Gujarat: ಗುಜರಾತ್ನ ಕೃಷ್ಣ ಸಾಗರ ಕೆರೆಯಲ್ಲಿ ಐವರು ಅಪ್ರಾಪ್ತ ಮಕ್ಕಳು ಜಲಸಮಾಧಿ
ಗುಜರಾತ್(Gujarat) ನಲ್ಲಿ ಐವರು ಅಪ್ರಾಪ್ತ ಮಕ್ಕಳು ಜಲಸಮಾಧಿಯಾಗಿದ್ದಾರೆ, ಕೆರೆಯಲ್ಲಿ ಈಜುತ್ತಿದ್ದ ವೇಳೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಎಲ್ಲಾ ಐದು ಮಕ್ಕಳು ಮೃತಪಟ್ಟಿದ್ದಾರೆ.

ಗುಜರಾತ್(Gujarat) ನಲ್ಲಿ ಐವರು ಅಪ್ರಾಪ್ತ ಮಕ್ಕಳು ಜಲಸಮಾಧಿಯಾಗಿದ್ದಾರೆ, ಕೆರೆಯಲ್ಲಿ ಈಜುತ್ತಿದ್ದ ವೇಳೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಎಲ್ಲಾ ಐದು ಮಕ್ಕಳು ಮೃತಪಟ್ಟಿದ್ದಾರೆ. ಇಬ್ಬರು ಬಾಲಕರು ಕೃಷ್ಣ ಸಾಗರ ಕೆರೆಯಲ್ಲಿ ಮಧ್ಯಾಹ್ನ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಇತರ ಮೂವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಇಬ್ಬರನ್ನು ರಕ್ಷಿಸಲು ನೀರಿಗೆ ಹಾರಿ ಅವರೂ ಕೂಡ ಪ್ರಾಣಬಿಟ್ಟಿದ್ದಾರೆ. ಮೃತರು ಎಲ್ಲರೂ 16-17 ವರ್ಷದೊಳಗಿನವರಾಗಿದ್ದಾರೆ, ತನಿಖೆ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಪಾಂಡವಪುರ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಜಲ ಸಮಾಧಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, 45 ನಿಮಿಷಗಳ ರಕ್ಷಣಾ ಕಾರ್ಯಾಚರಣೆಯ ನಂತರ ಐದು ಮೃತದೇಹಗಳನ್ನು ಹೊರತೆಗೆಯಲಾಯಿತು. ಸಂಜೆ 4.30ರ ಸುಮಾರಿಗೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ