Assembly Election Announced: ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 18, 2023 | 10:32 AM

ಚುನಾವಣಾ ಆಯೋಗವು ಇಂದು (ಬುಧವಾರ) ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭಾ ಚುನಾವಣಾ ದಿನಾಂಕಯನ್ನು ಪ್ರಕಟಿಸಲಿದೆ.

Assembly Election Announced: ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆ
election commission of India
Follow us on

ದೆಹಲಿ: ಚುನಾವಣಾ ಆಯೋಗವು ಇಂದು (ಬುಧವಾರ) ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭಾ ಚುನಾವಣಾ ದಿನಾಂಕಯನ್ನು ಪ್ರಕಟಿಸಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಸಮಿತಿಯು ಇಂದು ಮಧ್ಯಾಹ್ನ 2.30ಕ್ಕೆ ಇಲ್ಲಿ ಪತ್ರಿಕಾಗೋಷ್ಠಿ ಕರೆದಿದೆ. ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತದಲ್ಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಆಡಳಿತದ ಒಕ್ಕೂಟದ ಭಾಗವಾಗಿದೆ. ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಗಳ ಐದು ವರ್ಷಗಳ ಅವಧಿಯು ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22 ರಂದು ಕೊನೆಗೊಳ್ಳಲಿದೆ.

ಇದನ್ನು ಓದಿ:Karnataka Assembly Poll 2023: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಮೊದಲ ಪಟ್ಟಿ ಪ್ರಕಟ: ಇಲ್ಲಿದೆ ವಿವರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ನೇತೃತ್ವದ ತಂಡವು ಮೂರು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ ನಂತರ ಕಳೆದ ವಾರ ಸರಣಿ ಸಭೆಗಳನ್ನು ನಡೆಸಲಾಯಿತು. ಮೂರು ರಾಜ್ಯಗಳ ರಾಜಕೀಯ ಪಕ್ಷಗಳು, ನಾಗರಿಕ ಅಧಿಕಾರಿಗಳು ಮತ್ತು ಕೇಂದ್ರ ಭದ್ರತಾ ಅಧಿಕಾರಿಗಳೊಂದಿಗೆ ಈ ಸಭೆಗಳಲ್ಲಿ ಉಪಸ್ಥಿತರಿರಲಿದ್ದಾರೆ. +

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Wed, 18 January 23