ಅಸ್ಸಾಂ: ಭಾರತದಲ್ಲಿ ಮೇ 29ರಂದು ಭಾರತದಲ್ಲಿ ಮುಂಗಾರು (Monsoon) ಪ್ರಾರಂಭವಾಗಿದ್ದರೂ ಮಳೆ ಕೊಂಚ ಕ್ಷೀಣಿಸಿತ್ತು. ಆದರೆ, ಈ ವಾರ ಮಳೆಗಾಲ ತೀವ್ರಗೊಂಡಿದೆ. ಮಂಗಳವಾರದಿಂದ ಅಸ್ಸಾಂ (Assam Flood) ಮತ್ತು ಮೇಘಾಲಯದಲ್ಲಿ (Meghalaya Flood) ಭಾರೀ ಮಳೆಯಾಗುತ್ತಿದ್ದು, ಮೇಘಾಲಯದ ಚಿರಾಪುಂಜಿ ಮತ್ತು ಮೌಸಿನ್‌ರಾಮ್‌ನಲ್ಲಿ ದಾಖಲೆಯ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ರಾಜ್ಯಗಳು ತತ್ತರಿಸಿವೆ. ಭಾರೀ ಮಳೆ ಮತ್ತು ಭೂಕುಸಿತದಿಂದ ಮಾನ್ಸೂನ್ ಪೀಡಿತ ಈಶಾನ್ಯ ರಾಜ್ಯಗಳಲ್ಲಿ 6 ಮಕ್ಕಳು ಸೇರಿದಂತೆ ಕನಿಷ್ಠ 9 ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೇಘಾಲಯದಲ್ಲಿ ಅಂದಾಜು ಐದು ವ್ಯಕ್ತಿಗಳು ದುರಂತಕ್ಕೆ ಬಲಿಯಾಗಿದ್ದಾರೆ. ಶಿಲ್ಲಾಂಗ್‌ನ ನಾಂಗ್‌ಸ್ಪಂಗ್ ಸರ್ಕಲ್‌ನ ಲೈಟ್ಲಾರೆಮ್‌ನಲ್ಲಿ ಮನೆ ಬಿದ್ದು ನಾಲ್ವರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ. ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ಜಶಿಯಾರ್ ಗ್ರಾಮದಲ್ಲಿ ಮನೆ ಕುಸಿದು 25 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೇಘಾಲಯ ಮತ್ತು ಅಸ್ಸಾಂನಲ್ಲಿ ಪ್ರವಾಹದ ಅಬ್ಬರಕ್ಕೆ ಒಟ್ಟು 16 ಜನ ಸಾವನ್ನಪ್ಪಿದ್ದಾರೆ.
ಅಸ್ಸಾಂನ ಗೋಲ್ಪಾರಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಸಹೋದರರು, ಇಬ್ಬರೂ ಅಪ್ರಾಪ್ತ ವಯಸ್ಕರು ಸಾವನ್ನಪ್ಪಿದ್ದಾರೆ. ಬುಧವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಮರವೊಂದು ಬಿದ್ದು ಆಟೋ ರಿಕ್ಷಾ ಚಾಲಕ ಮೃತಪಟ್ಟಿದ್ದಾನೆ. ಈಶಾನ್ಯ ರಾಜ್ಯಗಳಲ್ಲಿ ಈ ವರ್ಷ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
Looking for dry land…#guwahatiflood #assamfloods pic.twitter.com/BzxgqjB4m1
— dipannita jaiswal (@disha_j22) June 15, 2022
ಇದನ್ನೂ ಓದಿ: Karnataka Rain: ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಮುಂಗಾರು ಆರ್ಭಟ; ಬೆಂಗಳೂರಿನಲ್ಲಿ ಇಂದು ಚದುರಿದ ಮಳೆ
ಅಗತ್ಯ ಮೂಲಸೌಕರ್ಯಗಳ ಮೇಲೆ ಮಳೆ ಭಾರೀ ಪರಿಣಾಮ ಬೀರುತ್ತದೆ. ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗವು ಒಂದು ತಿಂಗಳಿಗೂ ಹೆಚ್ಚು ಕಾಲ ಸಂಪರ್ಕ ಕಡಿತಗೊಂಡಿದೆ. ಜೂನ್ 1ರಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ.
This is That Time of the year whem some of us tweet about Terrible Flood situation in Assam. The Ritual of Devastating Flood has hit Assam this year as well. It is Embarrassing and Tragic for us Assamese people to cry for help every year. 75 years of Shame! pic.twitter.com/mnsBy3NCOo
— Adil hussain (@_AdilHussain) June 17, 2022
ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು, ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ರಾಜ್ಯದಾದ್ಯಂತ ಹಲವು ಸ್ಥಳಗಳಲ್ಲಿ ನಿರಂತರ ಮಳೆಯಿಂದ ಭೂಕುಸಿತ ಉಂಟಾಗಿದ್ದು, 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 25 ಜಿಲ್ಲೆಗಳಲ್ಲಿ ಕನಿಷ್ಠ 11 ಲಕ್ಷ ಜನರು ಪ್ರವಾಹದಿಂದ ಪ್ರಭಾವಿತರಾಗಿದ್ದಾರೆ. ಬ್ರಹ್ಮಪುತ್ರ ಮತ್ತು ಗೌರಂಗಾ ನದಿಗಳಲ್ಲಿ ನೀರಿನ ಮಟ್ಟ ಹಲವು ಪ್ರದೇಶಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Meanwhile in #Guwahati on 37 HighWay??#assamrains ?️?️ pic.twitter.com/fL0IaoRbOt
— Trishna Das Kumar ?? (@TDasKumar) June 16, 2022
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 19782.80 ಹೆಕ್ಟೇರ್‌ನಷ್ಟು ಬೆಳೆ ಭೂಮಿ ಪ್ರವಾಹದ ನೀರಿನಿಂದ ಮುಳುಗಿದೆ. ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, 72 ಕಂದಾಯ ವೃತ್ತಗಳ ಅಡಿಯಲ್ಲಿ 1,510 ಹಳ್ಳಿಗಳು ಪ್ರಸ್ತುತ ಜಲಾವೃತವಾಗಿವೆ. ಪ್ರವಾಹ ಪೀಡಿತ ಜಿಲ್ಲೆಗಳ ಆಡಳಿತಗಳು ಎಚ್ಚರಿಕೆಗಳನ್ನು ನೀಡಿದ್ದು, ತುರ್ತು ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯ ಹೊರತು ಜನರು ಮನೆಯಿಂದ ಹೊರಗೆ ಹೋಗದಂತೆ ಒತ್ತಾಯಿಸಿದ್ದಾರೆ. ಸತತ ಮೂರನೇ ದಿನವೂ ಜಲಾವೃತಗೊಂಡಿರುವುದರಿಂದ ರಾಜಧಾನಿ ಗುವಾಹಟಿಯ ಬಹುತೇಕ ಭಾಗಗಳು ಸ್ಥಗಿತಗೊಂಡಿವೆ. ಅಸ್ಸಾಂ ಹೊರತಾಗಿ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲೂ ಭಾರೀ ಮಳೆಯಿಂದಾಗಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಭೂಕುಸಿತ, ಸಿಡಿಲು ಮತ್ತು ಹಠಾತ್ ಪ್ರವಾಹದಿಂದಾಗಿ ಮೇಘಾಲಯದಲ್ಲಿ 5 ಜನರು ಸಾವನ್ನಪ್ಪಿದ್ದಾರೆ.
@himantabiswa @PMOIndia @narendramodi_in @narendramodi @nitin_gadkari this is situation of Assam right now, sadly no one is praying and paying attention like Kerala. You remember Assam for tea, oil etc do show some care #AssamFloods2022 #assamrains pic.twitter.com/Sh7SNgj1IS
— rajkishore dutta (@rajkishoredutt9) June 16, 2022
ಇದನ್ನೂ ಓದಿ: Karnataka Rain: ಕರಾವಳಿಯಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ; ಮಲೆನಾಡಿನಲ್ಲಿ 4 ದಿನ ವರುಣನ ಆರ್ಭಟ
ಮೇಘಾಲಯದಲ್ಲಿ, ರಾಜ್ಯ ಸರ್ಕಾರವು ರಾಜ್ಯದ ನಾಲ್ಕು ಪ್ರದೇಶಗಳನ್ನು ಪರಿಶೀಲಿಸಲು ನಾಲ್ಕು ಸಮಿತಿಗಳನ್ನು ರಚಿಸಿದೆ. ಪ್ರತಿ ಸಮಿತಿಯು ಕ್ಯಾಬಿನೆಟ್ ಸಚಿವರ ನೇತೃತ್ವದಲ್ಲಿದೆ. ಹೆದ್ದಾರಿಯ ಕೆಲವು ಭಾಗಗಳು ಕೊಚ್ಚಿಹೋಗಿ ಕೊಚ್ಚಿಹೋದ ನಂತರ ಭಾರೀ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ 6 ಅನ್ನು ಮುಚ್ಚಲಾಗಿದೆ. ಈ ಹೆದ್ದಾರಿಯು ತ್ರಿಪುರಾ, ದಕ್ಷಿಣ ಅಸ್ಸಾಂ, ಮಿಜೋರಾಂ ಮತ್ತು ಮೇಘಾಲಯದ ಕೆಲವು ಭಾಗಗಳ ಜೀವನಾಡಿಯಾಗಿದೆ. ಅಸ್ಸಾಂ ಮತ್ತು ಮೇಘಾಲಯ ಎರಡರಲ್ಲೂ ಬುಧವಾರದವರೆಗೆ ಸಾಮಾನ್ಯಕ್ಕಿಂತ 272 ಮಿಮೀ ಹೆಚ್ಚುವರಿ ಮಳೆಯಾಗಿದೆ. ಹವಾಮಾನ ಇಲಾಖೆಯು ಈ ವಾರಾಂತ್ಯದವರೆಗೂ ಎರಡು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ