ಸಿದ್ದಿಕ್ ಕಪ್ಪನ್​​ಗೆ ಜಾಮೀನು, ಎರಡು ವರ್ಷಗಳ ನಂತರ ಲಕ್ನೋ ಜೈಲಿನಿಂದ ಬಂಧಮುಕ್ತರಾಗಲಿದ್ದಾರೆ ಕೇರಳದ ಪತ್ರಕರ್ತ

|

Updated on: Feb 01, 2023 | 11:07 PM

ಕೇರಳದ ಮಲಪ್ಪುರಂ ನಿವಾಸಿ, ಕಪ್ಪನ್ ಅಕ್ಟೋಬರ್ 5, 2020 ರಂದು ಉತ್ತರ ಪ್ರದೇಶದ ಹಾಥರಸ್​​ನಲ್ಲಿ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಹೋಗುತ್ತಿದ್ದಾಗ, ಅವರನ್ನು ಮಥುರಾ ಟೋಲ್ ಪ್ಲಾಜಾದಿಂದ ಇತರ ಮೂವರೊಂದಿಗೆ ಬಂಧಿಸಲಾಯಿತು.

ಸಿದ್ದಿಕ್ ಕಪ್ಪನ್​​ಗೆ ಜಾಮೀನು, ಎರಡು ವರ್ಷಗಳ ನಂತರ ಲಕ್ನೋ ಜೈಲಿನಿಂದ ಬಂಧಮುಕ್ತರಾಗಲಿದ್ದಾರೆ ಕೇರಳದ ಪತ್ರಕರ್ತ
ಸಿದ್ದಿಕ್ ಕಪ್ಪನ್
Follow us on

ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್  (Siddique Kappan)ಅವರನ್ನು ಲಕ್ನೋ ಜೈಲಿನಿಂದ ಬಿಡುಗಡೆ ಮಾಡಲು ಲಕ್ನೋ ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ಆದೇಶಕ್ಕೆ ಸಹಿ ಹಾಕಿದೆ. 2020ರ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯ (ED) ದಾಖಲಿಸಿದ ಮನಿ ಲಾಂಡರಿಂಗ್ ತಡೆ ಕಾಯ್ದೆ (Prevention of Money Laundering Act- PMLA) ಅಡಿಯಲ್ಲಿ ಬಂಧಿತರಾಗಿರುವ ಕಪ್ಪನ್ ಅವರು ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾರಾಗೃಹದಲ್ಲಿದ್ದ ನಂತರ ಗುರುವಾರ ಬೆಳಿಗ್ಗೆ ಲಕ್ನೋ ಜೈಲಿನಿಂದ ಬಂಧಮುಕ್ತರಾಗಲಿದ್ದಾರೆ. ಸಿದ್ದಿಕ್ ಕಪ್ಪನ್ ಬಿಡುಗಡೆ ಆದೇಶಕ್ಕೆ ಸೆಷನ್ಸ್ ಕೋರ್ಟ್ ಸಹಿ ಹಾಕಿದೆ. ಅವರು ಗುರುವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಕಪ್ಪನ್ ಅವರ ವಕೀಲ ಇಶಾನ್ ಬಾಘೆಲ್ ಬುಧವಾರ ಹೇಳಿದ್ದಾರೆ.  ಬಿಡುಗಡೆ ಆದೇಶದಲ್ಲಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಜಯ್ ಶಂಕರ್ ಪಾಂಡೆ ಅವರು ಲಕ್ನೋ ಜೈಲು ಅಧೀಕ್ಷಕರಿಗೆ ಯಾವುದೇ ಪ್ರಕರಣದಲ್ಲಿ ಕಪ್ಪನ್ ಇಲ್ಲ. ಹಾಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.

ಡಿಸೆಂಬರ್ 23, 2022 ರಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು PMLA ಪ್ರಕರಣದಲ್ಲಿ ಕಪ್ಪನ್‌ಗೆ ಜಾಮೀನು ನೀಡಿತ್ತು.
ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಇದೀಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಗ್ರಹಿಸಿದೆ ಎನ್ನಲಾದ ₹ 1.36 ಕೋಟಿ ಮೊತ್ತದ ಅಕ್ರಮ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಪ್ಪನ್‌ಗೆ ಯಾವುದೇ ನಿರ್ದಿಷ್ಟ ಪಾತ್ರವನ್ನು ಇಡಿ ತನಿಖೆಯಲ್ಲಿ ತೋರಿಸಿಲ್ಲ ಎಂದು ಗಮನಿಸಿದ ನ್ಯಾಯಮೂರ್ತಿ ಡಿಕೆ ಸಿಂಗ್ ಅವರ ಏಕ ಪೀಠವು ಪತ್ರಕರ್ತನಿಗೆ ಜಾಮೀನು ನೀಡಿದೆ.

ಸೆಪ್ಟೆಂಬರ್ 9, 2022 ರಂದು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕಪ್ಪನ್‌ಗೆ ಜಾಮೀನು ನೀಡಿತು. ಆದರೆ, ಬಾಕಿ ಉಳಿದಿರುವ ಪಿಎಂಎಲ್‌ಎ ಪ್ರಕರಣದಿಂದಾಗಿ ಅವರು ಜೈಲಿನಲ್ಲಿದ್ದರು.

ಇದನ್ನೂ ಓದಿ: Middleclass Hashtag Trending : ಅಂತೂಇಂತೂ ಮಧ್ಯಮವರ್ಗಕ್ಕೆ ಸುಖವಿಲ್ಲ: ಈಡೇರದ ತೆರಿಗೆ ರಿಯಾಯ್ತಿ ನಿರೀಕ್ಷೆ, ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ

ಕೇರಳದ ಮಲಪ್ಪುರಂ ನಿವಾಸಿ, ಕಪ್ಪನ್ ಅಕ್ಟೋಬರ್ 5, 2020 ರಂದು ಉತ್ತರ ಪ್ರದೇಶದ ಹಾಥರಸ್​​ನಲ್ಲಿ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಹೋಗುತ್ತಿದ್ದಾಗ, ಅವರನ್ನು ಮಥುರಾ ಟೋಲ್ ಪ್ಲಾಜಾದಿಂದ ಇತರ ಮೂವರೊಂದಿಗೆ ಬಂಧಿಸಲಾಯಿತು.

ಆರೋಪಿಗಳು ಪಿಎಫ್‌ಐನ ಸಕ್ರಿಯ ಸದಸ್ಯರಾಗಿದ್ದು, ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪತ್ರಕರ್ತನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಯುಎಪಿಎ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ