PM Modi: ಪ್ರತಿಯೊಬ್ಬರೂ ಪಾರ್ವತಿ ಕುಂಡ, ಜಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಬೇಕು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ
Parvati Kund And Jageshwar Temples: ನಾನು ಉತ್ತರಾಖಂಡ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕೇದಾರನಾಥ, ಬದರಿನಾಥ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಹೋದೆ. ಈ ಸ್ಥಳಗಳು ನನಗೆ ಮಧುರವಾದ ಭಾವನೆಯನ್ನು ತಂದವು. ಆದರೆ ನಾನು ನನ್ನ ಜೀವನದಲ್ಲಿ ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಾಲಯಗಳಿಗೆ ಭೇಟಿ ನೀಡುವುದನ್ನು ಎಂದಿಗೂ ಮರೆಯುವುದಿಲ್ಲ. ಇಲ್ಲಿನ ಪ್ರಕೃತಿಯ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ಪಿಥೋರ್‌ಗಢ್‌ನಲ್ಲಿರುವ ಪವಿತ್ರ ಪಾರ್ವತಿ ಕುಂಡದಲ್ಲಿ ಪ್ರಧಾನಿ ವಿಶೇಷ ಪೂಜೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಮೋದಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ತಲೆಗೆ ಪೇಟ ತೊಟ್ಟು ಸ್ಥಳೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮೋದಿ ಈ ಪೂಜೆಗಳಲ್ಲಿ ಪಾಲ್ಗೊಂಡರು. ಅಲ್ಲದೆ, ಅವರು ಡಮರುಗ ಮತ್ತು ಶಂಖನಾದಗಳ ಸಹಾಯದಿಂದ ಶಿವನನ್ನು ಪ್ರಾರ್ಥಿಸಿದರು.
ನಂತರ ಪ್ರಧಾನಿ ಮೋದಿ ಅವರು ಜೋಲಿಂಗ್‌ಕಾಂಗ್‌ನ ಪಾರ್ವತಿ ಕುಂಡದ ತಪ್ಪಲಿನಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕೈಲಾಸ ಶಿಖರದ ಮುಂದೆ ಕೆಲಕಾಲ ಕುಳಿತು ಧ್ಯಾನ ಮಾಡಿದರು. ನಂತರ ಗಡಿಭಾಗದಲ್ಲಿರುವ ಜಗದೇಶ್ವರ ಧಾಮ ಮತ್ತು ಗುಂಜಿ ಗ್ರಾಮಕ್ಕೂ ಭೇಟಿ ನೀಡಿದರು (Parvati Kund, Jageshwar Temple). ಭಾರತ-ಚೀನಾ ಗಡಿಯಲ್ಲಿರುವ ಪಿಥೋರ್‌ಗಢ್ ಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ, ನರೇಂದ್ರ ಮೋದಿ (PM Modi) ಎಂಬುದು ವಿಶೇಷ. ಈ ಸಂದರ್ಭದಲ್ಲಿ ಪ್ರಧಾನಿಯವರು ಗ್ರಾಮಸ್ಥರನ್ನೂ ಭೇಟಿ ಮಾಡಿದರು. ಅಲ್ಲಿನ ಗ್ರಾಮಸ್ಥರು ತಯಾರಾ ಮಾಡುವ ಸ್ಥಳೀಯ ಉತ್ಪನ್ನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು (Spiritual, Divinity).
ಬಳಿಕ ತಮ್ಮ ಪ್ರವಾಸದ ವಿವರಗಳನ್ನು ಪ್ರಧಾನಿ ಮೋದಿ ಎಕ್ಸ್ ನಲ್ಲಿ (ಟ್ವಿಟ್ಟರ್) ಹಂಚಿಕೊಂಡಿದ್ದಾರೆ: ‘ಉತ್ತರಾಖಂಡದ ಪಿಥೋರ್‌ಗಢ್‌ನಲ್ಲಿರುವ ಪವಿತ್ರ ಪಾರ್ವತಿ ಕುಂಡವನ್ನು ನೋಡಿದ ನಂತರ ನನಗೆ ತುಂಬಾ ಸಂತೋಷವಾಯಿತು. ಇಲ್ಲಿ ಪೂಜೆಗಳನ್ನು ಮಾಡಿ, ಧನ್ಯತಾ ಭಾವ ಮೂಡಿತು. ಇಲ್ಲಿನ ಆದಿ ಕೈಲಾಸವನ್ನು ನೋಡಿದ ನಂತರ ನನ್ನ ಹೃದಯ ಉಕ್ಕಿ ಬಂತು. ಪ್ರಕೃತಿಯ ಮಡಿಲಲ್ಲಿರುವ ಆಧ್ಯಾತ್ಮಿಕ ಮತ್ತು ಸಂಸ್ಕೃತಿಯ ಸ್ಥಳದಲ್ಲಿ ಕುಳಿತು ನಮ್ಮ ದೇಶದ ಎಲ್ಲಾ ಕುಟುಂಬ ಸದಸ್ಯರು ಸಂತೋಷದ ಜೀವನ ನಡೆಸಬೇಕೆಂದು ಬಯಸುವೆ ಎಂದು ಪ್ರಾರ್ಥಿಸಿದರು.
ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ಉತ್ತರಾಖಂಡ ಭೇಟಿಗೆ ಸಂಬಂಧಿಸಿದ ಹೆಚ್ಚಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಉತ್ತರಾಖಂಡದಲ್ಲಿ ನೋಡಲೇಬೇಕಾದ ಸ್ಥಳಗಳು ಯಾವುವು ಎಂದು ಯಾರಾದರೂ ಕೇಳಿದರೆ… ನಾನು ಕುಮಾವೂನ್ ಪ್ರದೇಶದ ಪಾರ್ವತಿ ಕುಂಡ, ಜಗೇಶ್ವರ ದೇವಾಲಯಗಳ ಹೆಸರನ್ನು ಹೇಳುತ್ತೇನೆ. ಇವುಗಳನ್ನು ಎಲ್ಲರೂ ನೋಡಲೇಬೇಕು. ಇಲ್ಲಿನ ಪ್ರಕೃತಿಯ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.
ನಿಜ ಹೇಳಬೇಕೆಂದರೆ… ಉತ್ತರಾಖಂಡದಲ್ಲಿ ಭೇಟಿ ನೀಡಲು ಯೋಗ್ಯವಾದ ಅನೇಕ ಸ್ಥಳಗಳಿವೆ. ಪ್ರವಾಸಿಗರೂ ಇಲ್ಲಿಗೆ ಸಾಕಷ್ಟು ಬರುತ್ತಾರೆ. ನಾನು ಕೂಡ ಈ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕೇದಾರನಾಥ, ಬದರಿನಾಥ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಹೋದೆ. ಈ ಸ್ಥಳಗಳು ನನಗೆ ಮಧುರವಾದ ಭಾವನೆಯನ್ನು ತಂದವು. ಆದರೆ ನಾನು ನನ್ನ ಜೀವನದಲ್ಲಿ ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಾಲಯಗಳಿಗೆ ಭೇಟಿ ನೀಡುವುದನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಮೋದಿ ಹೇಳಿದ್ದಾರೆ.
ಪಾರ್ವತಿ ಕುಂಡ, ಜಗೇಶ್ವರ ದೇವಸ್ಥಾನದ ಬಗ್ಗೆ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಹೀಗಿದೆ:
If someone were to ask me- if there is one place you must visit in Uttarakhand which place would it be, I would say you must visit Parvati Kund and Jageshwar Temples in the Kumaon region of the state. The natural beauty and divinity will leave you spellbound.
Of course, Uttarakhand has many well known places worth visiting and I have also visited the state very often. This includes the sacred places of Kedarnath and Badrinath, which are most memorable experiences. But, to return to Parvati Kund and Jageshwar Temples after many years has been special.
If someone were to ask me- if there is one place you must visit in Uttarakhand which place would it be, I would say you must visit Parvati Kund and Jageshwar Temples in the Kumaon region of the state. The natural beauty and divinity will leave you spellbound.
Of course,… pic.twitter.com/9FoOsiPtDQ
— Narendra Modi (@narendramodi) October 14, 2023
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Sat, 14 October 23