ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಿದ ಬನಾರಸ್​ ಹಿಂದೂ ವಿವಿ ಆಸ್ಪತ್ರೆ ವೈದ್ಯರು; ವೈರಲ್​ ಆದ ಫೋಟೋ ನೋಡಿ ಡೀನ್​ ಕೆಂಡಾಮಂಡಲ

|

Updated on: Mar 18, 2021 | 3:30 PM

ಸೋಮವಾರ ಬೆಳಗ್ಗೆ ಡೆಂಟಲ್​ ರೋಗಿಗೆ ದಂತದ ಸರ್ಜರಿ ಮಾಡುವುದಾಗಿ ಹಿಂದಿನ ದಿನವೇ ನಿರ್ಧರಿಸಲಾಗಿತ್ತು. ಹಾಗೇ, ಸೋಮವಾರ ಸರ್ಜರಿ ಆರಂಭ ಮಾಡಿದ ಕೆಲವೇ ಹೊತ್ತಲ್ಲಿ ಕರೆಂಟ್​ ಹೋಯಿತು. ಇರುವ ಪರ್ಯಾಯ ಮಾರ್ಗಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ.

ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಿದ ಬನಾರಸ್​ ಹಿಂದೂ ವಿವಿ ಆಸ್ಪತ್ರೆ ವೈದ್ಯರು; ವೈರಲ್​ ಆದ ಫೋಟೋ ನೋಡಿ ಡೀನ್​ ಕೆಂಡಾಮಂಡಲ
ಮೊಬ
Follow us on

​ವಾರಾಣಸಿ: ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ಎಸ್​ಎಸ್​ಎಲ್​ ಆಸ್ಪತ್ರೆಯ ವೈದ್ಯರು, ಆರೋಗ್ಯ ಸಿಬ್ಬಂದಿ ಇದೀಗ ಸುದ್ದಿಯಲ್ಲಿದ್ದಾರೆ. ಸರ್ಜರಿ ಮಾಡುತ್ತಿದ್ದಾಗ ಕರೆಂಟ್​ ಹೋಯಿತು ಎಂಬ ಕಾರಣಕ್ಕೆ, ಮೊಬೈಲ್​ ಫ್ಲ್ಯಾಶ್​ ಬೆಳಕಲ್ಲೇ ಶಸ್ತ್ರಚಿಕಿತ್ಸೆ ಮಾಡಿರುವ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್​ ವೈರಲ್ ಆಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂದೂ ಜನರು ಪ್ರಶ್ನಿಸುತ್ತಿದ್ದಾರೆ.

ಇನ್ನು ವೈದ್ಯರು ಮೊಬಲ್​ ಬೆಳಕಲ್ಲಿ ಸರ್ಜರಿ ಮಾಡುತ್ತಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ವಿಶ್ವವಿದ್ಯಾಲಯದ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆ ಸರ್ಜರಿಯಲ್ಲಿ ಪಾಲ್ಗೊಂಡಿದ್ದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಂತ ವಿಜ್ಞಾನ ವಿಭಾಗದ ಡೀನ್ ಪ್ರೊ.ವಿನಯ್​ ಕುಮಾರ್​ ಶ್ರೀವಾಸ್ತವ್​, ಮೊಬೈಲ್​ ಬೆಳಕಲ್ಲಿ ಆಪರೇಶನ್ ಮಾಡಿದ ಎಲ್ಲ ವೈದ್ಯರು, ಸಿಬ್ಬಂದಿಗೂ ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ಕೆಲಸ, ನಿರ್ವಹಣೆ ನಿಮಿತ್ತ ಸರ್ಜಿಕಲ್ ವಿಭಾಗಗಳಲ್ಲಿ ವಿದ್ಯುತ್​ ಕಡಿತ ಆಗಲಿದೆ ಎಂಬ ಬಗ್ಗೆ 15 ದಿನಗಳ ಹಿಂದೆಯೇ ಅಧಿಸೂಚನೆ ನೀಡಲಾಗಿದೆ. ಈ ನೋಟಿಫಿಕೇಶನ್​ ನೀಡಿದ ಬಳಿಕವೂ ಆಪರೇಶನ್​ ಥಿಯೇಟರ್​ ತೆರೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಫೋಟೋಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದು ದೊಡ್ಡ ಅಚಾತುರ್ಯ ಎಂದು ವಿನಯ್​ಕುಮಾರ್​ ಹೇಳಿದ್ದಾರೆ. ವೈದ್ಯರು, ಸಿಬ್ಬಂದಿಯನ್ನು ವಿಚಾರಿಸಲು, ಘಟನೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಅದರ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಮಾಡಿದ್ದು ದಂತ ಶಸ್ತ್ರಚಿಕಿತ್ಸೆ
ವೈದ್ಯರು ಮೊಬೈಲ್ ಫ್ಲ್ಯಾಶ್​​ ಬೆಳಕಲ್ಲಿ ನಡೆಸಿದ್ದು ದಂತ ಶಸ್ತ್ರಚಿಕಿತ್ಸೆ ಎಂಬುದು ಫೋಟೋ ನೋಡಿದರೆ ಗೊತ್ತಾಗುತ್ತಿದೆ. ಸೋಮವಾರ ಬೆಳಗ್ಗೆ ಡೆಂಟಲ್​ ರೋಗಿಗೆ ದಂತದ ಸರ್ಜರಿ ಮಾಡುವುದಾಗಿ ಹಿಂದಿನ ದಿನವೇ ನಿರ್ಧರಿಸಲಾಗಿತ್ತು. ಹಾಗೇ, ಸೋಮವಾರ ಸರ್ಜರಿ ಆರಂಭ ಮಾಡಿದ ಕೆಲವೇ ಹೊತ್ತಲ್ಲಿ ಕರೆಂಟ್​ ಹೋಯಿತು. ಇರುವ ಪರ್ಯಾಯ ಮಾರ್ಗಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಬೇಕಾಯಿತು. ಸಂಪೂರ್ಣ ಸರ್ಜರಿಯೂ ಮೊಬೈಲ್​ ಬೆಳಕಲ್ಲೇ ನಡೆದಿದೆ ಎಂದು ದಂತ ವಿಭಾಗದ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಚಲಿಸುತ್ತಿದ್ದ ಕಾರಿನಿಂದ ದೊಪ್ಪನೆ ರಸ್ತೆಗೆ ಬಿದ್ದ ಮಗು; ಮುಂದೇನಾಯ್ತು ನೀವೇ ನೋಡಿ..

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !

 

Published On - 3:28 pm, Thu, 18 March 21