Bharat Bandh ಮೇ 25ಕ್ಕೆ ಭಾರತ್ ಬಂದ್​​: ಬಂದ್​​ಗೆ ಕರೆ ನೀಡಿದ್ದು ಯಾರು? ಬೇಡಿಕೆಗಳು ಏನು?

ಅದೇ ವೇಳೆ  ಚುನಾವಣಾ ಸಮಯದಲ್ಲಿ ಇವಿಎಂ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗೆ ಮೀಸಲಾತಿ ವಿಚಾರದ ವಿರುದ್ಧವೂ ಬಿಎಎಂಸಿಇಎಫ್  ಪ್ರತಿಭಟನೆ ನಡೆಸುತ್ತಿದೆ.

Bharat Bandh ಮೇ 25ಕ್ಕೆ ಭಾರತ್ ಬಂದ್​​: ಬಂದ್​​ಗೆ ಕರೆ ನೀಡಿದ್ದು ಯಾರು? ಬೇಡಿಕೆಗಳು ಏನು?
ಪ್ರಾತಿನಿಧಿಕ ಚಿತ್ರ
Edited By:

Updated on: May 24, 2022 | 5:46 PM

ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (BAMCEF) ಮೇ 25 ರಂದು ಭಾರತ್ ಬಂದ್‌ಗೆ (Bharat Bandh) ಕರೆ ನೀಡಿದೆ. ಇತರೆ ಹಿಂದುಳಿದ ವರ್ಗಗಳ (OBC) ಜಾತಿ ಆಧಾರಿತ ಜನಗಣತಿಯನ್ನು ಕೇಂದ್ರ ಸರ್ಕಾರ ನಡೆಸದಿರುವುದನ್ನು ವಿರೋಧಿಸಿ ಫೆಡರೇಶನ್ ಕ್ರಮಕ್ಕೆ ಒತ್ತಾಯಿಸಿದೆ. ಅದೇ ವೇಳೆ  ಚುನಾವಣಾ ಸಮಯದಲ್ಲಿ ಇವಿಎಂ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗೆ ಮೀಸಲಾತಿ ವಿಚಾರದ ವಿರುದ್ಧವೂ ಬಿಎಎಂಸಿಇಎಫ್  ಪ್ರತಿಭಟನೆ ನಡೆಸುತ್ತಿದೆ. ಬಂದ್‌ಗೆ ರಾಷ್ಟ್ರೀಯ ಪರಿವರ್ತನ ಮೋರ್ಚಾ, ಭಾರತ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳೊಂದಿಗೆ ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಚಾಲಕ ವಾಮನ್ ಮೇಶ್ರಮ್‌ನಿಂದ ಬೆಂಬಲ ವ್ಯಕ್ತವಾಗಿದೆ.

ಬೇಡಿಕೆಗಳೇನು?

ಚುನಾವಣೆಯಲ್ಲಿ ಇವಿಎಂ ಬಳಕೆ ಬೇಡ

ಇದನ್ನೂ ಓದಿ
Rahul Gandhi: ಒಂದು ವರ್ಗವನ್ನು ಹೊರಗಿಟ್ಟು ಪ್ರಧಾನಿ ಮೋದಿ ಭಾರತದ ದೃಷ್ಟಿಕೋನ ನಿರ್ಮಿಸುತ್ತಿರುವುದು ತಪ್ಪು; ರಾಹುಲ್ ಗಾಂಧಿ ವಾಗ್ದಾಳಿ
Quad Summit 2022 ಕೊವಿಡ್ ಸಾಂಕ್ರಾಮಿಕವನ್ನು ಭಾರತದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮೋದಿಯನ್ನು ಶ್ಲಾಘಿಸಿದ ವಿಶ್ವ ನಾಯಕರು
BharatPe: ಉದ್ಯೋಗಿಗಳು, ಮಾರಾಟಗಾರರನ್ನು ಕಿತ್ತೊಗೆದ ಭಾರತ್​ಪೇ; ಗ್ರೋವರ್​ನಿಂದ ಷೇರುಗಳ ಹಿಂಪಡೆಯಲು ನಿರ್ಧಾರ

ಜಾತಿ ಆಧಾರಿತ ಜನಗಣತಿ

ಖಾಸಗಿ ವಲಯದಲ್ಲಿ SC/ST/OBC ಮೀಸಲಾತಿ

ರೈತರಿಗೆ ಎಂಎಸ್​​ಪಿ ಖಾತರಿ

NRC/CAA/NPR ಅನುಷ್ಠಾನ ಬೇಡ

ಹಳೆಯ ಪಿಂಚಣಿ ಯೋಜನೆ ಪುನರಾರಂಭ

ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಗೆ ಪ್ರತ್ಯೇಕ ಎಲೆಕ್ಟೊರೇಟ್

ಪರಿಸರ ಸಂರಕ್ಷಣೆಯ ನೆಪದಲ್ಲಿ ಬುಡಕಟ್ಟು ಜನರನ್ನು ಸ್ಥಳಾಂತರಿಸಬಾರದು

ಕೊವಿಡ್ ಲಸಿಕೆಯನ್ನು ಆಯ್ಕೆಯನ್ನಾಗಿ  ಮಾಡುವುದು

ಕೊವಿಡ್-19 ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರ ವಿರುದ್ಧ ರಹಸ್ಯವಾಗಿ ಮಾಡಲಾದ ಕಾರ್ಮಿಕ ಕಾನೂನುಗಳ ವಿರುದ್ಧ ರಕ್ಷಣೆ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:37 pm, Tue, 24 May 22