ಕನ್ನಡಿಗರಿಗೆ ಮತ್ತೊಂದು ಗರಿ; ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಹುಪಾಲು ಜವಾಬ್ದಾರಿ ಕರ್ನಾಟಕದವರದ್ದು
ಅಯೋಧ್ಯೆಯ ಜಗದ್ವಿಖ್ಯಾತ ಮಂದಿರ ನಿರ್ಮಾಣದಲ್ಲಿ ಬಹುಪಾಲು ಪಾತ್ರ ಕನ್ನಡಿಗರದ್ದೇ ಇದೆ. ಶಿಲಾನ್ಯಾಸದಿಂದ ಹಿಡಿದು ಪೂರ್ಣ ನಿರ್ಮಾಣದ ಜವಾಬ್ದಾರಿಯನ್ನ ಕನ್ನಡಿಗರಾದ ಕಂಟ್ರ್ಯಾಕ್ಟರ್ ಮುನಿರಾಜು ಹೊತ್ತಿದಾರೆ. ಮೊದಲ ಹಂತದಿಂದ ಹಿಡಿದು ಪೂರ್ಣ ನಿರ್ಮಾಣದಲ್ಲಿ ಮುನಿರಾಜು ಅವರದೇ ಹೆಚ್ಚಿನ ಪಾತ್ರ ಇರೋದು ಕನ್ನಡಿಗರಿಗೆ ಹೆಮ್ಮೆಯ ಗರಿ ಮೂಡಿಸಿದಂತಾಗಿದೆ.
ಬೆಂಗಳೂರು, ಜ.20: ಶತಮಾನಗಳಿಂದಲೂ ಕಾಯುತ್ತಿದ್ದವರಿಗೆ ಆ ಶುಭಗಳಿಗೆ, ಸಂಭ್ರಮದ ಕ್ಷಣ ಈಗ ಹತ್ತಿರವಾಗ್ತಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ವಿಶೇಷವೆಂದರೆ ಜಗದ್ವಿಖ್ಯಾತ ಮಂದಿರ ನಿರ್ಮಾಣದಲ್ಲಿ ಬಹುಪಾಲು ಪಾತ್ರ ಕನ್ನಡಿಗರದ್ದೇ ಇದೆ (Ayodhya Ram Mandir). ಕನ್ನಡಿಗರ ಬುದ್ಧಿಮತ್ತೆ, ಕನ್ನಡಿಗರ ಕೌಶಲ್ಯ, ಕನ್ನಡಿಗರ ವಾಸ್ತುಶಿಲ್ಪಕಲೆಯಲ್ಲಿ ರಾಮ ಮಂದಿರ ಎದ್ದು ನಿಂತಿದೆ. ಕನ್ನಡಿಗರಿಂದಲೇ ಆಮಂತ್ರಣ ಲೋಗೊ, ಕನ್ನಡಕ್ಕೂ, ಕನ್ನಡಿಗರಿಗೂ ಶ್ರೀರಾಮಚಂದ್ರನ ಭವ್ಯ-ದಿವ್ಯ ಮಂದಿರಕ್ಕೂ ಬಿಡದ ನಂಟು ಬೆಸೆದುಕೊಂಡಿದೆ. ಮಂದಿರ ನಿರ್ಮಾಣದಲ್ಲಿ ಕರ್ನಾಟಕದ್ದೇ ಸಿಂಹಪಾಲಿದೆ.
ಶಿಲಾನ್ಯಾಸದಿಂದ ಹಿಡಿದು ಪೂರ್ಣ ನಿರ್ಮಾಣದ ಜವಾಬ್ದಾರಿಯನ್ನ ಕನ್ನಡಿಗರಾದ ಕಂಟ್ರ್ಯಾಕ್ಟರ್ ಮುನಿರಾಜು ಹೊತ್ತಿದಾರೆ. ಮೊದಲ ಹಂತದಿಂದ ಹಿಡಿದು ಪೂರ್ಣ ನಿರ್ಮಾಣದಲ್ಲಿ ಮುನಿರಾಜು ಅವರದೇ ಹೆಚ್ಚಿನ ಪಾತ್ರ ಇರೋದು ಕನ್ನಡಿಗರಿಗೆ ಹೆಮ್ಮೆಯ ಗರಿ ಮೂಡಿಸಿದಂತಾಗಿದೆ. ಅಲ್ಲದೇ ಕರ್ನಾಟದ ಗ್ರೇ ಕಲರ್ ಗ್ರ್ಯಾನೈಟ್ ಸಹ ಮಂದಿರ ನಿರ್ಮಾಣದಲ್ಲಿ ಅತಿ ಹೆಚ್ಚು ಬಳಕೆಯಾಗಿದೆ. ಶ್ರೀರಾಮಮಂದಿರ ನಿರ್ಮಾಣದ ಅವಕಾಶ ಸಿಕ್ಕಿರೋದು ತಮಗೊಂದು ಸದವಕಾಶ ಅಂತಾ ಕನ್ನಡಿಗ ಕಂಟ್ರ್ಯಾಕ್ಟರ್ ಮುನಿರಾಜು ಮತ್ತು ಅವರ ಸಂಗಡಿಗರು ಹೇಳಿಕೊಂಡಿದಾರೆ.
ಈ ಕನ್ನಡಿಗರ ಗುತ್ತಿಗೆದಾರರು ಬೆಂಗಳೂರಿನಲ್ಲಿ ಕಟ್ಟಿದ್ದ ದೇವಸ್ಥಾನವೊಂದನ್ನ ನೋಡಿ ಇವರಿಗೆ ಗೋಪಾಲ್‌ಜಿ ಅನ್ನೋರು ಕರೆ ಮಾಡಿದ್ದರಂತೆ. ಅದಕ್ಕಾಗಿ ಸಾಕಷ್ಟು ಕಲ್ಲುಗಳ ಪರೀಕ್ಷೆಗಳು ನಡೆದಾಗ ಕನ್ನಡದ ಗ್ರಾನೈಟ್‌ಗಳು ಆಯ್ಕೆಯಾಗಿವೆ. ಅಡಿಗಲ್ಲಿನಿಂದ ಹಿಡಿದು ಸಂಪೂರ್ಣ ಮಂದಿರ ನಿರ್ಮಾಣದಲ್ಲಿನ ಪ್ರತಿಯೊಂದು ಹಂತದಲ್ಲೂ ಕನ್ನಡದವರ ಪಾಲಿದೆ.
ಇದನ್ನೂ ಓದಿ: Watch: ಅಯೋಧ್ಯೆ ರಾಮಮಂದಿರ ಹೇಗಿದೆ?; ಇಲ್ಲಿದೆ ರಾಮನ ಭವ್ಯ ದೇಗುಲದ ಒಂದು ನೋಟ
ಇನ್ನು ಪ್ರಾಣ ಪ್ರತಿಷ್ಟಾಪನೆಗೆ ಮುಹೂರ್ತ ನಿಗದಿ ಮಾಡಿದ್ದೂ ಕರ್ನಾಟಕದವರೇ ಅನ್ನೋ ಮಾಹಿತಿ ಗೊತ್ತಾಗಿದೆ. ಜನವರಿ 22ರಂದು ಬಾಲರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗ್ತಿದೆ. ಇದಕ್ಕೆ 2023ರ ಏಪ್ರಿಲ್ನಲ್ಲೇ ಮುಹೂರ್ತ ನಿಗದಿ ಆಗಿತ್ತು. ಬೆಳಗಾವಿಯ ನವ ಬೃಂದಾವನ ನಿವಾಸಿಯಾಗಿರುವ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ ಅವರೇ ಮೂಹರ್ತ ನಿಗದಿ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಅವರು ಬೆಳಗಾವಿಯಿಂದಲೇ ಮುಹೂರ್ತ ನಿಗದಿಯಾಗಿದ್ದು ಇಡೀ ರಾಜ್ಯದ ಜನ ಹೆಮ್ಮೆ ಪಡುವ ವಿಚಾರ ಅಂತ ತಿಳಿಸಿದ್ದಾರೆ.
ಮಂದಿರದ ಬಹುಪಾಲು ಕಾಮಗಾರಿ ಮುಗಿದಿದೆ. ಶತಶತಮಾನಗಳಿಂದಲೂ ಹಿಂದುಗಳು ಈ ಮಂದಿರ ನಿರ್ಮಾಣದ ಕನಸು ಕಾಣುತ್ತಿದ್ದರು. ಅದೀಗ ನನಸಾಗಿದೆ. ಶ್ರೀರಾಮಮಂದಿರ ನಿರ್ಮಾಣದ ಇತಿಹಾಸದ ಪುಟಗಳಲ್ಲಿ ಕನ್ನಡಗರ ಹೆಸರು ಅಚ್ಚಳಿಯದೇ ಉಳಿಯಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ