Suresh Gopi: ಕೇರಳದಲ್ಲಿ ಅರಳಿದ ಕಮಲ; ಸುರೇಶ್ ಗೋಪಿ ಎಂಬ ನಾಯಕ-ನಟನ ಪರಿಶ್ರಮಕ್ಕೆ ಸಂದ ಗೆಲುವು ಇದು

ಮಲಯಾಳಂ ಸಿನಿಮಾರಂಗದಲ್ಲಿ ಸುರೇಶ್ ಗೋಪಿಯವರ  ಸುದೀರ್ಘ ಇನ್ನಿಂಗ್ಸ್ , ಅವರ ಸ್ಟಾರ್ ವಾಲ್ಯೂ, ಮಹಿಳಾ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರ ಬೆಂಬಲವೇ ಈ ಗೆಲುವಿಗೆ ಕಾರಣ. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅವರ ಬಾಂಧವ್ಯ ಮತ್ತು ಕಳೆದ ಐದು ವರ್ಷಗಳಲ್ಲಿ ಪಕ್ಷದ ಸಂಘಟಿತ ಕೆಲಸವೂ ಇಲ್ಲಿ ಪ್ರಧಾನ ಪಾತ್ರ ವಹಿಸಿದೆ.

Suresh Gopi: ಕೇರಳದಲ್ಲಿ ಅರಳಿದ ಕಮಲ; ಸುರೇಶ್ ಗೋಪಿ ಎಂಬ ನಾಯಕ-ನಟನ ಪರಿಶ್ರಮಕ್ಕೆ ಸಂದ ಗೆಲುವು ಇದು
ಸುರೇಶ್ ಗೋಪಿ
Follow us
|

Updated on: Jun 05, 2024 | 5:13 PM

ಬೆಂಗಳೂರು ಜೂನ್ 05: ಮಲಯಾಳಂ ನಟ, ರಾಜಕಾರಣಿ ಸುರೇಶ್ ಗೋಪಿ (Suresh Gopi) ಮೂಲಕ ಕೇರಳದಲ್ಲಿ (Kerala)  ಭಾರತೀಯ ಜನತಾ ಪಕ್ಷ (BJP) ಖಾತೆ ತೆರೆದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಿಂದ (Thrissur parliamentary seat) ಸ್ಪರ್ಧಿಸಿದ ಸುರೇಶ್ ಗೋಪಿ, ಇಲ್ಲಿ 4,12,338 ಮತಗಳನ್ನು ಪಡೆದಿದ್ದು, ಸಿಪಿಐ(ಎಂ) ವಿಎಸ್ ಸುನೀಲ್ ಕುಮಾರ್ (3,37,652 ಮತಗಳು) ಅವರನ್ನು 74,686 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಭಾರತ ಚುನಾವಣಾ ಆಯೋಗ (ECI) ಅಂಕಿಅಂಶಗಳು ತೋರಿಸಿವೆ.

ಸುರೇಶ್ ಗೋಪಿ ಬಿಜೆಪಿಯ ಸ್ಟಾರ್ ಅಭ್ಯರ್ಥಿ. ನಾನು ತ್ರಿಶ್ಳೂರ್ ನಲ್ಲಿ ಗೆದ್ದೇ ಗೆಲ್ಲುತ್ತೇನೆ , ನೀವು ಈ ಬಾರಿ ನನ್ನನ್ನು ಗೆಲ್ಲಿಸಬೇಕು ಎಂದು ವಿನೀತವಾಗಿ ಮತದಾರರಲ್ಲಿ ಮತಯಾಚನೆ ಮಾಡುತ್ತಿದ್ದರು. ಸುರೇಶ್ ಗೋಪಿ ಬಗ್ಗೆ ತ್ರಿಶ್ಶೂರಿನ ಜನರಿಗೆ ಹೆಚ್ಚಿನ ಒಲವು ಇತ್ತು ಎಂದೇ ಹೇಳಬಹುದು. ಬಿಜೆಪಿ ಅಭ್ಯರ್ಥಿ ಪ್ರಬಲವಾಗಿದ್ದಾರೆ ಎಂದು ಅರಿತ ಕಾಂಗ್ರೆಸ್, ತಮ್ಮ ಅಭ್ಯರ್ಥಿಯಾಗಿ ಕೇರಳದ ಮಾಜಿ ಮುಖ್ಯಮಂತ್ರಿ, ದಿವಂಗತ ಕೆ.ಕರುಣಾಕರನ್ ಅವರ ಪುತ್ರ ಕೆ. ಮುರಳೀಧರನ್ ಅವರನ್ನು ತ್ರಿಶ್ಶೂರಿನಲ್ಲಿ ಕಣಕ್ಕಿಳಿಸಿತ್ತು. ಕಳೆದ ಚುನಾವಣೆಯಲ್ಲಿ ವಡಗರದಲ್ಲಿ ಗೆದ್ದದ್ದ ಮುರಳೀಧರನ್ ಅವರನ್ನು ತ್ರಿಶ್ಶೂರಿಗೆ ತಂದು ಸ್ಪರ್ಧಿಸಿದ್ದರೂ ಇಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಸಫಲವಾಗಲಿಲ್ಲ. 2024ರ ಈ ಲೋಕಸಭಾ ಚುನಾವಣೆಯಲ್ಲಿ ಮುರಳೀಧರನ್ 3,28,124 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 37.8% ಮತಗಳನ್ನು ಪಡೆದರೆ, ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಕ್ರಮವಾಗಿ 30.95% ಮತ್ತು 30.08% ಮತಗಳನ್ನು ಪಡೆದಿವೆ.

ಮಲಯಾಳಂ ಸಿನಿಮಾರಂಗದಲ್ಲಿ ಸುರೇಶ್ ಗೋಪಿಯವರ  ಸುದೀರ್ಘ ಇನ್ನಿಂಗ್ಸ್ , ಅವರ ಸ್ಟಾರ್ ವಾಲ್ಯೂ, ಮಹಿಳಾ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರ ಬೆಂಬಲವೇ ಈ ಗೆಲುವಿಗೆ ಕಾರಣ. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅವರ ಬಾಂಧವ್ಯ ಮತ್ತು ಕಳೆದ ಐದು ವರ್ಷಗಳಲ್ಲಿ ಪಕ್ಷದ ಸಂಘಟಿತ ಕೆಲಸವೂ ಇಲ್ಲಿ ಪ್ರಧಾನ ಪಾತ್ರ ವಹಿಸಿದೆ. ಇತ್ತೀಚೆಗೆ ಸುರೇಶ್ ಗೋಪಿಯವರ ಮಗಳ ಮದುವೆಯಲ್ಲಿ ಭಾಗಿಯಾಗಲು ಪ್ರಧಾನಿಯೇ ತ್ರಿಶ್ಶೂರ್​​ಗೆ ಬಂದಿದ್ದರು. ಸುರೇಶ್ ಗೋಪಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ, ಅದರಲ್ಲಿ ಹೆಚ್ಚಿನವರು ಮಹಿಳೆಯರು. ಮಲಯಾಳಂ ಸಿನಿಮಾಗಳಲ್ಲಿ ನ್ಯಾಯಕ್ಕಾಗಿ ಹೋರಾಡುವ ದಿಟ್ಟ ಪೊಲೀಸ್ ಅಧಿಕಾರಿ, ಡ್ಯಾನ್ಸ್ ಮಾಡಲು ಬಾರದೇ ಇದ್ದರೂ ಫೈಟ್ ಮತ್ತು ನಿರರ್ಗಳವಾಗಿ ಪಂಚಿಂಗ್ ಡೈಲಾಗ್ ಹೊಡೆಯುವ ಪಾತ್ರಗಳಲ್ಲಿ ಮಲಯಾಳಿಗಳನ್ನು ರಂಜಿಸಿದ ವ್ಯಕ್ತಿ ಈ ಸುರೇಶ್ ಗೋಪಿ. ಕೇರಳದಲ್ಲಿ ಇವರು ಚಿರಪರಿಚತ ಮುಖ ಆಗಿರುವುದೂ ಅವರಿಗೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಯಿತು.

250 ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಸುರೇಶ್  ಗೋಪಿ ಅವರು 2019 ರ ಚುನಾವಣೆಯಲ್ಲಿ ತ್ರಿಶ್ಶೂರಿನಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅವರು ಮೂರನೇ ಸ್ಥಾನ ಪಡೆದರೂ ಬಿಜೆಪಿಯ ಮತ-ಪಾಲನ್ನು 11% ರಿಂದ 28% ಕ್ಕೆ ಏರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.  ಎರಡು ವರ್ಷಗಳ ನಂತರ, ಅವರು ತ್ರಿಶ್ಳೂರ್‌ನಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಮೂರನೇ ಸ್ಥಾನಕ್ಕೇ ತೃಪ್ತಿ ಪಡಬೇಕಾಯಿತು. ಆದರೆ ಎಲ್‌ಡಿಎಫ್ ಮತ್ತು ಯುಡಿಎಫ್ ಪ್ರತಿಸ್ಪರ್ಧಿಗಳಿಗೆ ಇವರು ತೀವ್ರ ಪೈಪೋಟಿ ನೀಡಿದ್ದರು. ಪ್ರಧಾನಿ ಮೋದಿಯವರ ಒತ್ತಾಯದ ಮೇರೆಗೆ 2016 ರಲ್ಲಿ ಬಿಜೆಪಿ ಸೇರಿದ ಸುರೇಶ್ ಗೋಪಿ, ತ್ರಿಶ್ಶೂರಿನಲ್ಲಿ ಮತ್ತೆ ಮತ್ತೆ ಸೋತಿದ್ದರೂ ಆ ಕ್ಷೇತ್ರವನ್ನು ಬಿಟ್ಟು ಹೋಗಲಿಲ್ಲ.

ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಗೆದ್ದವರಿವರು; ಪ್ರಮಾಣ ವಚನ ಸ್ವೀಕಾರದಲ್ಲಿ ಇವರು ಭಾಗವಹಿಸಬಹುದೇ?

ಸುರೇಶ್ ಗೋಪಿಯವರ ಈ ಗೆಲುವಿನಿಂದ ಕಲಿಯಬೇಕಾದುದು ಏನು?

ಪರಿಶ್ರಮವೇ ಗೆಲುವಿಗೆ ದಾರಿ

ಮೇಲೆ ಉಲ್ಲೇಖಿಸಿದಂತೆ ಸುರೇಶ್ ಗೋಪಿ ಯಾವತ್ತೂ ತ್ರಿಶ್ಶೂರಿನಿಂದ ದೂರ ಸರಿದಿಲ್ಲ. ಅವರು ಅಲ್ಲಿನ ಜನರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡರು. ಅಲ್ಲಿನ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸಿದರು. ಮದುವೆಗಳಿಗೂ ಹೋದರು, ದೇವಸ್ಥಾನ, ಇಗರ್ಜಿ, ಮಸೀದಿ ಯಾವುದೇ ಭೇದವಿಲ್ಲದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರೊಂದಾಗಿ ಬಿಟ್ಟರು. ಆ ಕ್ಷೇತ್ರದ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಅರಿವು ಜನರನ್ನು ಅವರತ್ತ ಆಕರ್ಷಿಸುವಂತೆ ಮಾಡಿತು

ಭರವಸೆಗಳನ್ನು ಪೂರೈಸುವುದು

ಇತರ ರಾಜಕಾರಣಿಗಳಂತೆ, ಸುರೇಶ್ ಗೋಪಿ ಕೂಡ ತಮ್ಮ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಸಮಸ್ಯೆ ಗಳನ್ನು ಪರಿಹರಿಸಲು ನಿರ್ಧರಿಸಿದರು. ಇಲ್ಲಿ ಅವರು ಪಕ್ಷವೇ ಎಲ್ಲ ಕೆಲಸ ಮಾಡಲಿ ಎಂದು ಕಾಯದೇ , ವೈಯಕ್ತಿಕವಾಗಿಯೂ ತಾವು ನೀಡಿದ ಭರವಸೆಗಳನ್ನು ಪೂರೈಸಲು ಪ್ರಯತ್ನಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರವೂ ತಮ್ಮ ಕ್ಷೇತ್ರದ ಸಕ್ತನ್ ಮಾರ್ಕೆಟ್ ನವೀಕರಣಕ್ಕೆ ಹಣ ನೀಡುವುದಾಗಿ ಹೇಳಿದ್ದು, ಈ ಭರವಸೆಯನ್ನು ಅವರು ಪೂರೈಸಿದ್ದೇ ಇದಕ್ಕೆ ದೊಡ್ಡ  ಉದಾಹರಣೆ.

ವಿವಾದಗಳಿಂದ ದೂರ

ಸುರೇಶ್ ಗೋಪಿ ಅವರು ಭಾಷಣದ ವೇಳೆ ಆಡಿದ ಮಾತುಗಳನ್ನು ಟ್ರೋಲ್ ಮಾಡಲಾಗಿತ್ತು. ಸಿನಿಮಾದಲ್ಲಿ ಗಂಭೀರ ಪಾತ್ರಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಬಿಜೆಪಿ ಸೇರಿದ ನಂತರ ಹುಚ್ಚುಚ್ಚಾಗಿ ಮಾತನಾಡುತ್ತಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ನಗೆಯಾಡಿದ್ದರು. ಅದೇ ಹೊತ್ತಲ್ಲಿ ಸುರೇಶ್ ಗೋಪಿ ಎಡವಟ್ಟು ಆಗದಂತೆ ತಮ್ಮ ಮಾತುಗಳನ್ನು ಹಿಡಿತದಲ್ಲಿಟ್ಟುಕೊಂಡರು.  ಅವರ ಹೆಚ್ಚುತ್ತಿರುವ ಜನಪ್ರಿಯತೆ ಅವರ ರಾಜಕೀಯ ಪ್ರತಿಸ್ಪರ್ಧಿಗಳನ್ನು ಚಿಂತೆಗೀಡುಮಾಡಿತು. ತಾನು ವೈಯಕ್ತಿಕವಾಗಿ ಚರ್ಚ್‌ಗೆ ನೀಡಿದ ಚಿನ್ನದ ಕಿರೀಟದಲ್ಲಿ ಚಿನ್ನವಿಲ್ಲ ಎಂದು ಹೇಳಿ ಸುರೇಶ್ ಗೋಪಿಯೇ ವಿವಾದಗಳಿಂದ ಅಂತರ ಕಾಪಾಡಿಕೊಂಡರು. ವಿವಾದಗಳಿಂದಾಗಿ ಪ್ರತಿಸ್ಪರ್ಧಿಗಳು ಗೋಲು ಹೊಡೆಯುತ್ತಾರೆ ಎಂದು ಅರಿತ ಸುರೇಶ್ ಗೋಪಿ, ಇಂಥಾ ಟೀಕೆ, ವಿವಾದಗಳಿಂದ ದೂರವಿದ್ದರು.

ಮತದಾರರ ಬಳಿಗೆ ಹೋಗುವುದನ್ನು ಮರೆತಿಲ್ಲ

ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ನಡುವಿನ ಸಾಂಪ್ರದಾಯಿಕ ರಾಜಕೀಯ ಘರ್ಷಣೆಗಳಿಂದ ಭ್ರಮನಿರಸನಗೊಂಡವರಿಗೆ ಸುರೇಶ್ ಗೋಪಿ ‘ಪರಿಹಾರ’ ಎಂಬಂತೆ ಕಂಡಿತು. ಕೇರಳದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿಯೇ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಅವರನ್ನು ಇಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಎಲ್​​​ಡಿಎಫ್  ಬೊಬ್ಬಿರಿದಾಗಲೂ ಸುರೇಶ್ ಗೋಪಿ ಹಿಂದೆ ಸರಿದಿಲ್ಲ. ಅವರು ತಮ್ಮ ಕ್ಷೇತ್ರದಲ್ಲಿನ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಮತದಾರರೊಂದಿಗೆ ಉತ್ತಮ ಸಂವಹನ ನಡೆಸಿ ಆ ಪ್ರೀತಿ, ಕಾಳಜಿಯನ್ನು ಮತವಾಗಿ ಪರಿವರ್ತಿಸಲು ಶ್ರಮ ವಹಿಸಿದರು.

ನನಗೆ ಮತ ನೀಡಿದ ಜನರಿಗೆ ಋಣಿಯಾಗಿದ್ದೇನೆ: ಸುರೇಶ್ ಗೋಪಿ

“ಈ ಜಾತ್ಯತೀತ ಮತದಾರರು ಜಾತಿ ಅಥವಾ ರಾಜಕೀಯ ಸಂಬಂಧದದಿಂದ ನನಗೆ ಮತ ಹಾಕಿಲ್ಲ . ಜಾತ್ಯತೀತ ಮತದಾರರನ್ನು ದಾರಿತಪ್ಪಿಸಲು ಹಲವಾರು ವರ್ಗದ ಜನರು ಅನೇಕ ಪ್ರಯತ್ನಗಳನ್ನು ಮಾಡಿದರು. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಲು ಅವರು ನನ್ನ ಆತ್ಮವನ್ನು ಸಹ ಘಾಸಿಗೊಳಿಸಿದ್ದಾರೆ. ಅವರಿಗೆ ಉತ್ತರವಾಗಿ ದೇವರು ನನಗೆ ಈ ಗೆಲುವನ್ನು ದಯಪಾಲಿಸಿದ್ದಾನೆ ಎಂದು ಚುನಾವಣೆಯಲ್ಲಿ ಗೆದ್ದ ಬಳಿಕ ಮಾತನಾಡಿದ ಸುರೇಶ್ ಗೋಪಿ ಹೇಳಿದ್ದಾರೆ.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ