ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; 99 ಅಭ್ಯರ್ಥಿಗಳ ಹೆಸರು ಘೋಷಣೆ

Maharashtra assembly elections, BJP first list release: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ 99 ಅಭ್ಯರ್ಥಿಗಳಿರುವ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನಾಗಪುರ್ ಸೌತ್ ವೆಸ್ಟ್ ಕ್ಷೇತ್ರದಿಂದ ದೇವೇಂದ್ರ ಫಡ್ನವಿಸ್ ಮತ್ತೆ ಸ್ಪರ್ಧಿಸುತ್ತಿದ್ಧಾರೆ. 2013ರಿಂದಲೂ ಅವರು ಈ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ನವೆಂಬರ್ 20ರಂದು ಮತದಾನವಾಗಲಿದ್ದು, 23ಕ್ಕೆ ಮತ ಎಣಿಕೆ ನಡೆಯಲಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; 99 ಅಭ್ಯರ್ಥಿಗಳ ಹೆಸರು ಘೋಷಣೆ
ದೇವೇಂದ್ರ ಫಡ್ನವಿಸ್
Follow us
|

Updated on:Oct 20, 2024 | 4:22 PM

ಮುಂಬೈ, ಅಕ್ಟೋಬರ್ 20: ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 99 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. 288 ಸ್ಥಾನಗಳಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ, ಶಿವಸೇನಾ (ಶಿಂದೆ ಬಣ) ಮತ್ತು ಎನ್​ಸಿಪಿ (ಅಜಿತ್ ಪವಾರ್) ಪಕ್ಷಗಳು ಮಹಾಯುತಿ ಮೈತ್ರಿಕೂಟವಾಗಿ ಕಣಕ್ಕಿಳಿದಿವೆ. ಈ 288 ಸ್ಥಾನಗಳ ಪೈಕಿ 260 ಸ್ಥಾನಗಳಿಗೆ ಈ ಮೈತ್ರಿಕೂಟ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಆಗಿದೆ. ಇನ್ನುಳಿದ 28 ಸ್ಥಾನಗಳಿಗೆ ಮಾತುಕತೆ ನಡೆಯುತ್ತಿದೆ.

ಮೂಲಗಳ ಪ್ರಕಾರ 260 ಸ್ಥಾನಗಳಲ್ಲಿ ಬಿಜೆಪಿಗೆ 142 ಕ್ಷೇತ್ರಗಳು ಹೋಗಿವೆ. ಶಿವಸೇನಾ ಮತ್ತು ಎನ್​ಸಿಪಿ ಪಕ್ಷಗಳಿಗೆ ಕ್ರಮವಾಗಿ 66 ಮತ್ತು 52 ಕ್ಷೇತ್ರಗಳು ಸಿಕ್ಕಿವೆ ಎನ್ನಲಾಗಿದೆ. ಇನ್ನುಳಿದ 28 ಕ್ಷೇತ್ರಗಳನ್ನೂ ಶೀಘ್ರದಲ್ಲೇ ಹಂಚಿಕೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಸದ್ಯ 99 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗಪುರ್ ಸೌತ್ ವೆಸ್ಟ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾನ್​ಕುಲೆ ಅವರು ಕಾಮಠಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಚಿವರಾದ ಗಿರೀಶ್ ಮಹಾಜನ್ ಅವರಿಗೆ ಜಾಮ್ನರ್, ಸುಧೀರ್ ಮುಂಗಾಂತಿವಾರ್ ಅವರಿಗೆ ಬಲ್ಲಾರ್​ಪುರ್, ಶ್ರೀಜಯ ಅಶೋಕ್ ಚವಾಣ್ ಅವರಿಗೆ ಭೋಕರ್, ಆಶೀಶ್ ಶೆಲಾರ್ ಅವರಿಗೆ ವಾಂದ್ರೆ ವೆಸ್ಟ್, ಮಂಗಲ್ ಪ್ರಭಾತ್ ಲೋಧಾ ಅವರಿಗೆ ಮಲಬಾರ್ ಹಿಲ್, ರಾಹುಲ್ ನರ್ವೇಕರ್ ಅವರಿಗೆ ಕೊಲಾಬ, ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಅವರಿಗೆ ಸತಾರ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಹೆಚ್ಚು ಮಕ್ಕಳನ್ನು ಹೊಂದುವಂತೆ ಯುವಕರಿಗೆ ಚಂದ್ರಬಾಬು ನಾಯ್ಡು ಸಲಹೆ

ಚಿಖಲೀ ಕ್ಷೇತ್ರಕ್ಕೆ ಶ್ವೇತಾ ವಿದ್ಯಾಧರ್ ಮಹಾಲೆ, ಫುಲಂಬರಿ ಕ್ಷೇತ್ರಕ್ಕೆ ಅನುರಾಧಾತಾಯ್ ಅತುಲ್ ಚವಾನ್, ಜಿಂತೂರ್ ಕ್ಷೇತ್ರಕ್ಕೆ ಮೇಘನಾ ಬೋರ್ಡಿಕರ್, ಬೋಕರ್ ಕ್ಷೇತ್ರ್ಕಕೆ ಶ್ರೀವಿಜಯಾ ಅಶೋಕ್ ಚವಾಣ್ ಅವರಿಗೂ ಟಿಕೆಟ್ ಸಿಕ್ಕಿದೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಒಟ್ಟಿಗೆ ಈ ಬಾರಿ ವಿಧಾನಸಭಾ ಚುನಾವಣೆಗಳಾಗುತ್ತಿವೆ. ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ. ಜಾರ್ಖಂಡ್​ನಲ್ಲಿ ನವೆಂಬರ್ 13 ಮತ್ತು 20, ಎರಡು ಹಂತದಲ್ಲಿ ಮತದಾನವಾಗುತ್ತಿದೆ. ನವೆಂಬರ್ 23ರಂದು ಎರಡೂ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಇದರ ಜೊತೆಗೆ, ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ದೇಶದ ವಿವಿಧೆಡೆ ಖಾಲಿ ಇರುವ 47ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಿಗೂ ಉಪಚುನಾವಣೆಗಳು ನಡೆಯುತ್ತಿವೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯ ಮೆಚ್ಚಿ, 100 ರೂ. ಕಳುಹಿಸಿದ ಒಡಿಶಾ ಮಹಿಳೆ, ಮೋದಿ ಭಾವುಕ ಪೋಸ್ಟ್​

288 ಸ್ಥಾನಗಳಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ, ಎನ್​ಸಿಪಿ, ಶಿವಸೇನಾ ಪಕ್ಷಗಳ ಮೈತ್ರಿಕೂಟ ಅಧಿಕಾರದಲ್ಲಿದೆ. ಶಿವಸೇನೆಯ ಏಕನಾಥ್ ಶಿಂದೆ ಸಿಎಂ ಆಗಿದ್ದರೆ, ಬಿಜೆಪಿಯ ದೇವೇಂದ್ರ ಫಡ್ನವಿಸ್ ಡಿಸಿಎಂ ಆಗಿದ್ದಾರೆ. ಬಿಜೆಪಿ 102, ಎನ್​ಸಿಪಿ 40 ಮತ್ತು ಶಿವಸೇನಾ 38 ಶಾಸಕರನ್ನು ಹೊಂದಿವೆ. ಅತ್ತ, ಉದ್ಧವ್ ಠಾಕ್ರೆ ಬಣದ ಶಿವಸೇನಾ, ಶರದ್ ಪವಾರ್ ಬಣದ ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಮತ್ತೊಂದು ಮೈತ್ರಿ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Sun, 20 October 24

ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ