ಜಗಳವಾಡಿದ್ದ ಹೆಂಡತಿಯನ್ನು ರೈಲ್ವೆ ಹಳಿ ಮೇಲೆ ತಬ್ಬಿ ಸಂತೈಸುತ್ತಿದ್ದ ಗಂಡ… ರೈಲು ಬಂದು ಇಬ್ಬರನ್ನೂ ಸ್ವಾಹಾ ಮಾಡಿತು, ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Oct 14, 2023 | 9:52 AM

Alcoholic Husband: ವಾರಣಾಸಿಯ ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಶಿ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ದುರಾದೃಷ್ಟ ನಡೆದಿದೆ. ದಂಪತಿಗೆ ಮೂವರು ಮಕ್ಕಳು ಇದ್ದಾರೆ; ಮಗನಿಗೆ 6 ವರ್ಷ, ಇಬ್ಬರು ಹೆಣ್ಣುಮಕ್ಕಳಿಗೆ 3 ಮತ್ತು 4 ವರ್ಷ ವಯಸ್ಸು.

ಜಗಳವಾಡಿದ್ದ ಹೆಂಡತಿಯನ್ನು ರೈಲ್ವೆ ಹಳಿ ಮೇಲೆ ತಬ್ಬಿ ಸಂತೈಸುತ್ತಿದ್ದ ಗಂಡ... ರೈಲು ಬಂದು ಇಬ್ಬರನ್ನೂ ಸ್ವಾಹಾ ಮಾಡಿತು, ಎಲ್ಲಿ?
ರೈಲ್ವೆ ಹಳಿ ಮೇಲೆ ಹೆಂಡತಿಯನ್ನು ತಬ್ಬಿ ಸಂತೈಸುತ್ತಿದ್ದ ಗಂಡ... ರೈಲು ಬಂದು ಇಬ್ಬರನ್ನೂ ಸ್ವಾಹಾ ಮಾಡಿತು
Follow us on

ವಾರಣಾಸಿಯಲ್ಲಿ (Varanasi) ನಿನ್ನೆ ಶುಕ್ರವಾರ ರೈಲ್ವೇ ಹಳಿಗಳ ಮೇಲಿದ್ದ ಮಹಿಳೆ ಮತ್ತು ಆಕೆಯ ಗಂಡನ ಮೇಲೆ ರೈಲು ಹಾದುಹೋಗಿ (speeding train) ದುರಂತ ಅಂತ್ಯ ಕಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪೊಲೀಸ್ ವರದಿಗಳ ಪ್ರಕಾರ, ಪತಿ ಜಗಳವಾಡಿಕೊಂಡು (Family Quarrel) ಮನೆಯಿಂದ ಬಂದಿದ್ದ ತನ್ನ ಹೆಂಡತಿಯನ್ನು ತಬ್ಬಿ ಸಂತೈಸುತ್ತಿದ್ದಾಗ ಈ ದುರಾದೃಷ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮದ್ಯ ವ್ಯಸನಿ ಗಂಡನಿಂದ (alcoholic Husband) ಬೇಸತ್ತು ಆ ಗೃಹಿಣಿ ತನ್ನ ಪ್ರಾಣ ಕಳೆದುಕೊಳ್ಳಲು ರೈಲ್ವೆ ಹಳಿ ಬಳಿ ಬಂದಿದ್ದಳು. ವಾರಣಾಸಿಯ ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಶಿ ರೈಲ್ವೆ ಕ್ರಾಸಿಂಗ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ಸಾರಾನಾಥ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬ್ರಿಜೇಶ್ ಕುಮಾರ್ ಸಿಂಗ್ ಅವರ ಪ್ರಕಾರ, 30 ವರ್ಷ ವಯಸ್ಸಿನ ಗೋವಿಂದ್ ಸೋಂಕರ್ ಮದ್ಯದ ದಾಸನಾಗಿದ್ದ. ಪ್ರತಿ ರಾತ್ರಿ ಮದ್ಯ ಸೇವಿಸುತ್ತಿದ್ದ. ಅದರಿಂದ ಪತ್ನಿ ಖುಷ್ಬು ಸೋಂಕರ್, 28 ವರ್ಷ, ಅದರಿಂದ ರೋಸಿಹೋಗಿದ್ದಳು.

ಕುಡಿದ ಅಮಲಿನಲ್ಲಿದ್ದ ಗೋವಿಂದ್ ದುರ್ಘಟನೆಗೂ ಮುನ್ನ, ತನ್ನ ಪತ್ನಿಯೊಂದಿಗೆ ಭಾರೀ ಜಗಳದಲ್ಲಿ ತೊಡಗಿದ್ದ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ, ಗೋವಿಂದನ ಹೆಂಡತಿ ರೈಲು ಹಳಿಗಳತ್ತ ಸಾಗಿದಳು. ಅವಳನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ ಗೋವಿಂದನೂ ತನ್ನ ಹೆಂಡತಿಯನ್ನು ಹಿಂಬಾಲಿಸಿದ್ದ. ಅವಳನ್ನು ಅಪ್ಪಿಕೊಂಡು, ಸಮಾಧಾನಪಡಿಸುತ್ತಿದ್ದ. ಇನ್ನೇನು ಇಬ್ಬರೂ ರೈಲ್ವೆ ಹಳಿ ಬಿಟ್ಟು ಬರಬೇಕಿತ್ತು… ಸರಿಯಾಗಿ ಅದೇ ಸಮಯದಲ್ಲಿ ರೈಲೊಂದು ಬಂದು ಇಬ್ಬರನ್ನೂ ಸ್ವಾಹಾ ಮಾಡಿದೆ.

Also Read: ಅಂಗಡಿಯಲ್ಲಿ ಆಕಸ್ಮಿಕವಾಗಿ ಗಾಯಗೊಂಡಿದ್ದ ಹಾವನ್ನು ಬದುಕಿಸಲು ಚಿಕಿತ್ಸೆಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ರವಾನೆ!

ಗೋವಿಂದ್ ಹಣ್ಣುಗಳನ್ನು ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದಂಪತಿಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:48 am, Sat, 14 October 23