Sign In

By signing in or creating an account, you agree with Associated Broadcasting Company's Terms & Conditions and Privacy Policy.

Vallabhbhai Vaghasia Death: ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ಕಾರು ಅಪಘಾತದಲ್ಲಿ ಸಾವು

ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ಅವರ ಕಾರು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ಬಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Vallabhbhai Vaghasia Death: ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ಕಾರು ಅಪಘಾತದಲ್ಲಿ ಸಾವು
ವಲ್ಲಭಭಾಯಿ ವಘಾಸಿಯಾ
Follow us
ಅಕ್ಷಯ್​ ಪಲ್ಲಮಜಲು​​
|

Updated on:May 19, 2023 | 1:16 PM

ಅಮ್ರೇಲಿ: ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ (Vallabhbhai Vaghasia) ಅವರ ಕಾರು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ಬಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಅಪಘಾತ ಗುರುವಾರ ರಾತ್ರಿ ಸಂಭವಿಸಿದೆ ಎಂದು ವಂಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಘಾಸಿಯಾ (69) ಅವರು ಸಾವರಕುಂಡ್ಲಾ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಶಾಸಕರಾಗಿದ್ದರು, ವಿಜಯ್ ರೂಪಾನಿ ಸರ್ಕಾರದ ಮೊದಲ ಅವಧಿಯಲ್ಲಿ ಕೃಷಿ ಮತ್ತು ನಗರ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ ಗ್ರಾಮದಿಂದ ಸಾವರಕುಂಡ್ಲಾಗೆ ಹಿಂತಿರುಗುತ್ತಿದ್ದಾಗ ವಂಡಾ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 8.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅವರ ಜತೆಗೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಲ್ಲಭಭಾಯಿ ವಘಾಸಿಯಾ ಚಲಾಯಿಸುತ್ತಿದ್ದ ಕಾರು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Rattan Lal Kataria Death: ಕೇಂದ್ರದ ಮಾಜಿ ಸಚಿವ, ಅಂಬಾಲಾದ ಬಿಜೆಪಿ ಸಂಸದ ರತನ್ ಲಾಲ್ ಕಟಾರಿಯಾ ನಿಧನ

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಬೆಂಬಲಿಗರು ಆಸ್ಪತ್ರೆಯಲ್ಲಿ ಜಮಾಯಿಸಿದ್ದಾರೆ. ವಲ್ಲಭಭಾಯಿ ವಘಾಸಿಯಾ ಅವರು ನುರಿತ ಸಂಘಟಕರಾಗಿ, ಜನನಾಯಕರಾಗಿ ದುಡಿದು ಅಮರೇಲಿ ಜನತೆಗೆ ಸೇವೆ ಸಲ್ಲಿಸಿದ ನಾಯಕ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾವರಕುಂಡ್ಲದ ಬಿಜೆಪಿ ಶಾಸಕ ಮಹೇಶ ಕಸ್ವಾಳ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:50 am, Fri, 19 May 23