ಬ್ಯಾಂಕ್ ದರೋಡೆಗೆ ಬಂದ ಕಳ್ಳ ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಸತ್ತ: ಯಾಕೆ, ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Aug 11, 2020 | 5:11 PM

ಗಾಂಧಿನಗರ: ಬ್ಯಾಂಕ್​ ದರೋಡೆ ಮಾಡಲು ಬಂದ ಕಳ್ಳ ತನ್ನ ಕೊರಳನ್ನು ತಾನೇ ಕೊಯ್ದುಕೊಂಡಿರುವ ಸ್ವಾರಸ್ಯಕರ ಸಂಗತಿ ಗುಜರಾತ್​ನ ವಡೋದರದಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 30 ವರ್ಷದ ನಿತಿನ್​ ವೋರಾ ಮೃತ ದರೋಡೆಕೋರ. ನಗರದ ಸಂಗಮ್​ ರೋಡ್​ನಲ್ಲಿರುವ ಉಜ್ಜೀವನ್​ ಸಣ್ಣ ಹಣಕಾಸು ಬ್ಯಾಂಕ್​ನ ಶಾಖೆಗೆ ಎಂಟ್ರಿ ಕೊಟ್ಟ ಕಳ್ಳ ಸೀದಾ ನುಗ್ಗಿದ್ದು ಬ್ಯಾಂಕ್​ನ ನಗದು ಸಂಗ್ರಹಿಸುವ ಸ್ಟ್ರಾಂಗ್​ ರೂಮ್​ಗೆ. ಅಲ್ಲೇ ನೋಡಿ ಅವನ ಕರಾಮತ್ತು ಶುರುವಾಗಿದ್ದು. ತನ್ನ […]

ಬ್ಯಾಂಕ್ ದರೋಡೆಗೆ ಬಂದ ಕಳ್ಳ ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಸತ್ತ: ಯಾಕೆ, ಎಲ್ಲಿ?
Follow us on

ಗಾಂಧಿನಗರ: ಬ್ಯಾಂಕ್​ ದರೋಡೆ ಮಾಡಲು ಬಂದ ಕಳ್ಳ ತನ್ನ ಕೊರಳನ್ನು ತಾನೇ ಕೊಯ್ದುಕೊಂಡಿರುವ ಸ್ವಾರಸ್ಯಕರ ಸಂಗತಿ ಗುಜರಾತ್​ನ ವಡೋದರದಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 30 ವರ್ಷದ ನಿತಿನ್​ ವೋರಾ ಮೃತ ದರೋಡೆಕೋರ.

ನಗರದ ಸಂಗಮ್​ ರೋಡ್​ನಲ್ಲಿರುವ ಉಜ್ಜೀವನ್​ ಸಣ್ಣ ಹಣಕಾಸು ಬ್ಯಾಂಕ್​ನ ಶಾಖೆಗೆ ಎಂಟ್ರಿ ಕೊಟ್ಟ ಕಳ್ಳ ಸೀದಾ ನುಗ್ಗಿದ್ದು ಬ್ಯಾಂಕ್​ನ ನಗದು ಸಂಗ್ರಹಿಸುವ ಸ್ಟ್ರಾಂಗ್​ ರೂಮ್​ಗೆ. ಅಲ್ಲೇ ನೋಡಿ ಅವನ ಕರಾಮತ್ತು ಶುರುವಾಗಿದ್ದು. ತನ್ನ ಬ್ಯಾಗ್​ನಲ್ಲಿ ತಂದಿದ್ದ ವಿದ್ಯುತ್​ ಚಾಲಿತ ಕಟರ್​ನ ಬಳಸಿ ಸ್ಟ್ರಾಂಗ್​ ರೂಮ್​ನ ಸ್ಟೀಲ್​ ಗೋಡೆ ಭೇದಿಸಲು ಮುಂದಾದ.

ಆದರೆ, ಈ ನಡುವೆ ಕಟರ್​ನ ಕರೆಂಟ್​ ವೈಯರ್​ ಪ್ಲಗ್​ನಿಂದ ಹೊರಬಂದುಬಿಟ್ಟಿತು. ಅದನ್ನ ಸರಿ ಮಾಡೋಕೆ ನಿತಿನ್​ ಹೋಗಿದ್ದಾನೆ. ವೈಯರ್​ನ ಮತ್ತೆ ಸಾಕೆಟ್​ಗೆ ಸಿಕ್ಕಿಸಿ ಮತ್ತೆ ಸ್ಟ್ರಾಂಗ್​ ರೂಮ್​ನತ್ತ ಅದರ ಕಿರಿದಾದ ಓಣಿ ಮುಖಾಂತರ ಹೋದನಂತೆ. ಈ ವೇಳೆ ಇದಕ್ಕಿದಂತೆ ಆನ್​ ಆದ ಕಟರ್​ ಕಿರಿದಾದ ಓಣಿಯ ಗೋಡೆಗೆ ತಗಲಿ ನಿತಿನ್​ ಕೊರಳಿಗೂ ಬಡಿದಿದೆ. ಕಟರ್​ನ ರಭಸಕ್ಕೆ ಕಳ್ಳನ ಕುತ್ತಿಗೆ ಸೀಳಿ ಬಂದಿದೆ.

ಇನ್ನು ಇಡೀ ಪ್ರಕರಣವನ್ನ ಸಿಸಿಟಿವಿ ಮುಖಾಂತರ ಗಮನಿಸಿದ್ದ ಬ್ಯಾಂಕ್​ನ ಭದ್ರತಾ ಸಿಬ್ಬಂದಿ ಕೂಡಲೇ ಮ್ಯಾನೇಜರ್​ಗೆ ವಿಷಯ ತಿಳಿಸಿದರಂತೆ. ಸ್ಥಳಕ್ಕೆ ಆಗಮಿಸಿದ ಬ್ಯಾಂಕ್​ ಮ್ಯಾನೇಜರ್​ಗೆ ಕಂಡಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿತಿನ್​. ಆದ್ರೆ, ಅಷ್ಟೊತ್ತಿಗೆ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇದೀಗ, ಪೊಲೀಸರು ಮೃತ ಕಳ್ಳನ ವಿರುದ್ಧ ದೂರು ದಾಖಲಿಸಿಕೊಂಡು ಮೃತದೇಹವನ್ನ ಆತನ ಕುಟುಂಬಸ್ಥರಿಗೆ ನೀಡಿದ್ದಾರೆ.