ತ್ರಿಶ್ಶೂರಿನಲ್ಲಿ ಸುರೇಶ್ ಗೋಪಿಗೆ ಗೆಲುವು; ಕೇರಳದಲ್ಲಿ ಮೊದಲ ಬಾರಿ ಖಾತೆ ತೆರೆದ ಬಿಜೆಪಿ

ತ್ರಿಶ್ಶೂರ್‌ಗೆ ಕೇಂದ್ರ ಸಚಿವ ಸ್ಥಾನ, ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ 65 ವರ್ಷದ ನಟ, ಸುರೇಶ್ ಗೋಪಿ ತ್ರಿಶ್ಶೂರ್​​ನಲ್ಲಿ ಮತಯಾಚನೆ ಮಾಡಿದ್ದರು.2016ರಲ್ಲಿ ಬಿಜೆಪಿಯು ಸುರೇಶ್ ಗೋಪಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತ್ತು. ಇಲ್ಲಿವರೆಗೆ ಬಿಜೆಪಿಗೆ ಕೇರಳದಲ್ಲಿ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸುರೇಶ್ ಗೋಪಿ ಇಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ.

ತ್ರಿಶ್ಶೂರಿನಲ್ಲಿ ಸುರೇಶ್ ಗೋಪಿಗೆ ಗೆಲುವು; ಕೇರಳದಲ್ಲಿ ಮೊದಲ ಬಾರಿ ಖಾತೆ ತೆರೆದ ಬಿಜೆಪಿ
ಸುರೇಶ್ ಗೋಪಿ
Follow us
|

Updated on:Jun 04, 2024 | 5:46 PM

ತಿರುವನಂತಪುರಂ ಜೂನ್ 04: ಕೇರಳದಲ್ಲಿ (Kerala) ಈ ಬಾರಿ ಖಾತೆ ತೆರೆಯುತ್ತೇವೆ ಎಂದು ಬಿಜೆಪಿ (BJP) ಭಾರೀ ಆತ್ಮವಿಶ್ವಾಸದಿಂದ ಹೇಳಿಕೊಂಡಿತ್ತು. ಬಹುತೇಕ ಎಕ್ಸಿಟ್ ಪೋಲ್​​ಗಳು ಕೇರಳದಲ್ಲಿ ಬಿಜೆಪಿಗೆ 1-2 ಸ್ಥಾನ ಸಿಗಬಹುದು ಎಂದು ಭವಿಷ್ಯ ನುಡಿದಿದ್ದವು. ಇದೀಗ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ  74686 ಮತಗಳ ಅಂತರದಿಂದ  ಭರ್ಜರಿ ಗೆಲುವು ಸಾಧಿಸಿದ್ದಾರೆ . ತ್ರಿಶ್ಶೂರಿನಲ್ಲಿ ಪ್ರಚಾರ ನಡೆಸುವಾಗ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ (Suresh Gopi), ಈ ತ್ರಿಶ್ಶೂರ್ ಞಾನ್ ಇಂಙ್ ಎಡುಕ್ಕುವಾ, ಈ ತ್ರಿಶ್ಶೂರ್ ಎನಿಕ್ ತರಣಂ ( ನಾನು ಈ ತ್ರಿಶ್ಶೂರ್​​ನ್ನು ತೆಗೆದುಕೊಳ್ಳುತ್ತೇನೆ, ನೀವು ನನಗೆ ಈ ತ್ರಿಶ್ಶೂರ್ ಕೊಡಬೇಕು) ಎಂದು ಹೇಳಿದ್ದರು. ಸಿನಿಮಾ ನಟರೂ ಆಗಿರುವ ಸುರೇಶ್ ಗೋಪಿ, ಸಿನಿಮಾ ಸ್ಟೈಲ್ ನಲ್ಲಿ ಈ ಡೈಲಾಗ್ ಹೇಳಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ ಈ ಬಾರಿ ಸುರೇಶ್ ಗೋಪಿ ಪರ ಬಿಜೆಪಿ ಭರ್ಜರಿ ಪ್ರಚಾರ ಮಾಡಿದ್ದರ ಫಲ ಇಲ್ಲಿ ಕಾಣಿಸತೊಡಗಿದೆ.

ತ್ರಿಶ್ಶೂರ್‌ಗೆ ಕೇಂದ್ರ ಸಚಿವ ಸ್ಥಾನ, ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ 65 ವರ್ಷದ ನಟ ತ್ರಿಶೂರ್‌ನಲ್ಲಿ ಮತಯಾಚನೆ ಮಾಡಿದ್ದರು. 2016ರಲ್ಲಿ ಬಿಜೆಪಿಯು ಸುರೇಶ್ ಗೋಪಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತ್ತು. ಆರ್‌ಎಸ್‌ಎಸ್ ಸದಸ್ಯರಾಗಿ ನಾಮನಿರ್ದೇಶನಗೊಂಡ ತಿಂಗಳ ನಂತರ 2016 ರ ಅಕ್ಟೋಬರ್‌ನಲ್ಲಿ ಸುರೇಶ್ ಗೋಪಿ ಬಿಜೆಪಿ ಸೇರಿದ್ದರು. ಅಂದಿನಿಂದ  ಸುರೇಶ್ ಗೋಪಿ ಕೇರಳದ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ತ್ರಿಶ್ಶೂರ್​​ನಿಂದ ಸ್ಪರ್ಧಿಸಿದ್ದರೂ ಗೆಲ್ಲಲಿಲ್ಲ.

ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಡುವಿನ ರಾಜಕಾರಣದಲ್ಲಿ ಬಿಜೆಪಿ ಅದೃಷ್ಟ ಪರೀಕ್ಷೆ ಮಾಡಬೇಕಿದ್ದ ಕೇರಳದ ಕೆಲವೇ ಸೀಟುಗಳಲ್ಲಿ ತ್ರಿಶ್ಶೂರ್ ಕೂಡ ಒಂದು. 2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಯು ಸುರೇಶ್ ಗೋಪಿ ಕಣಕ್ಕಿಳಿಸಿ 28.2% ಮತಗಳನ್ನು ಗಳಿಸಿತು. 2014 ರಲ್ಲಿ ಪಕ್ಷದ ಹಿರಿಯ ನಾಯಕ ಕೆ ಪಿ ಶ್ರೀಶನ್ ಅವರ 11.15% ಮತಗಳಿಸಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ತ್ರಿಶ್ಶೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು ಮೂರನೇ ಸ್ಥಾನ ಪಡೆದಿದ್ದರು. ಆ ಬಾರಿ ಅವರು 31.3% ಮತಗಳನ್ನು ಪಡೆದಿದ್ದು, ಇದು 2016 ರಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮತಗಳಿಂದ ಹೆಚ್ಚಾಗಿತ್ತು.

ತ್ರಿಶ್ಶೂರ್​​ನಲ್ಲಿ ಕ್ರಿಶ್ಚಿಯನ್ ಮತಗಳ ಬೆಂಬಲವನ್ನು ಪಕ್ಷವು ಆಧರಿಸಿದೆ. ಇಲ್ಲಿ ಒಟ್ಟು ಮತದಾರರಲ್ಲಿ ಸುಮಾರು 24 ಪ್ರತಿಶತ ಕ್ರೈಸ್ತ ಮತವಿದೆ. ಇದಲ್ಲದೆ, ಮುಸ್ಲಿಮರು ಜನಸಂಖ್ಯೆಯ ಶೇಕಡಾ 18 ರಷ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪುನರಾವರ್ತಿತ ಕಾರ್ಯಕ್ರಮಗಳು ಮತ್ತು ರೋಡ್ ಶೋಗಳಿಂದ ತ್ರಿಶ್ಶೂರ್​​ನಲ್ಲಿ ಬಿಜೆಪಿ ಅಲೆ ಸೃಷ್ಟಿಸಿತ್ತು.

ಚಿತ್ರರಂಗದಿಂದ ರಾಜಕೀಯಕ್ಕೆ

1965 ರಲ್ಲಿ ಮಲಯಾಳಂನ ‘ಓಡೈಲ್ ನಿನ್ನು’ ಚಿತ್ರದಲ್ಲಿ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸಿದ್ದ ಸುರೇಶ್ ಗೋಪಿ, 1986 ರಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಫುಲ್ ಟೈಮ್ ನಟನಾಗಿ ಚಿತ್ರರಂಗಕ್ಕೆ ಸೇರಿದರು. 1990 ರ ದಶಕದಲ್ಲಿ ಅವರ ಆಕ್ಷನ್ ಚಲನಚಿತ್ರಗಳು ದೊಡ್ಡ ಹಿಟ್ ಆದ ನಂತರ ಅವರು ಮಲಯಾಳಂ ಸಿನಿಮಾರಂಗದಲ್ಲಿ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದರು. ಸುಮಾರು 250 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಇದನ್ನೂ ಓದಿ: Amethi Lok Sabha: ಕಾಂಗ್ರೆಸ್ ಭದ್ರಕೋಟೆ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಗೆ ಹಿನ್ನಡೆ

ಕಳೆದ ವರ್ಷ, ಅವರು ಕೋಲ್ಕತ್ತಾ ಮೂಲದ ಸತ್ಯಜಿತ್ ರೇ ಫಿಲ್ಮ್ & ಟೆಲಿವಿಷನ್ ಇನ್ಸ್ಟಿಟ್ಯೂಟ್ (SRFTI) ಅಧ್ಯಕ್ಷರಾಗಿ ಮತ್ತು ಅದರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೋಯಿಕ್ಕೋಡ್‌ನಲ್ಲಿ ಪತ್ರಕರ್ತರೊಂದಿಗೆ ಅನುಚಿವಾಗಿ ವರ್ತಿಸಿದ್ದರ ಆರೋಪ ಇವರ ಮೇಲೆ ಬಂದಿತ್ತು. ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದಾಗ ಆಕೆಯ ಪ್ರಶ್ನೆಗಳಿಗೆ ಉತ್ತರಿಸುವಾಗ ಭುಜದ ಮೇಲೆ ಎರಡು ಬಾರಿ ಕೈ ಹಾಕಿದ್ದು ವಿವಾದವಾಗಿತ್ತು. ಪತ್ರಕರ್ತೆ ಸುರೇಶ್ ಗೋಪಿ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Tue, 4 June 24

ತಾಜಾ ಸುದ್ದಿ
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ