ಬಾಬಾ ಸಿದ್ದಿಕಿ ಹತ್ಯೆ ಆರೋಪಿ ಅಪ್ರಾಪ್ತನಲ್ಲ, ಸತ್ಯ ಹೊರಬಿದ್ದಿದ್ಹೇಗೆ?
ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಧರ್ಮರಾಜ್ ಕಶ್ಯಪ್ ಅಪ್ರಾಪ್ತನಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿಯ ಮೂಳೆ ಪರೀಕ್ಷೆ(Bone Ossification Test)ಯಲ್ಲಿ ಆತ ಅಪ್ರಾಪ್ತನಲ್ಲ ಎಂಬುದು ದೃಢಪಟ್ಟಿದೆ. ನ್ಯಾಯಾಲಯದ ಆದೇಶದ ಮೇರೆಗೆ ಈ ಪರೀಕ್ಷೆ ನಡೆಸಲಾಗಿದ್ದು, ಭಾನುವಾರ ತಡರಾತ್ರಿ ವರದಿ ಹೊರಬಿದ್ದಿದೆ.
ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಧರ್ಮರಾಜ್ ಕಶ್ಯಪ್ ಅಪ್ರಾಪ್ತನಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿಯ ಮೂಳೆ ಪರೀಕ್ಷೆ(Bone Ossification Test)ಯಲ್ಲಿ ಆತ ಅಪ್ರಾಪ್ತನಲ್ಲ ಎಂಬುದು ದೃಢಪಟ್ಟಿದೆ. ನ್ಯಾಯಾಲಯದ ಆದೇಶದ ಮೇರೆಗೆ ಈ ಪರೀಕ್ಷೆ ನಡೆಸಲಾಗಿದ್ದು, ಭಾನುವಾರ ತಡರಾತ್ರಿ ವರದಿ ಹೊರಬಿದ್ದಿದೆ.
ನ್ಯಾಯಾಲಯಕ್ಕೆ ಹಾಜರಾದಾಗ, ಧರ್ಮರಾಜ್ ಕಶ್ಯಪ್ ತನ್ನ ವಕೀಲರ ಮೂಲಕ ತಾನು ಅಪ್ರಾಪ್ತ ಎಂದು ಹೇಳಿಕೊಂಡಿದ್ದ. ಆತನಿಗೆ 19 ವರ್ಷ, ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಲಯವು ಧರ್ಮರಾಜ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತು.
ಭಾನುವಾರವೇ ಧರ್ಮರಾಜ್ ಪರೀಕ್ಷೆ ನಡೆದಿದ್ದು, ಅದರ ವರದಿಯೂ ತಡರಾತ್ರಿ ಬಂದಿತ್ತು. ಧರ್ಮರಾಜ್ ಅವರನ್ನು ಅಕ್ಟೋಬರ್ 21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇವರೊಂದಿಗೆ ಗುರ್ಮೈಲ್ ಸಿಂಗ್ ಕೂಡ ಇದೇ 21ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಮತ್ತಷ್ಟು ಓದಿ: ಬಾಬಾ ಸಿದ್ದಿಕಿ ಭೀಕರ ಹತ್ಯೆ: 3ನೇ ಆರೋಪಿ ಪ್ರವೀಣ್ ಲೋನಕರ ಬಂಧಿಸಿದ ಮುಂಬೈ ಪೊಲೀಸ್
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭದ್ರತೆಗೆ ನಿಯೋಜನೆಗೊಂಡಿದ್ದ ಮೂವರು ಕಾನ್‌ಸ್ಟೆಬಲ್‌ಗಳು ಇಬ್ಬರು ಶೂಟರ್‌ಗಳನ್ನು ಸ್ಥಳದಲ್ಲೇ ಹಿಡಿದಿದ್ದರು. ಹರಿಯಾಣ ನಿವಾಸಿ ಗುರ್ಮೆಲ್ ಬಲ್ಜೀತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಎಂದು ಗುರುತಿಸಲಾಗಿದೆ.
ಮೂರನೇ ಆರೋಪಿ ಪ್ರವೀಣ್ ಲೋಂಕರ್‌ನನ್ನು ಭಾನುವಾರ ರಾತ್ರಿ ಪುಣೆಯಲ್ಲಿ ಬಂಧಿಸಲಾಗಿದೆ. ಪೊಲೀಸರು ಶುಭಂ ಲೋಂಕರ್, ಶಿವಕುಮಾರ್ ಗೌತಮ್ ಮತ್ತು ಜೀಶನ್ ಅಖ್ತರ್ ಅವರನ್ನು ಹುಡುಕುತ್ತಿದ್ದಾರೆ. ಪ್ರವೀಣ್ ಮತ್ತು ಶುಭಂ ಲೋಂಕರ್ ಸಹೋದರರು. ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಟ್ಯಾಗ್ ಮಾಡುವ ಮೂಲಕ ಶುಭಂ ಲೋಂಕರ್ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಬರೆದು ಬಾಬಾ ಸಿದ್ದಿಕಿ ಹತ್ಯೆಯ ಹೊಣೆಹೊತ್ತಿದ್ದಾರೆ.
ಮೂಲಗಳ ಪ್ರಕಾರ, ಪ್ರವೀಣ್ ಮತ್ತು ಶುಭಂ ಪ್ರಮುಖ ಸಂಚುಕೋರರು ಎಂದು ಪರಿಗಣಿಸಲಾಗಿದೆ. ಇಬ್ಬರೂ ಉಳಿದ 4 ಆರೋಪಿಗಳನ್ನು ಸೇರಿಸಿಕೊಂಡಿದ್ದರು. ಬಾಬಾ ಸಿದ್ದಿಕಿ ಮೇಲೆ ಆರು ಗುಂಡುಗಳನ್ನು ಹಾರಿಸಲಾಗಿತ್ತು ಅದರಲ್ಲಿ ಮೂರು ಗುಂಡುಗಳು ಅವರಿಗೆ ತಗುಲಿದ್ದವು.
ಗಾಯಗೊಂಡ ಸ್ಥಿತಿಯಲ್ಲಿ ಬಾಬಾ ಸಿದ್ದಿಕಿಯನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಪ್ರಾಥಮಿಕ ಪರೀಕ್ಷೆಯ ನಂತರ ವೈದ್ಯರು ಅವರು ಸಾವನ್ನಪ್ಪಿದ್ದಾರೆ.ಲಿವುಡ್ ಇಂಡಸ್ಟ್ರಿಯ ಅನೇಕ ಪ್ರಸಿದ್ಧ ವ್ಯಕ್ತಿಗಳು ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ