AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಯುಪಿಐ ಸಿಸ್ಟಂ ಅಳವಡಿಕೆಗೆ ಮಾಲ್ಡೀವ್ಸ್ ಸಜ್ಜು; ಅಧ್ಯಕ್ಷ ಮುಯಿಝು ಘೋಷಣೆ

Maldives to implement UPI system: ಭಾರತದಲ್ಲಿ ಪ್ರಬಲವಾಗಿರುವ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಬಗ್ಗೆ ಹಲವು ದೇಶಗಳು ಆಸಕ್ತವಾಗಿವೆ. ಹಣಕಾಸು ವ್ಯವಸ್ಥೆಯಲ್ಲಿ ತೊಡಕು ಅನುಭವಿಸುತ್ತಿರುವ ಮಾಲ್ಡೀವ್ಸ್ ದೇಶವು ಭಾರತದ ಯುಪಿಐ ಸಿಸ್ಟಂ ಅನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಈ ವಿಚಾರವನ್ನು ಪ್ರಕಟಿಸಿದ್ದಾರೆ.

ಭಾರತದ ಯುಪಿಐ ಸಿಸ್ಟಂ ಅಳವಡಿಕೆಗೆ ಮಾಲ್ಡೀವ್ಸ್ ಸಜ್ಜು; ಅಧ್ಯಕ್ಷ ಮುಯಿಝು ಘೋಷಣೆ
ಮೊಹಮದ್ ಮುಯಿಝು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 21, 2024 | 11:02 AM

Share

ನವದೆಹಲಿ, ಅಕ್ಟೋಬರ್ 21: ಜಗತ್ತಿನ ಹಲವು ದೇಶಗಳ ಗಮನ ಸೆಳೆದಿರುವ, ಮತ್ತು ಕೆಲ ದೇಶಗಳಲ್ಲಿ ಈಗಾಗಲೇ ಅಳವಡಿಕೆ ಆಗಿರುವ ಭಾರತದ ಪೇಮೆಂಟ್ ಸಿಸ್ಟಂ ಅದ ಯುಪಿಐ ಅನ್ನು ಮಾಲ್ಡೀವ್ಸ್ ಕೂಡ ಅಪ್ಪಿಕೊಂಡಿದೆ. ಹಣಕಾಸು ವಹಿವಾಟು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಯೂನಿಫೈಡ್ ಪೇಮೆಂಟ್ ಇಂಟರ್​​ಫೇಸ್ ಅನ್ನು ಜಾರಿ ಮಾಡುತ್ತಿರುವುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಹೇಳಿದ್ದಾರೆ. ಆ ದೇಶದ ಸಂಪುಟದಿಂದ ಈ ಹಿಂದೆ ಯುಪಿಐ ಅಳವಡಿಕೆಗೆ ಶಿಫಾರಸು ಮಾಡಲಾಗಿತ್ತು. ಈಗ ಅಧ್ಯಕ್ಷರು ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಭಾರತದ ಯುಪಿಐ ಅಳವಡಿಕೆಯಿಂದ ಹಣಕಾಸು ಒಳಗೊಳ್ಳುವಿಕೆ, ವಹಿವಾಟು ಕ್ಷಮತೆ ಹೆಚ್ಚಿಸಬಹುದು, ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಉನ್ನತೀಕರಿಸಬಹುದು. ಹೀಗಾಗಿ, ಯೂನಿಫೈಡ್ ಪೇಮೆಂಟ್ ಇಂಟರ್​ಫೇಸ್ ಸಿಸ್ಟಂ ಅನ್ನು ಅಳವಡಿಸುವುದು ಉತ್ತಮ ಎಂದು ಮಾಲ್ಡೀವ್ಸ್​ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು ಪ್ರಸ್ತಾವನೆ ಮಾಡಿದ್ದರು. ಇತ್ತೀಚೆಗೆ ಅಲ್ಲಿನ ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಪರಿಗಣಿಸಿ ಅಂಗೀಕಾರ ನೀಡಿತ್ತು. ಈಗ ಅಧ್ಯಕ್ಷರು ಅಧಿಕೃತವಾಗಿ ಯುಪಿಐ ವ್ಯವಸ್ಥೆ ಜಾರಿ ಮಾಡಲಾಗುತ್ತಿರುವುದನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಟೆಕ್ನಾಲಜಿಯಿಂದ ಪರಿವರ್ತನೆ; ಅಭಿವೃದ್ಧಿಶೀಲ ದೇಶಗಳಿಗೆ ಭಾರತವೇ ಮಾದರಿ: ಪ್ರೊ. ರೋಮರ್

ಇತ್ತೀಚೆಗಷ್ಟೇ, ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅವರು ಭಾರತದ ಹಣಕಾಸು ವಹಿವಾಟು ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಭಾರತದ ಆಧಾರ್, ಯುಪಿಐನಂತಹ ವ್ಯವಸ್ಥೆಯನ್ನು ಇತರ ಅಭಿವೃದ್ದಿಶೀಲ ದೇಶಗಳು ಅನುಕರಿಸಬೇಕು ಎಂದು ಸಲಹೆ ನೀಡಿದ್ದರು.

ಯುಪಿಐ ಜಾರಿಗಾಗಿ ವಿವಿಧ ಕಂಪನಿಗಳ ಸಮೂಹ ರಚಿಸಲಿರುವ ಮಾಲ್ಡೀವ್ಸ್

ಯುಪಿಐ ಅಳವಡಿಕೆ ಆಗಬೇಕಾದರೆ ವಿವಿಧ ಕ್ಷೇತ್ರದ ಸಂಸ್ಥೆಗಳ ನೆಟ್ವರ್ಕ್ ರಚಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಾಲ್ಡೀವ್ಸ್ ಹೆಜ್ಜೆ ಇಡುತ್ತಿದೆ. ಮಾಲ್ಡೀವ್ಸ್​ನ ಬ್ಯಾಂಕುಗಳು, ಟೆಲಿಕಾಂ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಹಣಕಾಸು ತಂತ್ರಜ್ಞಾನ ಕಂಪನಿಗಳ ಒಂದು ಗುಂಪನ್ನು ಅಲ್ಲಿನ ಸರ್ಕಾರ ಸ್ಥಾಪಿಸುತ್ತಿದೆ. ಟ್ರೇಡ್​ನೆಟ್ ಮಾಲ್ಡೀವ್ಸ್ ಕಾರ್ಪೊರೇಶನ್ ಲಿ ಸಂಸ್ಥೆಗೆ ಈ ಕನ್ಸಾರ್ಟಿಯಂನ ಮುಂದಾಳತ್ವ ವಹಿಸಲಾಗಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಭಾರತದಿಂದ ವಾಹನಗಳ ರಫ್ತು ಶೇ. 14ರಷ್ಟು ಹೆಚ್ಚಳ; ಜಾಗತಿಕವಾಗಿ ಮಿಂಚುತ್ತಿರುವ ಮೇಡ್ ಇನ್ ಇಂಡಿಯಾ ವಾಹನಗಳು

ಭಾರತದಲ್ಲಿ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಪ್ರಬಲವಾಗಿದೆ. ಆಧಾರ್​ನಿಂದ ಶುರುವಾಗಿ, ಸಾಕಷ್ಟು ಸ್ತರಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಇತರ ದೇಶಗಳಲ್ಲೂ ಅಳವಡಿಕೆಯಾಗಲು ಭಾರತ ಬಯಸುತ್ತಿದೆ. ಹಲವು ದೇಶಗಳು ಇದಕ್ಕೆ ಆಸಕ್ತಿ ತೋರಿವೆ. ಹಣಕಾಸು ವ್ಯವಸ್ಥೆಯಲ್ಲಿ ತೊಡಕು ಅನುಭವಿಸುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಮಾಲ್ಡೀವ್ಸ್ ಅಧ್ಯಕ್ಷರು ಇತ್ತೀಚೆಗೆ ಭಾರತದ ಭೇಟಿಗೆ ಬಂದಾಗ ನಡೆದ ಮಾತುಕತೆಗಳು ಫಲಪ್ರದವಾಗಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ