Ram Lalla Idol: ರಾಮ ಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆಗಳ ಆಯ್ಕೆ ಮಾಡಲು ದೆಹಲಿಯಲ್ಲಿ ರಾಮ ಜನ್ಮಭೂಮಿ ಟ್ರಸ್ಟ್​ ಸಭೆ

|

Updated on: Apr 07, 2023 | 11:00 AM

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ  ರಾಮ ಲಲ್ಲಾ ವಿಗ್ರಹಕ್ಕೆ ಬಳಸಲು ಉತ್ತಮವಾದ ಶಿಲೆಗಳನ್ನು ಆಯ್ಕೆ ಮಾಡಲು ಶಿಲ್ಪಿಗಳ ಸಮಿತಿಯನ್ನು ರಚಿಸಿದೆ.

Ram Lalla Idol: ರಾಮ ಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆಗಳ ಆಯ್ಕೆ ಮಾಡಲು ದೆಹಲಿಯಲ್ಲಿ ರಾಮ ಜನ್ಮಭೂಮಿ ಟ್ರಸ್ಟ್​ ಸಭೆ
ರಾಮ ಮಂದಿರ
Image Credit source: ABP Live
Follow us on

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ  ರಾಮ ಲಲ್ಲಾ ವಿಗ್ರಹಕ್ಕೆ ಬಳಸಲು ಉತ್ತಮವಾದ ಶಿಲೆಗಳನ್ನು ಆಯ್ಕೆ ಮಾಡಲು ಶಿಲ್ಪಿಗಳ ಸಮಿತಿಯನ್ನು ರಚಿಸಿದೆ. ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲು ಬಳಸಲಾಗುವ ಶಿಲೆಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶನಿವಾರ ದೆಹಲಿಯಲ್ಲಿ ಸಭೆ ನಡೆಸಲಿದೆ ಎಂದು ಟ್ರಸ್ಟ್ ತಿಳಿಸಿದೆ.

ಟ್ರಸ್ಟ್ ಉತ್ತಮ ಶಿಲೆ ಆಯ್ಕೆ ಮಾಡಲು ಶಿಲ್ಪಿಗಳ ಸಮಿತಿಯನ್ನು ರಚಿಸಿದೆ ಮತ್ತು ಅವರು ತಮ್ಮ ವರದಿಗಳನ್ನು ಸಭೆಯಲ್ಲಿ ಹಸ್ತಾಂತರಿಸಲಿದ್ದಾರೆ. ಟ್ರಸ್ಟ್ ಕರ್ನಾಟಕದಿಂದ ಐದು, ರಾಜಸ್ಥಾನದಿಂದ ನಾಲ್ಕು, ಒಡಿಶಾದಿಂದ ಒಂದು ಮತ್ತು ನೇಪಾಳದಿಂದ ಎರಡು ಕಲ್ಲುಗಳನ್ನು ಸಂಗ್ರಹಿಸಿದೆ. ವಿಗ್ರಹಕ್ಕೆ ಹೆಚ್ಚು ಸೂಕ್ತವಾದ ಶಿಲೆಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸುವ ಮೊದಲು ಎಲ್ಲಾ ದಾಖಲೆಗಳು ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೇಪಾಳದ ಮಾಜಿ ಉಪ ಪ್ರಧಾನಿ ಬಿಮಲೇಂದ್ರ ನಿಧಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನೇಪಾಳದಲ್ಲಿ ಅಂದಿನ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಶಿಲೆಗಳನ್ನು ಟ್ರಸ್ಟ್‌ಗೆ ಹಸ್ತಾಂತರಿಸುವ ಪ್ರಸ್ತಾಪವನ್ನು ಮುಂದಿಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮತ್ತಷ್ಟು ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ಮಹಾರಾಷ್ಟ್ರದ ಚಂದ್ರಾಪುರದ ತೇಗದ ಮರ ಬಳಕೆ

ನಂತರ ಟ್ರಸ್ಟ್ ರಾಮ್ ಲಲ್ಲಾನ ವಿಗ್ರಹವನ್ನು ತಯಾರಿಸಲು ಹೆಸರಾಂತ ಶಿಲ್ಪಿಗಳನ್ನು ನಿಯೋಜಿಸಿತು. ದೇವತೆಯ ಬಾಲ್ಯವನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಒಡಿಶಾದ ಸುದರ್ಶನ್ ಸಾಹು ಮತ್ತು ವಾಸುದೇವ್ ಕಾಮತ್, ಕರ್ನಾಟಕದ ಕೆ.ವಿ.ಮಣಿಯಾ ಮತ್ತು ಪುಣೆಯ ಶಾಸ್ತ್ರಯಜ್ಞ ದೇಲ್ಕರ್ ಅವರು ರಾಮ್ ಲಲ್ಲಾ ವಿಗ್ರಹದ ಮಾದರಿಗಳನ್ನು ಕಳುಹಿಸಿದ್ದಾರೆ. ಅವುಗಳಲ್ಲಿ ಒಂದನ್ನು ಟ್ರಸ್ಟ್ ಆಯ್ಕೆ ಮಾಡುತ್ತದೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಪ್ರಕಾರ, ಸೂರ್ಯನ ಕಿರಣಗಳು ಅದರ ಮೇಲೆ ಬೀಳುವಂತೆ ವಿಗ್ರಹವು ಸುಮಾರು 8.5 ಅಡಿ ಎತ್ತರವಿರುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ