ತೀರ್ಪು ಪ್ರಕಟಕ್ಕೂ ಮುನ್ನ ರಾಮಜನ್ಮಭೂಮಿ-ಬಾಬ್ರಿ ವಿವಾದ ಇತ್ಯರ್ಥಕ್ಕಾಗಿ ದೇವರನ್ನು ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್

|

Updated on: Oct 21, 2024 | 9:26 AM

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ದೇವರಲ್ಲಿ ಸಹಾಯ ಕೋರಿದ್ದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಈ ಪ್ರಕರಣ ಮೂರು ತಿಂಗಳುಗಳ ಕಾಲ ನನ್ನ ಮುಂದಿತ್ತು. ನಿಮಗೆ ನಂಬಿಕೆ ಇದ್ದರೆ ದೇವರು ಯಾವಾಗಲೂ ದಾರಿ ತೋರುತ್ತಾನೆ ಎಂದು ಹೇಳಿದರು.

ತೀರ್ಪು ಪ್ರಕಟಕ್ಕೂ ಮುನ್ನ ರಾಮಜನ್ಮಭೂಮಿ-ಬಾಬ್ರಿ ವಿವಾದ ಇತ್ಯರ್ಥಕ್ಕಾಗಿ ದೇವರನ್ನು ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್
ಡಿವೈ ಚಂದ್ರಚೂಡ್
Image Credit source: Makoob Media
Follow us on

‘‘ಬಾಬ್ರಿ ಮಸೀದಿ, ರಾಮ ಜನ್ಮಭೂಮಿ ಕುರಿತ ವಿವಾದಕ್ಕೆ ಪರಿಹಾರ ಸಿಗದಿದ್ದಾಗ ದೇವರನ್ನು ಪ್ರಾರ್ಥಿಸುತ್ತಾ ಕುಳಿತಿದ್ದೆ’’ ಎಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ತನ್ನ ಮೇಲೆ ನಂಬಿಕೆ ಇಡುವವರಿಗೆ ದೇವರು ಎಂದೂ ಒಳ್ಳೆಯ ಮಾರ್ಗವನ್ನೇ ತೋರುತ್ತಾನೆ ಎಂದರು.

ನವೆಂಬರ್ 9, 2019 ರಂದು, ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐದು ನ್ಯಾಯಮೂರ್ತಿಗಳ ಪೀಠವು ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ ವಿವಾದಾತ್ಮಕ ಸಮಸ್ಯೆಯನ್ನು ಇತ್ಯರ್ಥಪಡಿಸಿತು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು.

ಅಯೋಧ್ಯೆಯಲ್ಲಿಯೇ ಪರ್ಯಾಯ ಐದು ಎಕರೆ ಜಾಗದಲ್ಲಿ ಮಸೀದಿ ನಿರ್ಮಿಸಲಾಗುವುದು ಎಂದು ಪೀಠವು ತೀರ್ಪು ನೀಡಿತ್ತು. ಸಿಜೆಐ ಚಂದ್ರಚೂಡ್ ಅವರು ಐತಿಹಾಸಿಕ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು.

ಈ ವರ್ಷ ಜುಲೈನಲ್ಲಿ ಸಿಜೆಐ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ವರ್ಷದ ಜನವರಿಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದ್ದು, ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮತ್ತಷ್ಟು ಓದಿ: ಕನ್ನಡಿಗರಿಗೆ ಮತ್ತೊಂದು ಗರಿ; ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಹುಪಾಲು ಜವಾಬ್ದಾರಿ ಕರ್ನಾಟಕದವರದ್ದು

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವು 16 ನೇ ಶತಮಾನದ ಮೊಘಲ್ ಮಸೀದಿಯನ್ನು ರಾಮನ ಜನ್ಮಸ್ಥಳವೆಂದು ಹೇಳಲಾಗುವ ಸ್ಥಳದಲ್ಲಿ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ದೀರ್ಘಕಾಲದ ಕಾನೂನು ಮತ್ತು ರಾಜಕೀಯ ಸಮಸ್ಯೆಯಾಗಿತ್ತು.

ನವೆಂಬರ್ 9, 2019 ರಂದು, ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದ ಐದು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು ತನ್ನ ತೀರ್ಪಿನ ಮೂಲಕ ವಿವಾದವನ್ನು ಪರಿಹರಿಸಿತು.
ಈ ವರ್ಷದ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ