AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಕ್ಕೆ 1 ಕೋಟಿ ಮೊಟ್ಟೆಗಳ ಕೊರತೆ ಎದುರಿಸುತ್ತಿದೆ ಮಹಾರಾಷ್ಟ್ರ!

ಮಹಾರಾಷ್ಟ್ರವು ಮೊಟ್ಟೆಗಳ ಕೊರತೆ ನೀಗಿಸಲು ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಿಂದ ಮೊಟ್ಟೆಗಳನ್ನು ತರಿಸಿಕೊಳ್ಳುತ್ತಿದೆ.

ದಿನಕ್ಕೆ 1 ಕೋಟಿ ಮೊಟ್ಟೆಗಳ ಕೊರತೆ ಎದುರಿಸುತ್ತಿದೆ ಮಹಾರಾಷ್ಟ್ರ!
ನೀವು ಸಹ ವಿಟಮಿನ್ ಡಿ ಕೊರತೆಯನ್ನು ಎದುರಿಸುತ್ತಿದ್ದರೆ ನಾವು ನಿಮಗೆ ಕೆಲವು ವಿಟಮಿನ್ ಡಿ ಭರಿತ ಆಹಾರಗಳ ಬಗ್ಗೆ ತಿಳಿಸುತ್ತೇವೆ. ನೀವು ಮಾಂಸಾಹಾರಿಗಳಾಗಿದ್ದರೆ ಮತ್ತು ವಿಟಮಿನ್ ಡಿ ಕೊರತೆಯೊಂದಿಗೆ ಹೋರಾಡುತ್ತಿದ್ದರೆ, ಮೊಟ್ಟೆಗಳನ್ನು ತಿನ್ನುವುದರಿಂದ ಈ ಕೊರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್ ಜೊತೆಗೆ ವಿಟಮಿನ್ ಡಿ ಕೂಡ ಇದೆ.
TV9 Web
| Edited By: |

Updated on: Jan 18, 2023 | 11:18 AM

Share

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ದಿನಕ್ಕೆ 1 ಕೋಟಿ ಮೊಟ್ಟೆಗಳ (Eggs Shortage) ಕೊರತೆ ಎದುರಾಗಿದೆ. ಹೀಗಾಗಿ, ಮಹಾರಾಷ್ಟ್ರ ರಾಜ್ಯದಲ್ಲಿ ಮೊಟ್ಟೆ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಎಂದು ರಾಜ್ಯದ ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪಶುಸಂಗೋಪನಾ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಧನಂಜಯ ಪರ್ಕಳೆ ಮಾಹಿತಿ ನೀಡಿದ್ದು, ‘ಮೊಟ್ಟೆಯ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗೆ 1,000 ಪಂಜರಗಳ ಜೊತೆಗೆ 21,000 ರೂ. ಸಬ್ಸಿಡಿ ದರದಲ್ಲಿ 50 ವೈಟ್ ಲೆಗಾರ್ನ್ ಕೋಳಿಗಳನ್ನು ನೀಡಲು ಇಲಾಖೆ ಯೋಜಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ: ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು, ಬಿಳಿಭಾಗ ಮಾತ್ರ ಸೇವಿಸಬೇಕೇ? ತಜ್ಞರು ಹೇಳುವುದೇನು?

ಮಹಾರಾಷ್ಟ್ರದಲ್ಲಿ ದಿನಕ್ಕೆ 2.25 ಕೋಟಿಗೂ ಹೆಚ್ಚು ಮೊಟ್ಟೆಗಳನ್ನು ಸೇವಿಸಲಾಗುತ್ತದೆ. ರಾಜ್ಯವು ದಿನಕ್ಕೆ 1ರಿಂದ 1.25 ಕೋಟಿ ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಪ್ರಸ್ತುತ, ಮಹಾರಾಷ್ಟ್ರವು ಮೊಟ್ಟೆಗಳ ಕೊರತೆ ನೀಗಿಸಲು ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಿಂದ ಮೊಟ್ಟೆಗಳನ್ನು ತರಿಸಿಕೊಳ್ಳುತ್ತಿದೆ.

ಔರಂಗಾಬಾದ್‌ನಲ್ಲಿ ಕಳೆದ 2 ತಿಂಗಳಿನಿಂದ ಮೊಟ್ಟೆಯ ಬೆಲೆ ಏರಿಕೆಯಾಗಿದೆ. ಇಂದಿನವರೆಗೆ, ಔರಂಗಾಬಾದ್‌ನಲ್ಲಿ 100 ಮೊಟ್ಟೆಗಳ ಬೆಲೆ 575 ರೂ. ಆಗಿದೆ. 2 ತಿಂಗಳಿಗೂ ಹೆಚ್ಚು ಸಮಯದಿಂದ ಬೆಲೆಗಳು 100 ಮೊಟ್ಟೆಗಳಿಗೆ 500 ರೂ.ಗಿಂತ ಹೆಚ್ಚಿವೆ ಎಂದು ಸಗಟು ವ್ಯಾಪಾರಿ ಅಬ್ದುಲ್ ವಾಹಿದ್ ಶಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ