ಮಹಾರಾಷ್ಟ್ರ(Maharashtra) ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಬಾಲು ಧನೋರ್ಕರ್(Balu Dhanorkar) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿ 48 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪ್ರತಿಭಾ ಧನೋರ್ಕರ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಗಾಗಿ ಕಳೆದ ವಾರ ಅವರನ್ನು ನಾಗ್ಪುರ ಮೂಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಯಿತು ಎಂದು ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.
ಧನೋರ್ಕರ್ ಅವರು ಚಂದ್ರಾಪುರ ಜಿಲ್ಲೆಯಲ್ಲಿ ಬಾಳಾಸಾಹೇಬ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು 2014 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು.
ಆದಾಗ್ಯೂ, ಅವರು ಸಾಂಪ್ರದಾಯಿಕವಾಗಿ ಬಿಜೆಪಿಯ ಹಂಸರಾಜ್ ಅಹಿರ್ ಸ್ಪರ್ಧಿಸುತ್ತಿದ್ದ ಚಂದ್ರಾಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದರು.
ಮತ್ತಷ್ಟು ಓದಿ: Vallabhbhai Vaghasia Death: ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ಕಾರು ಅಪಘಾತದಲ್ಲಿ ಸಾವು
ಧನೋರ್ಕರ್ ಕಾಂಗ್ರೆಸ್ ಸೇರಿ ಅಹಿರ್ ಅವರನ್ನು ಸೋಲಿಸಿದರು. ಅವರ ಪತ್ನಿ 2019 ರಲ್ಲಿ ವರೋರಾ-ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.ಧರ್ನೋಕರ್ ಅವರ ನಿಧನಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ