ಅಂಗಡಿಯಲ್ಲಿ ಆಕಸ್ಮಿಕವಾಗಿ ಗಾಯಗೊಂಡಿದ್ದ ಹಾವನ್ನು ಬದುಕಿಸಲು ಚಿಕಿತ್ಸೆಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ರವಾನೆ!

ಗಾಯಗೊಂಡ ನಾಗರಹಾವಿನ ಸ್ಥಿತಿಯ ಬಗ್ಗೆ ಉತ್ತರ ಪ್ರದೇಶದ ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಸಂಪೂರ್ಣ ವಿವರಿಸಿದ್ದಾರೆ. ಉತ್ತಮ ಚಿಕಿತ್ಸೆಗಾಗಿ ನಾಗರ ಹಾವನ್ನು ದೆಹಲಿಗೆ ತರಬೇಕು ಎಂದು ಮೇನಕಾ ಗಾಂಧಿ ಸೂಚಿಸಿದ್ದಾರೆ. ಅದರಂತೆ ಅವರು ನಾಗರಹಾವನ್ನು ಆಂಬ್ಯುಲೆನ್ಸ್‌ನಲ್ಲಿ ದೆಹಲಿಗೆ ಕರೆದೊಯ್ದರು.

Follow us
ಸಾಧು ಶ್ರೀನಾಥ್​
|

Updated on:Oct 13, 2023 | 5:28 PM

ಹಾವನ್ನು ಕಂಡರೆ ಸಾಕು ಅನೇಕರು ಹೆದರುತ್ತಾರೆ. ಹಾವು ಕಚ್ಚಿ ಸಾಯುವವರನ್ನು ನೋಡಿದ್ದೇವೆ ಅಥವಾ ಕಚ್ಚಿ ಆಸ್ಪತ್ರೆಗೆ ಓಡಿ ಹೋಗುವುದನ್ನು ನೋಡಿದ್ದೇವೆ.. ಆದರೆ ಇಲ್ಲಿ ನಾಗರ ಹಾವನ್ನು ಉಳಿಸಲು ಇಬ್ಬರು ಪಡುತ್ತಿರುವ ಕಷ್ಟ ಎಲ್ಲರ ಮನ ಕಲಕುವಂತಿದೆ. ಗಾಯಗೊಂಡಿದ್ದ ಹಾವನ್ನು ಚಿಕಿತ್ಸೆಗಾಗಿ (Injured Snake) ಆಂಬ್ಯುಲೆನ್ಸ್‌ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಗೆ ಕೊಂಡೊಯ್ಯಲಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ (Uttar pradesh) ನಡೆದಿದೆ. ಬದೌನ್ ಜಿಲ್ಲೆಯ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ನಾಗರಹಾವು ನುಗ್ಗಿದೆ. ಆದರೆ ಅಂಗಡಿಯವನು ಅದನ್ನು ಗಮನಿಸದೆ ತನ್ನ ವ್ಯವಹಾರದಲ್ಲಿ ತೊಡಗಿದ್ದನು. ಭಾರವಾದ ಕಬ್ಬಿಣದ ವಸ್ತುವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ…

ಅವನ ಕಣ್ಣಿಗೆ ನಾಗರಹಾವು ಕಾಣಿಸಿದೆ. ಆ ವ್ಯಕ್ತಿ ಇದ್ದಕ್ಕಿದ್ದಂತೆ ಹೆದರಿ ಕಬ್ಬಿಣದ ವಸ್ತು ಕೈಯಿಂದ ಜಾರಿಬಿದ್ದಿದೆ. ಅದರೊಂದಿಗೆ ಆ ಕಬ್ಬಿಣದ ವಸ್ತುವು ಹಾವಿನ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ನಾಗರಹಾವು ಗಂಭೀರವಾಗಿ ಗಾಯಗೊಂಡಿದೆ. ಈ ವಿಷಯ ತಿಳಿದ ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ.

Also Read: ಭಯಂಕರ ಸ್ನೇಕ್ ಡ್ಯಾನ್ಸ್! ಅಪಾಯಕಾರಿ ನಾಗರಹಾವನ್ನು ಹಿಡಿದು ಎಗರೆಗರಿ ಬ್ರೇಕ್​​ ಡ್ಯಾನ್ಸ್​ ಮಾಡಿದ ಯುವಕ, ವೀಡಿಯೊ ವೈರಲ್ ಆಯ್ತು!

ನಾಗರಹಾವಿನ ಸ್ಥಿತಿಯ ಬಗ್ಗೆ ಸಂಪೂರ್ಣ ವಿವರಿಸಿದ್ದಾರೆ. ಉತ್ತಮ ಚಿಕಿತ್ಸೆಗಾಗಿ ನಾಗರ ಹಾವನ್ನು ದೆಹಲಿಗೆ ತರಬೇಕು ಎಂದು ಮೇನಕಾ ಗಾಂಧಿ (Maneka Gandhi) ಸೂಚಿಸಿದ್ದಾರೆ. ವಿಕೇಂದ್ರ ಶರ್ಮಾ ಅವರು ನಾಗರಹಾವನ್ನು ಆಂಬ್ಯುಲೆನ್ಸ್‌ನಲ್ಲಿ ದೆಹಲಿಗೆ ಕರೆದೊಯ್ದರು. ಸದ್ಯ ಗಾಯಗೊಂಡಿರುವ ಹಾವಿಗೆ ಪಶು ಆಸ್ಪತ್ರೆ ಎಸ್​ಒಎಸ್​ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:28 pm, Fri, 13 October 23