ಕೆನರಾ ಬ್ಯಾಂಕ್‌ ಮಹಿಳಾ ಅಧಿಕಾರಿ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿ ಸಸ್ಪೆಂಡ್​ಗೆ ಸಚಿವೆ ನಿರ್ಮಲಾ ಸೂಚನೆ

|

Updated on: Jun 24, 2020 | 11:12 AM

ಸೂರತ್: ಸೂರತ್ ನಲ್ಲಿರುವ ಕೆನರಾ ಬ್ಯಾಂಕ್​ಗೆ ನುಗ್ಗಿ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ವರದಿಯಾಗಿದೆ. ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಗುಜರಾತ್‌ನ ಸೂರತ್ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾತ್ರಿ ಕರೆ ಮಾಡಿ, ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸೂರತ್ ಕೆನರಾ ಬ್ಯಾಂಕ್​ನಲ್ಲಿ ಪಾಸ್​ ಬುಕ್ ಪ್ರಿಂಟ್​ ಹಾಕುವ ವಿಚಾರವಾಗಿ ಮಹಿಳಾ ಅಧಿಕಾರಿ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ […]

ಕೆನರಾ ಬ್ಯಾಂಕ್‌ ಮಹಿಳಾ ಅಧಿಕಾರಿ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿ ಸಸ್ಪೆಂಡ್​ಗೆ ಸಚಿವೆ ನಿರ್ಮಲಾ ಸೂಚನೆ
Follow us on

ಸೂರತ್: ಸೂರತ್ ನಲ್ಲಿರುವ ಕೆನರಾ ಬ್ಯಾಂಕ್​ಗೆ ನುಗ್ಗಿ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ವರದಿಯಾಗಿದೆ. ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಗುಜರಾತ್‌ನ ಸೂರತ್ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾತ್ರಿ ಕರೆ ಮಾಡಿ, ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸೂರತ್ ಕೆನರಾ ಬ್ಯಾಂಕ್​ನಲ್ಲಿ ಪಾಸ್​ ಬುಕ್ ಪ್ರಿಂಟ್​ ಹಾಕುವ ವಿಚಾರವಾಗಿ ಮಹಿಳಾ ಅಧಿಕಾರಿ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಸೂರತ್ ಜಿಲ್ಲಾಧಿಕಾರಿ ಧವಲ್ ಪಟೇಲ್ ಜೊತೆಗೆ ಮಾತನಾಡಿದ್ದಾರೆ. ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಅಧಿಕಾರಿ ಕುಡಿದುಬಂದು ದ್ವೇಷದಿಂದ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ವೇಳೆ ಕೊರೊನಾ ಸೋಂಕು ವಿರುದ್ಧದ ಮಾರ್ಗಸೂಚಿಯಂತೆ ಆತ ಮುಖಕ್ಕೆ ಮಾಸ್ಕ್​ ಸಹ ಹಾಕದೇ ಮಹಿಳಾ ಅಧಿಕಾರಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಸಸ್ಪೆಂಡ್​ ಮಾಡಬೇಕು ಎಂದೂ ಬ್ಯಾಂಕ್​ ಅಧಿಕಾರಿಗಳು ಒತ್ತಾಯಿಸಿದ್ದಾರೆ.

Published On - 11:03 am, Wed, 24 June 20