾಗಲೇ ಮಂಗಳವಾರವೇ ಸ್ಪಷ್ಟಪಡಿಸಿದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:55 am, Wed, 5 June 24

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ