ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ, ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

|

Updated on: Feb 06, 2025 | 11:17 AM

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಯೋಧ್ಯೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಿಗಳಾದ ದಿಗ್ವಿಜಯ್ ಸಿಂಗ್ ಅಲಿಯಾಸ್ ಬಾಬಾ, ಹರಿರಾಮ್ ಕೋರಿ ಮತ್ತು ವಿಜಯ್ ಸಾಹು ಪೊಲೀಸರ ಮುಂದೆ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ. ಸಾಮಾನ್ಯವಾಗಿ ವೈದ್ಯರು ನಿತ್ಯ ನೂರಾರು ಸಾವುಗಳನ್ನು ನೋಡುತ್ತಾರೆ, ಎಷ್ಟೋ ಮಂದಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಾರೆ.

ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ, ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು
Image Credit source: The Hindu
Follow us on

ಅಯೋಧ್ಯೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು, ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಸ್ಥಿತಿ ನೋಡಿ ವೈದ್ಯರು ಕಣ್ಣೀರಿಟಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಸೋಮವಾರ ಬಂಧಿಸಿದ್ದಾರೆ. ಅತ್ಯಾಚಾರ ಆರೋಪಿಗಳಾದ ದಿಗ್ವಿಜಯ್ ಸಿಂಗ್ ಅಲಿಯಾಸ್ ಬಾಬಾ, ಹರಿರಾಮ್ ಕೋರಿ ಮತ್ತು ವಿಜಯ್ ಸಾಹು ಪೊಲೀಸರ ಮುಂದೆ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.

ಸಾಮಾನ್ಯವಾಗಿ ವೈದ್ಯರು ನಿತ್ಯ ನೂರಾರು ಸಾವುಗಳನ್ನು ನೋಡುತ್ತಾರೆ, ಎಷ್ಟೋ ಮಂದಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಾರೆ. ಮನಸ್ಸು ಗಟ್ಟಿ ಮಾಡಿಕೊಳ್ಳದಿದ್ದರೆ ಅವರು ಆ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ, ಆದರೆ ಬಾಲಕಿ ಮರಣೋತ್ತರ ಪರೀಕ್ಷೆ ನಡೆಸುವಾಗ ಅವರು ಕಣ್ಣೀರು ಹಾಕಿದ್ದಾರೆ.

ಆಕೆಯ ಸಾವಿಗೆ ಅತಿಯಾದ ರಕ್ತಸ್ರಾವವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಪೊಲೀಸ್ ಮೂಲಗಳು ಹೇಳುವಂತೆ ಇಬ್ಬರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆದಿದೆ. ಬಾಲಕಿಯ ದೇಹದ ಮೇಲೆ 30 ಸಣ್ಣ ಹಾಗೂ ದೊಡ್ಡ ಗಾಯಗಳಿದ್ದವು. ಸಂತ್ರಸ್ತೆಯ ಎರಡೂ ಬದಿಗಳಲ್ಲಿ 24 ಪಕ್ಕೆಲುಬುಗಳಲ್ಲಿ 14 ಮುರಿದಿವೆ.

ಮತ್ತಷ್ಟು ಓದಿ: ತಮಿಳುನಾಡು: ಪ್ರೌಢಶಾಲಾ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ

ಆಕೆಯ ಖಾಸಗಿ ಅಂಗಕ್ಕೆ ಕ್ರೂರವಾಗಿ ಇರಿದಿದ್ದಾರೆ. ಎರಡಕ್ಕೂ ಹೆಚ್ಚು ವ್ಯಕ್ತಿಗಳು ಸೇರಿ ಆಕೆಯನ್ನು ಕೊಲೆ ಮಾಡಿದ್ದಾರೆ. ಈ ವರದಿಯಲ್ಲಿ ಅವರು ಪೊಲೀಸರಿಗೆ ನೀಡಿದ್ದಾರೆ. ಘಟನೆಯ ಆರೋಪಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದು, ನಾವು ಆಕೆಯ ಹಿಂದೆ ಓಡಿ ಹೋಗಿ ಹೊಲದಲ್ಲಿ ಆಕೆಯನ್ನು ಹಿಡಿದಿದ್ದೆವು, ಕೋಲಿನಿಂದ ಆಕೆಯ ತಲೆಗೆ ಮೊದಲು ಪೆಟ್ಟು ಕೊಟ್ಟೆವು, ಆಕೆ ಯಾವಾಗ ಸತ್ತಿದ್ದಾಳೆ ಎಂಬುದು ನಮಗೆ ತಿಳಿದಿಲ್ಲ.

ಹುಡುಗಿ ಸತ್ತಿರುವುದು ತಡವಾಗಿ ನಮಗೆ ಅರ್ಥವಾಗಿತ್ತು. ನಾವು ಆಕೆಯ ಜತೆ ಒಂದು ಗಂಟೆಗಳ ಕಾಲ ಕ್ರೂರವಾಗಿ ವರ್ತಿಸಿದ್ದೆವು, ಆಕೆಯ ದುಪಟ್ಟಾವನ್ನು ಬಾಯಿಗೆ ತುಂಬಿಸಿದ್ದೆವು, ಆಕೆ ವಿರೋಧಿಸುತ್ತಲೇ ಇದ್ದಳು, ನಾವೆಲ್ಲರೂ ಕುಡಿದಿದ್ದೆವು, ಆದ್ದರಿಂದ ಕೋಪಗೊಂಡು ಆಕೆಗೆ ಹೊಡಿದಿದ್ದೆವು ಎಂದು ಹೇಳಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:31 am, Thu, 6 February 25