ವರ್ಷದ ಆರಂಭದಲ್ಲಿ 2021ರ ಬ್ಯಾಂಕ್ಗಳ ರಜಾದಿನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿತ್ತು. ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ಗಳು ಜನರ ಸೇವೆಗೆ ಲಭ್ಯವಿರುವುದಿಲ್ಲ ಎಂದು ಅಧಿಕೃತ ಪ್ರಕಟಣೆ ಕೊಟ್ಟಿತ್ತು. ಅದರಂತೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್ಗಳು 12 ರಜಾದಿನಗಳನ್ನು ಹೊಂದಿದೆ. ನಾಲ್ಕು ಭಾನುವಾರಗಳು, ಎರಡು ಶನಿವಾರಗಳ ಜೊತೆಗೆ ಆರು ಇತರೆ ರಜಾದಿನಗಳನ್ನು ಭಾರತದ ವಿವಿಧ ಪ್ರದೇಶದ ಬ್ಯಾಂಕ್ಗಳು ಪಡೆಯಲಿವೆ.
ಆರ್ಬಿಐ ಸೂಚನೆಯಂತೆ, ಸಾರ್ವಜನಿಕ ರಜಾದಿನಗಳಂದು ಬ್ಯಾಂಕ್ಗಳು ಮುಚ್ಚಿರಲಿವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರುತ್ತದೆ. ಪ್ರಾದೇಶಿಕವಾಗಿ ರಜಾದಿನಗಳಲ್ಲಿ ವ್ಯತ್ಯಾಸ ಇರುತ್ತದೆ. ಗಣರಾಜ್ಯೋತ್ಸವ (ಜ.26), ಸ್ವಾತಂತ್ರ್ಯ ದಿನಾಚರಣೆ (ಆ.15), ಗಾಂಧಿ ಜಯಂತಿ (ಅ.2), ಕ್ರಿಸ್ಮಸ್ (ಡಿ.25) ಇಂತಹ ರಜಾದಿನಗಳು ಇಡೀ ದೇಶಕ್ಕೆ ಒಂದೇ ಆಗಿರುತ್ತದೆ. ಆದರೆ, ಉಳಿದ ಕೆಲವು ಹಬ್ಬಗಳಿಗೆ ಪ್ರದೇಶಾವಾರು ವ್ಯತ್ಯಾಸವಿರುತ್ತದೆ.
ಫೆಬ್ರವರಿ ತಿಂಗಳ ಕೆಲವು ದಿನಗಳಲ್ಲಿ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳಂದು ಬ್ಯಾಂಕ್ ರಜೆಯಾಗಿರುತ್ತದೆ. ಜೊತೆಗೆ, ಆರು ಪ್ರಾದೇಶಿಕ ರಜೆಗಳು ಕೂಡ ಬ್ಯಾಂಕ್ಗಳಿಗಿವೆ. ಆದರೆ, ಈ ರಜೆಗಳು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ.
ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ಪಟ್ಟಿ:
ಫೆಬ್ರವರಿ 12: ಲೋಸರ್/ ಸೋನಮ್ ಲೊಚ್ಚರ್ (ಗ್ಯಾಂಗ್ಟಾಕ್)
ಫೆಬ್ರವರಿ 15: Lui-Ngai-Ni (ಇಂಫಾಲ್)
ಫೆಬ್ರವರಿ 16: ಸರಸ್ವತಿ ಪೂಜಾ/ ಶ್ರೀ ಪಂಚಮಿ (ಅಗರ್ತಲ, ಭುವನೇಶ್ವರ್ ಮತ್ತು ಕೋಲ್ಕತ್ತಾ)
ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ್, ನಾಗ್ಪುರ್ ಮತ್ತು ಮುಂಬೈ)
ಫೆಬ್ರವರಿ 20: ಸ್ಟೇಟ್ ಡೇ (ಐಜಾವ್ಲ್)
ಫೆಬ್ರವರಿ 26: ಹಜರತ್ ಅಲಿ ಹುಟ್ಟುಹಬ್ಬ (ಲಕ್ನೋ ಮತ್ತು ಕಾನ್ಪುರ್)
ಪ್ರದೇಶವಾರು ಹಬ್ಬ-ಹರಿದಿನಗಳಲ್ಲಿ ಪ್ರಾದೇಶಿಕ ಬ್ಯಾಂಕ್ಗಳ ರಜೆಯಾಗಿರುತ್ತದೆ. ಉಳಿದ ಪ್ರದೇಶ ಅಥವಾ ರಾಜ್ಯಗಳಲ್ಲಿ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ಗಳು ರಜೆ ಇದ್ದರೂ, ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕ್ಗಳು ಸಾಮಾನ್ಯವಾಗಿ ಈ ವೇಳೆಯೂ ಕಾರ್ಯನಿರ್ವಹಿಸುತ್ತವೆ. ಆದರೆ ಯಾವುದೇ ಅಡಚಣೆ ಉಂಟಾಗದಂತೆ ಮೊದಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು.
Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್, ಆಟೊಮೊಬೈಲ್ ವಲಯ ಜಿಗಿತ
Published On - 9:57 pm, Mon, 1 February 21