Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಹೋಗಲು ಸಿನಿಮೀಯ ರೀತಿ ಪ್ಲಾನ್​​ ಹಾಕಿದ 11 ಬಾಂಗ್ಲಾ ಪ್ರಜೆಗಳ ಬಂಧನ

ಪಂಜಾಬಿನ ಅಟ್ಟಾರಿ ಗಡಿಯಲ್ಲಿ 11 ಬಾಂಗ್ಲಾ ಪ್ರಜೆಗಳನ್ನು ಗಡಿಭದ್ರತಾ ಪಡೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಲು ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಗಡಿಭದ್ರತಾ ಪಡೆ ಈ ಪ್ರಯತ್ನವನ್ನು ತಡೆದಿದೆ. ಗಡಿಭದ್ರತಾ ಪಡೆಯ ಕಣ್ತಪ್ಪಿಸಿ ಅಟ್ಟಾರಿ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನ ಎತ್ತರದ ಗೋಡೆಯನ್ನು ಹತ್ತಿ ಪರಾರಿಯಾಗಲು ಯತ್ನಸಿದ್ದಾರೆ.

ಪಾಕಿಸ್ತಾನಕ್ಕೆ ಹೋಗಲು ಸಿನಿಮೀಯ ರೀತಿ ಪ್ಲಾನ್​​ ಹಾಕಿದ 11 ಬಾಂಗ್ಲಾ ಪ್ರಜೆಗಳ ಬಂಧನ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 13, 2023 | 6:21 PM

ಅಮೃತಸರ, ಅ.13: ಪಂಜಾಬಿನ ಅಟ್ಟಾರಿ ಗಡಿಯಲ್ಲಿ (Attari border) 11 ಬಾಂಗ್ಲಾ ಪ್ರಜೆಗಳನ್ನು ಗಡಿ ಭದ್ರತಾ ಪಡೆ (Border Security Force) ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಲು ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಗಡಿಭದ್ರತಾ ಪಡೆ ಈ ಪ್ರಯತ್ನವನ್ನು ತಡೆದಿದೆ. ಗಡಿಭದ್ರತಾ ಪಡೆಯ ಕಣ್ತಪ್ಪಿಸಿ ಅಟ್ಟಾರಿ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನ ಎತ್ತರದ ಗೋಡೆಯನ್ನು ಹತ್ತಿ ಪರಾರಿಯಾಗಲು ಯತ್ನಸಿದ್ದಾರೆ. ಈ ಸಮಯದಲ್ಲಿ ಇದನ್ನು ಗಮನಿಸಿದ ಆ ಊರಿನ ಜನರ ಪಡೆಗಳಿಗೆ ತಿಳಿಸಿದ್ದಾರೆ. ಈ ಹಿಂದೆ ಗಡಿ ಭದ್ರತಾ ಪಡೆಗಳು ಇವರು ಹುಡುಕಾಟ ನಡೆಸುತ್ತಿತ್ತು ಎಂದು ಹೇಳಲಾಗಿದೆ. ಭದ್ರತಾ ಪಡೆಯ ಕಾರ್ಯಚರಣೆಗೆ ಆ ಊರಿನ ಜನರು ಕೂಡ ಸಹಕಾರ ನೀಡಿದ್ದರು ಎಂದು ಹೇಳಲಾಗಿದೆ.

ಮಾಹಿತಿಗಳ ಪ್ರಕಾರ, ಈ 11 ಜನರಲ್ಲಿ 3 ಮಹಿಳೆಯರು ಹಾಗೂ 3 ಮಕ್ಕಳು ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರು ಪಾಕಿಸ್ತಾನಕ್ಕೆ ಹೋಗಲು ಪ್ರಯತ್ನಸಿದ್ದರು. ಕಳೆದ ಬುಧವಾರ ಈ ಎಲ್ಲ ಪ್ಲಾನ್​​ ಹಾಕಿದ್ದರು. ಇವರು ಅಮೃತಸರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅಟ್ಟಾರಿ ತೆರಲಿದ್ದಾರೆ. ಅಲ್ಲಿಂದ ಪಾಕಿಸ್ತಾನಕ್ಕೆ ಹೋಗುವ ಹೊಂಚು ಹಾಕಿದ್ದಾರೆ. ಆದರೆ ಅವರಿಗೆ ನೇರವಾಗಿ ಪಾಕಿಸ್ತಾನಕ್ಕೆ ಹೋಗಲು ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಲಾಗಿದೆ.

ಗಡಿ ಗ್ರಾಮದ ವ್ಯಕ್ತಿಯೊಬ್ಬರಿಗೆ 25 ಸಾವಿರ ರೂ ನೀಡಿದ್ದಾರೆ:

ಗಡಿ ಭದ್ರತಾ ಪಡೆಗಳ ಕೈಗೆ ಸಿಕ್ಕಿ ನಂತರ ಒಂದೊಂದೆ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಪಾಕಿಸ್ಥಾನಕ್ಕೆ ಹೋಗಲು ವ್ಯಕ್ತಿಯೊಬ್ಬರು ಸಾಹಯ ಮಾಡುತ್ತೇನೆ ಎಂದು ಒಬ್ಬರಲ್ಲಿ 25 ಸಾವಿರ ಕೇಳಿದ್ದಾನೆ. ಆದರೆ ತಮ್ಮಲ್ಲಿ ಅಷ್ಟೊಂದು ಹಣ ಇಲ್ಲ ಎಂದು ಹೇಳಿದ್ದಾರೆ. ನಂತರ ಎಲ್ಲರೂ ಸೇರಿ 25 ಸಾವಿರ ನೀಡಿದ್ದಾರೆ.

ಇದನ್ನೂ ಓದಿ:ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಕೊಂದ BSF

ರಾತ್ರಿ 11.30ರವರೆಗೆ ಬಂಕ್‌ಗಳಲ್ಲಿ ಅಡಗಿ ಕುಳಿತಿದ್ದರು:

ಪಾಕಿಸ್ತಾನಕ್ಕೆ ಹೋಗಲು ಪ್ರಯತ್ನಿಸಿದ ಈ 11 ಬಾಂಗ್ಲಾ ಪ್ರಜೆಗಳನ್ನು ಈ ವ್ಯಕ್ತಿ ರಾತ್ರಿ 8 ರಿಂದ 11:30 ರವರೆಗೆ ರಕ್ಷಣಾ ರೇಖೆಯ ಬಳಿಯ ಬಂಕರ್‌ಗಳಲ್ಲಿ ಬಚ್ಚಿಟ್ಟಿದ್ದಾನೆ. ರಾತ್ರಿ 11.30ಕ್ಕೆ ಬಂಕರ್‌ಗಳಿಂದ ಹೊರಬಂದು, ಅಲ್ಲಿಂದ ಪಾಕಿಸ್ತಾನಕ್ಕೆ ಹೋಗಲು ಈ ವ್ಯಕ್ತಿ ಅವರಿಗೆ ವೈರ್ ಕಟರ್ (ಗಡಿಯ ವೈರ್​​ಗಳನ್ನು ಕಟ್​​ ಮಾಡಲು) ವ್ಯವಸ್ಥೆ ಮಾಡಿ ರೋಡವಾಲಾ ಗ್ರಾಮದ ಐಸಿಪಿ ಬಳಿ ಕರೆತಂದಿದ್ದಾನೆ.

ಮಧ್ಯಾಹ್ನ 2ರವರೆಗೆ ಐಸಿಪಿಯೊಳಗೆ ಅಡಗಿ ಕುಳಿತಿದ್ದರು

ಬುಧವಾರ 12.00 ಗಂಟೆಯಿಂದ ಗುರುವಾರ ಮಧ್ಯಾಹ್ನ 2.00 ಗಂಟೆಯವರೆಗೆ ಈ 11 ಬಾಂಗ್ಲಾ ಪ್ರಜೆಗಳನ್ನು ಐಸಿಪಿ ಬಳಿಯೇ ಇರಿಸಿದ್ದಾನೆ. ಅಲ್ಲಿಗೆ ದಾಳಿ ಮಾಡಿದ ಭದ್ರತಾ ಪಡೆ, 11 ಜನರನ್ನು ಬಂಧಿಸಿದ್ದಾರೆ. ಇನ್ನು ಇದರಲ್ಲಿ ಗರ್ಭಿಣಿಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ 11 ಜನರ ಮೇಲೆ ಮಾನವ ಕಳ್ಳಸಾಗಣೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ