ಪ್ರಧಾನಿ ಮೋದಿ ಕಾರ್ಯ ಮೆಚ್ಚಿ, 100 ರೂ. ಕಳುಹಿಸಿದ ಒಡಿಶಾ ಮಹಿಳೆ, ಮೋದಿ ಭಾವುಕ ಪೋಸ್ಟ್
ಪ್ರಧಾನಿ ಮೋದಿ ಕಾರ್ಯ ಮೆಚ್ಚಿ ಒಡಿಶಾದ ಮಹಿಳೆಯೊಬ್ಬರು 100 ರೂ. ಕಳುಹಿಸಿರುವ ಘಟನೆ ನಡೆದಿದೆ. ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಮೋದಿಯ ಕಾರ್ಯವನ್ನು ಹಲವು ಮಂದಿ ಶ್ಲಾಘಿಸುತ್ತಿದ್ದಾರೆ. ಒಡಿಶಾದ ಸುಂದರ್‌ಗಢದ ಮಹಿಳೆಯ ಪ್ರೀತಿಯ ಕಂಡು ಭಾವುಕರಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಜೈ ಪಾಂಡಾ, ಮಹಿಳೆಯ ಚಿತ್ರಗಳನ್ನು ಹಂಚಿಕೊಳ್ಳುವಾಗ, ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಬುಡಕಟ್ಟು ಮಹಿಳೆಯನ್ನು ಭೇಟಿಯಾದರು. ಈ ಆದಿವಾಸಿ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು 100 ರೂಪಾಯಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇದು ಅಗತ್ಯವಿಲ್ಲ ಎಂದು ಹೇಳಿದರೂ ಕೂಡ ಅವರು ನಮ್ಮ ಮಾತು ಕೇಳಲಿಲ್ಲ, ಬಳಿಕ ಆ ನೂರು ರೂ. ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.
Very touched by this affection. I bow to our Nari Shakti for always blessing me. Their blessings inspire me to keep working to build a Viksit Bharat. https://t.co/Iw8m51zagY
— Narendra Modi (@narendramodi) October 19, 2024
ಮೋದಿ ಭಾವುಕ ಟ್ವೀಟ್ ಇದು ಒಡಿಶಾ ಹಾಗೂ ಭಾರತದಲ್ಲಾಗುತ್ತಿರುವ ಬದಲಾವಣೆಯ ಪ್ರತಿಬಿಂಬವಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಮಾಡಿರುವ ಟ್ವೀಟ್ಗೆ ಮೋದಿ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಆಶೀರ್ವದಿಸಿದ ಮಹಿಳಾ ಶಕ್ತಿಗೆ ನಾನು ತಲೆಬಾಗುತ್ತೇನೆ. ಈ ಆಶೀರ್ವಾದವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಿಲು ನನಗೆ ಶಕ್ತಿ ನೀಡುತ್ತದೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ